Advertisement
ಪಟ್ಟಣದ ಭೂತಪುರ ಕಲ್ಯಾಣ ಮಂಟಪದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ, ಧರ್ಮಸಿಂಗ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಕ್ಷರ ಆವಿಷ್ಕಾರ ಮಿಷನ್- 100 ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
Related Articles
ತಾಪಂ ಅಧ್ಯಕ್ಷೆ ಲಕ್ಷಿ¾à ಜೋತೆಪ್ಪಗೋಳ, ಜೇವರ್ಗಿ ತಾಪಂ ಇಒ ವಿಲಾಸರಾಜ, ಯಡ್ರಾಮಿ ತಾಪಂ ಇಒ ಧನಕರ್ ಬೇರಾಳೆ, ಮುಖಂಡರಾದ ಸಂಗನಗೌಡ ಗುಳಾÂಳ, ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ಶಿವುಕುಮಾರ ಕಲ್ಲಾ, ಮರೆಪ್ಪ ಸರಡಗಿ ಇತರರು ಇದ್ದರು.
Advertisement
ನಿಧಾನಗತಿ ಮಕ್ಕಳೇ ಗುರಿ: ಪ್ರೊ| ಆರ್. ನಾಗರಾಜಯ್ಯ ಎಸ್ಸೆಸ್ಸೆಲ್ಸಿ ಮಕ್ಕಳು ಮತ್ತು ಶಿಕ್ಷಕರನ್ನು ಕೇಂದ್ರೀಕರಿಸಿಕೊಂಡೇ “ಅಕ್ಷರ ಆವಿಷ್ಕಾರ ಮಿಷನ್-100′ ಕಾರ್ಯ ನಿರ್ವಹಿಸಲಿದೆ. ಎಲ್ಲ ಮಕ್ಕಳಲ್ಲಿನ ಕಲಿಕಾ ಸಾಮರ್ಥ್ಯದ ಮೇಲೆ “ವೇಗವಾಗಿ ಕಲಿಯುವ ಮಕ್ಕಳು’, “ಸಾಮಾನ್ಯ ಮಕ್ಕಳು’ ಹಾಗೂ “ಕಲಿಕೆಯಲ್ಲಿ ನಿಧಾನಗತಿ ಮಕ್ಕಳು’… ಹೀಗೆ ಮೂರು ಗುಂಪುಗಳಾಗಿ ವಿಂಗಡಿಸಲಾಗುತ್ತದೆ.
ನಿಧಾನಗತಿ ಮಕ್ಕಳೇ ನಮ್ಮ ಗುರಿಯಾಗಿದ್ದು, ನಾವು ಯಾರನ್ನೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳೆಂದು ಕರೆಯುವುದಿಲ್ಲ. ರೆಯಲು ಸಾಧ್ಯವಿಲ್ಲ ಎಂದು ಯೋಜನೆ ಸಲಹೆಗಾರ ಪ್ರೊ| ಆರ್.ನಾಗರಾಜಯ್ಯ ಹೇಳಿದರು. ಸರ್ಕಾರ ಮತ್ತು ಸರ್ಕಾರೇತರ ಎರಡು ಶಾಲೆಗಳನ್ನು ಗಣನೆಗೆ ತೆಗೆದುಕೊಂಡು ಕಳೆದ ಫಲಿತಾಂಶದಲ್ಲಿ “ಬಿ’ ಮತ್ತು “ಸಿ’ ಗ್ರೇಡ್ ಪಡೆದ ಶಾಲೆಗಳತ್ತ ಹೆಚ್ಚಿನ ಗಮನ ಕೊಡಲಾಗುತ್ತದೆ. ಇಲ್ಲಿನ ಶಿಕ್ಷಕರಿಗೂ ವಿಶೇಷ ತರಬೇತಿ ನೀಡಲಾಗುತ್ತದೆ. ಇದರ ಜತೆಗೆ ಸಾಮಾನ್ಯ ಮಕ್ಕಳು ಮತ್ತು ಕಲಿಕೆಯಲ್ಲಿ ನಿಧಾನಗತಿ ಮಕ್ಕಳನ್ನು ಪ್ರಧಾನವಾಗಿ ಇಟ್ಟುಕೊಂಡು ವಿಶೇಷ ಪಠ್ಯ ಮತ್ತು ಭೋದನೆ ಮೂಲಕ ಫಲಿತಾಂಶ ಹೆಚ್ಚಿಸುವುದು ಯೋಜನೆ ಉದ್ದೇಶವಾಗಿದೆ. ಇದೇ ಮಾದರಿ ಅನುಸಾರ ಕಲಬುರಗಿಯಂತೆ ಹಿಂದುಳಿದ ಹಣೆ ಪಟ್ಟಿ ಹೊತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 20ನೇ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲಾಗಿದೆ ಎಂದು ತಿಳಿಸಿದರು.