Advertisement

ಬೆಲೆ ಏರಿಕೆ ಬಿಸಿ; ಖಾಲಿ ಸಿಲಿಂಡರ್ ಬೆನ್ನಿಗೆ ಕಟ್ಟಿಕೊಂಡು ಕಲಾಪದಲ್ಲಿ ವಿಪಕ್ಷಗಳ ಪ್ರತಿಭಟನೆ

10:13 AM Feb 14, 2020 | Nagendra Trasi |

ಲಕ್ನೋ: ಉತ್ತರಪ್ರದೇಶ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನದ ಮೊದಲ ದಿನವಾದ ಗುರುವಾರ ವಿರೋಧ ಪಕ್ಷದ ಶಾಸಕರು ರಾಜ್ಯಪಾಲರ ಭಾಷಣಕ್ಕೆ ತೀವ್ರ ಅಡ್ಡಿಪಡಿಸಿದ ಘಟನೆ ನಡೆಯಿತು. ಪೌರತ್ವ ತಿದ್ದುಪಡಿ ಕಾಯ್ದೆ, ಕಾನೂನು ಸುವ್ಯವಸ್ಥೆ, ಉದ್ಯೋಗ ಹಾಗೂ ಎಲ್ ಪಿಜಿ ಬೆಲೆ ಏರಿಕೆ ವಿರುದ್ಧ ಘೋಷಣೆ ಕೂಗಿರುವುದಾಗಿ ವರದಿ ತಿಳಿಸಿದೆ.

Advertisement

ಗವರ್ನರ್ ಆನಂದಿಬೆನ್ ಪಾಟೀಲ್ ಅವರು ಸದನವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ಶಾಸಕರು ಸದನದ ಮಧ್ಯಭಾಗಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು. ಕೆಲವರು ನೆಲದ ಮೇಲೆ ಕುಳಿತು ಘೋಷಣೆ ಕೂಗಿರುವುದಾಗಿ ವರದಿ ವಿವರಿಸಿದೆ.

ಕೆಲವು ಶಾಸಕರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಿತ್ತಿಚಿತ್ರ ಪ್ರದರ್ಶಿಸಿದ್ದು, ಇನ್ನುಳಿದ ಪ್ರತಿಪಕ್ಷದ ಶಾಸಕರು ಬೆನ್ನಿಗೆ ಖಾಲಿ ಎಲ್ ಪಿಜಿ ಸಿಲಿಂಡರ್ ಕಟ್ಟಿಕೊಂಡು ಘೋಷಣೆ ಕೂಗಿರುವುದಾಗಿ ವರದಿ ತಿಳಿಸಿದೆ. ವಿಪಕ್ಷಗಳ ಗದ್ದಲ, ಕೋಲಾಹಲವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವೀಕ್ಷಿಸುತ್ತಿದ್ದ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಕಲಾಪ ಬಹಿಷ್ಕರಿಸಿ ಹೊರಬಂದ ಸಮಾಜವಾದಿ ಮತ್ತು ಕಾಂಗ್ರೆಸ್ ಶಾಸಕರು ವಿಧಾನಸಭೆಯ ಹೊರಗೆ ಪ್ರತಿಭಟನೆ ಮುಂದುವರಿಸಿದ್ದರು. ಕಾಂಗ್ರೆಸ್ ಶಾಸಕರು ಕೈಗಾಡಿ ತಳ್ಳುವವರಿಗೆ ಟೊಮ್ಯಾಟೊ ಹಂಚಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next