Advertisement

ರೈಲಿನಲ್ಲಿ ಕುಳಿತಿದ್ದ ಸ್ಥಳಕ್ಕೆ  ಬರಲಿದೆ ಗೊಂಬೆ

01:54 PM Mar 26, 2022 | Team Udayavani |

ಬೆಂಗಳೂರು: ಚನ್ನಪಟ್ಟಣದ ಮರದ ಆಟಿಕೆಗಳು ಸಿಲಿಕಾನ್‌ ಸಿಟಿಗೆ ಲಗ್ಗೆಯಿಟ್ಟಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ “ಚನ್ನಪಟ್ಟಣ ಆಟಿಕೆ’ ಮಳಿಗೆ ತೆರೆಯಲಾಗಿದೆ.

Advertisement

ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಈ ಹಿಂದೆ ಚನ್ನಪಟ್ಟಣದ ಗೊಂಬೆಗಳ ಪ್ರದರ್ಶನದ ಮಳಿಗೆ ಪ್ರಾರಂಭಿಸಲಾಗಿತ್ತು. ಇಲ್ಲಿ ಖರೀದಿಗೆ ಅವಕಾಶವಿಲ್ಲ. ಬೆಂಗಳೂರು ನಗರದಲ್ಲಿ ಸ್ಥಳೀಯ ಕುಶಲ ಕರ್ಮಿಗಳು ತಮ್ಮ ಉತ್ಪನ್ನವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾರಾಟ ಮಾಡಲು ನೈಋತ್ಯ ರೈಲ್ವೆಯಲ್ಲಿ ಅವಕಾಶ ನೀಡಿದೆ. ಗುಲಗಂಜಿ ಗಾತ್ರದ ಗೊಂಬೆಗಳಿಂದ ಹಿಡಿದು ದೊಡ್ಡ ಕೆತ್ತನೆಯ ಗೊಂಬೆಗಳಿವೆ. ಬೆಲೆ 50 ರೂ.ನಿಂದ ಪ್ರಾರಂಭಗೊಂಡು ಗ್ರಾಹಕರ ಬೇಡಿಕೆ ಮೇರೆಗೆ 10,000 ರೂ. ಮುಖ ಬೆಲೆಯ ಆಟಿಕೆಗಳು ಅಗತ್ಯಕ್ಕೆ ತಕ್ಕಂತೆ ತಯಾರಿಸಿ ಕೊಡಲಿದ್ದಾರೆ.

ಮರದ ಬುಗುರಿ, ಬ್ಯಾಂಡ್‌ ಸೆಟ್‌, ದಿಬ್ಬಣ ತಂಡದ ಆಟಿಕೆ ಗೊಂಬೆಗಳು, ದಸರಾ ಗೊಂಬೆಗಳು, ವಿವಿಧ ಭಂಗಿಯ ವಿಗ್ರಹಗಳು, ಗೃಹಾಲಂಕಾರದ, ಗೃಹೋಪ ಯೋಗಿ ವಸ್ತುಗಳು, ಮರದ ಆಭರಣಗಳು ಸೇರಿದಂತೆ ನೂರಾರು ಆಕಾರದ ಆಟಿಕೆಗಳು ಲಭ್ಯವಿದೆ. ರೈಲು ನಿಲ್ದಾಣವನ್ನು ಪ್ರವೇಶಿದ ತತ್‌ಕ್ಷಣವೇ ಪ್ರಯಾಣಿಕರ ಬಳಿಗೆಗೆ ಹೋಗಿ ಆಟಿ ಮಾರಾಟ ಮಾಡಲು ಅವಕಾಶವಿದೆ. ಇದರಿಂದ ಹೆಚ್ಚಿನ ಆಟಿಕೆಗಳು ಮಾರಾಟವಾಗುವ ನಿರೀಕ್ಷೆ ಇದೆ.

15 ದಿನಗಳ ಬಗ್ಗೆ ಜನರ ಪ್ರತಿಕ್ರಿಯೆಗೆ ಅನುಗುಣವಾಗಿ ಮಳಿಗೆಯನ್ನು ಮುಂದುವರಿಸುವ ನಿರ್ಧಾರವನ್ನು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಮಾಡಲಿದೆ. ಚನ್ನಪಟ್ಟಣದಲ್ಲಿ ತಯಾರಿಸಲಾದ ಹಾಗೂ ಭೌಗೋಳಿಕ ಸೂಚಕ (ಜಿಐ) ಟ್ಯಾಗ್‌ ಹೊಂದಿರುವ ವಿಶೇಷ ಮರದ ಆಟಿಕೆಗಳು ಮತ್ತು ಗೊಂಬೆಗಳು ಮಾತ್ರ ಇಲ್ಲಿ ಲಭ್ಯವಿರಲಿವೆ.

ಚನ್ನಪಟ್ಟಣ ಕರಕುಶಲ ಕಲಾವಿದರ ಸಂಘಕ್ಕೆ ಸಂಬಂಧಿಸಿದ ಸ್ಥಳೀಯ ಕುಶಲಕರ್ಮಿ ವಿ.ಪ್ರಕಾಶ್‌ ಅವರಿಗೆ ಚನ್ನಪಟ್ಟಣದ ಆಟಿಕೆಗಳ ಪ್ರಚಾರಕ್ಕಾಗಿ ಬೆಂಗಳೂರು ವಿಭಾಗವು ಪ್ರಾಯೋಗಿಕ ಆಧಾರದ ಮೇಲೆ ಮಳಿಗೆಯನ್ನು ಮಂಜೂರು ಮಾಡಿದೆ.

Advertisement

ಮಳಿಗೆಗೆ ಚಾಲನೆ ನೀಡಿ ಮಾತನಾಡಿದ ಬೆಂಗ ಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್‌ ಸಿಂಗ್‌, 2022-23 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ “ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯ’ ಭಾಗವಾಗಿ ಇದನ್ನು ಪ್ರಾರಂಭಿಸಲಾಗು ತ್ತಿದೆ. ಇದು ರೈಲು ನಿಲ್ದಾಣಗಳನ್ನು ಸಾಂಪ್ರದಾಯಿಕ ವಾಗಿ ಪ್ರದರ್ಶಿಸುವ ಸ್ಥಳಗಳಾಗಿ ಬಳಸಿಕೊಳ್ಳಲು ಪ್ರಸ್ತಾಪಿಸಿದೆ.

ಕರಕುಶಲ ವಸ್ತುಗಳು, ಜವಳಿ ಮತ್ತು ಭೌಗೋಳಿಕ ಸೂಚಕ ಟ್ಯಾಗ್‌ ಮಾಡಿದ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹಕವಾಗಿದೆ ಎಂದು ತಿಳಿಸಿದರು. ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ.ಅನುಪ್‌ ದಯಾನಂದ ಸಾಧು, ಹೆಚ್ಚುವರಿ ವಿಭಾಗೀಯ ರೈಲ್ವೇ ಮ್ಯಾನೇಜರ್‌ ಕುಸುಮಾ ಹರಿಪ್ರಸಾದ್‌, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ. ಎ.ಎನ್‌. ಕೃಷ್ಣಾ ರೆಡ್ಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next