ಚನ್ನಪಟ್ಟಣ: ಸರ್ಕಾರ ಪ್ರಸಕ್ತ ಸಾಲಿನಿಂದ ಆರಂಭಿಸಿ ರುವ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಪೈಪೋಟಿ ಏರ್ಪಟ್ಟಿದೆ. ನಿಗದಿಗಿಂತ ಹೆಚ್ಚಿನ ಮಕ್ಕಳು ದಾಖಲಾತಿಗೆ ಬರುತ್ತಿದ್ದು ಶಾಲೆಗಳ ಮುಖ್ಯ ಶಿಕ್ಷಕ ರಿಗೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹೊಸ ತಲೆನೋವು ಆರಂಭವಾಗಿದೆ.
Advertisement
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯು ತ್ತಿದ್ದ ಪೋಷಕರು ಆಂಗ್ಲ ಮಾಧ್ಯಮ ಶಾಲೆ ಆರಂಭದ ಸುದ್ದಿ ತಿಳಿಯುತ್ತಿದ್ದಂತೆಯೇ ಪೋಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್ನಿಂದ ಬಿಡಿಸಿ ಸರ್ಕಾರಿ ಶಾಲೆಗೆ ಕರೆತರುತ್ತಿದ್ದಾರೆ. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಹಾಗೂ 1ನೇ ತರಗತಿ ದಾಖ ಲಾತಿಗೆ ಅವಕಾಶವಿದ್ದು, ಆಂಗ್ಲಮಾಧ್ಯಮ ಶಾಲೆ ಗಳಲ್ಲಿ 1ನೇ ತರಗತಿಗೆ ದಾಖಲಾತಿ ಆರಂಭವಾಗಿದೆ.
Related Articles
Advertisement
ಕಾನ್ವೆಂಟ್ ಬಿಡಿಸಿದ್ರು: ಪೋಷಕರು ತಮ್ಮ ಗ್ರಾಮ ದಲ್ಲೇ ಆಂಗ್ಲ ಮಾಧ್ಯಮ ಶಾಲೆ ಆರಂಭವಾಗಿದ್ದರಿಂದ, ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಖರ್ಚಿಲ್ಲದೆ ಆಂಗ್ಲ ಮಾಧ್ಯಮ ಶಿಕ್ಷಣ ಸಿಗಲಿದೆ ಎಂಬುದನ್ನು ಅರಿತು, ಕಾನ್ವೆಂಟ್‌ಗಳಲ್ಲಿದ್ದ ತಮ್ಮ ಮಕ್ಕಳನ್ನು ವಾಪಸ್ ಕರೆತಂದಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.
30ಕ್ಕೆ ನಿಗದಿ, ಅಸಮಾಧಾನ: ಶಾಲೆಯಲ್ಲಿ ದಾಖಲಾತಿ ಸಂಖ್ಯೆಯನ್ನು 30ಕ್ಕೆ ನಿಗದಿ ಪಡಿಸಿದ್ದಕ್ಕೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲೇ ಓದಿಸಬೇ ಕೆಂಬ ಮಹತ್ವಾಕಾಂಕ್ಷೆಯಿಂದ ಎಷ್ಟೇ ಸಮಸ್ಯೆ ಎದುರಾಗುತ್ತಿದ್ದರೂ ಪಟ್ಟಣಕ್ಕೆ ಕಳುಸುತ್ತಿದ್ದರು. ಇದೀಗ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭ ವಾಗುತ್ತಿರುವುದು ಸಂತಸ ವನ್ನುಂಟು ಮಾಡಿದ್ದು, ಮಕ್ಕಳ ದಾಖಲಾತಿ ನಿಗದಿಪಡಿಸಿರು ವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಒಂದೆಡೆ ದಾಖಲಾತಿ ಕೊರತೆಯಿಂದಾಗಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತ ತಲುಪುತ್ತಿದ್ದರೆ ಆಂಗ್ಲಮಾಧ್ಯಮ ಶಾಲೆಗಳ ದಾಖಲಾತಿಗೆ ಪೈಪೋಟಿ ಆರಂಭವಾಗಿದೆ. ಸರ್ಕಾರ ಹೆಚ್ಚುವರಿ ತರಗತಿಗಳನ್ನು ಮಂಜೂರು ಮಾಡಿ ಹೆಚ್ಚು ದಾಖಲಾತಿ ಹಾಗೂ ಇನ್ನಷ್ಟು ಆಂಗ್ಲ ಶಾಲೆಗಳನ್ನು ಆರಂಭಿಸಲು ಅವಕಾಶ ನೀಡಿದರೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲಿವೆ.