Advertisement

ಡಿ.8ರಿಂದ ಚನ್ನಪಟ್ಟಣ ತಾಲೂಕು ಮಟ್ಟದ ಕನಕೋತ್ಸವ

02:30 PM Nov 29, 2022 | Team Udayavani |

ಚನ್ನಪಟ್ಟಣ: ಡಿಕೆಎಸ್‌ ಚಾರಿಟಬಲ್‌ ಇನ್ಸ್ಟಿಟ್ಯೂಟ್‌ ಟ್ರಸ್ಟ್‌, ವಿವಿಧ ಸಂಘ- ಸಂಸ್ಥೆಗಳು ಹಾಗೂ ಸಾರ್ವಜನಿಕ ಸಹಯೋಗದಲ್ಲಿ ಕನಕಪುರದಲ್ಲಿ ಅದ್ದೂರಿ ಕನಕೋತ್ಸವ- 2022 ಕಾರ್ಯಕ್ರಮ ನಡೆಯಲಿದೆ. ಇದರ ಪ್ರಯುಕ್ತ ಡಿ.8, 9, 10ರಂದು ಚನ್ನಪಟ್ಟಣ ತಾಲೂಕು ಮಟ್ಟದ ವಾಯ್ಸ ಆಫ್ ಕನಕೋತ್ಸವ ನಗರದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದು ಕನಕೋತ್ಸವ ಸಾಂಸ್ಕೃತಿಕ ಸಮಿತಿ ಸಂಚಾಲಕ ಕಬ್ಟಾಳೇಗೌಡ ತಿಳಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷ ಕನಕೋತ್ಸವವನ್ನು ಡಿಸೆಂಬರ್‌ನಲ್ಲಿ ಆಚರಿಸಲಾಗುತ್ತಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಕನಕೋತ್ಸವ ಆಚರಣೆ ಮಾಡುತ್ತಿದ್ದೇವೆ. ಆರಂಭದ ದಿನಗಳಲ್ಲಿ ಕನಕಪುರ ತಾಲೂಕಿಗೆ ಸೀಮಿತವಾಗಿದ್ದ ಕನಕೋತ್ಸವವನ್ನು ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ವಿಸ್ತರಿಸಿ, ಕಾರ್ಯಕ್ರಮ ಆಯೋಜಿಸಲ್ಪಡುತ್ತಿದೆ. ಡಿಸೆಂಬರ್‌ ಮೊದಲ ವಾರದಲ್ಲಿ ರಾಮನಗರ ಜಿಲ್ಲೆಯ ಹೋಬಳಿ, ತಾಲೂಕು ಮಟ್ಟದಲ್ಲಿ ಹಲವು ಸ್ಪರ್ಧೆ ನಡೆಯಲಿವೆ. ಹೋಬಳಿ ಮಟ್ಟದಿಂದ ತಾಲೂಕು ಮಟ್ಟಕ್ಕೆ ಹಾಗೂ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟದಲ್ಲಿ ಕ್ರೀಡಾಕೂಟಗಳು ನಡೆಯಲಿವೆ ಎಂದು ತಿಳಿಸಿದರು.

ವಿವಿಧ ಸ್ಪರ್ಧೆ ಆಯೋಜನೆ: ವಾಯ್ಸ ಆಫ್ ಕನಕೋತ್ಸವ-2022(ಗಾಯನ ಸ್ಪರ್ಧೆ) ಚಲನಚಿತ್ರಗೀತೆಗೆ ಸಮೂಹ ನೃತ, ಜನಪದ ಗೀತೆ, ರಂಗ ಗೀತೆಗಳ ಸ್ಪರ್ಧೆ ನಡೆಯಲಿದೆ. ಕ್ರೀಡಾಕೂಟದಲ್ಲಿ ವಾಲಿಬಾಲ್‌, ಕಬಡ್ಡಿ, ಥ್ರೋ ಬಾಲ್‌, ಷಟಲ್‌ ಬ್ಯಾಡ್ಮಿಂಟನ್‌, ಟೆನ್ನಿಸ್‌, ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ. ಕನಕಪುರ ತಾಲೂಕು ವ್ಯಾಪ್ತಿಯಲ್ಲಿ ಹಲವು ಸ್ಪರ್ಧೆ ಆಯೋಜಿಸಿದ್ದು, ರಂಗೋಲಿ ಸ್ಪರ್ಧೆ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಮಹಿಳೆಯರ ಕೇಶವಿನ್ಯಾಸ ಸ್ಪರ್ಧೆ, ದಂಪತಿಗಳಿಗೆ ಸಾಂಪ್ರಾದಾಯಕ ಉಡುಗೆ ಸ್ಪರ್ಧೆ, ರಾಸುಗಳ ಸ್ಪರ್ಧೆ, ಜಾನಪದ ಕಲಾಮೇಳ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.

ಎಲ್ಲರಿಗೂ ಪ್ರಮಾಣಪತ್ರ ವಿತರಣೆ: ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಗುತ್ತದೆ. ವಿಜೇತರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ, ಆಕರ್ಷಕ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ಹೋಬಳಿ, ತಾಲೂಕು, ಮತ್ತು ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ನಿಯಮಗಳು, ಸ್ಪರ್ಧೆ ನಡೆಯುವ ಸ್ಥಳ, ಮತ್ತು ದಿನಾಂಕವನ್ನು ಕರಪತ್ರಗಳ ಮೂಲಕ ಪ್ರಚಾರ ಮಾಡಲಾಗುತ್ತದೆ ಎಂದು ಹೇಳಿದರು.

ಕೋವಿಡ್‌ ಸಮಯದಲ್ಲಿ ಜನರಿಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೆ ಸನ್ಮಾನ ಮಾಡಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗುರುತಿಸಿ, ಸನ್ಮಾನಿಸಲಾಗುತ್ತಿದೆ. ಕೋವಿಡ್‌ ಕಾಲಘಟ್ಟದಲ್ಲಿ ಆಹಾರ ಕಿಟ್‌ ವಿತರಣೆ, ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ, ಆ್ಯಂಬುಲೆನ್ಸ್‌ ಕೊಡುಗೆ ಹಾಗೂ ಐತಿಹಾಸಿಕ ಮೇಕೆದಾಟು ಪಾದಯಾತ್ರೆ ಯಶಸ್ಸಿಗೆ ಸಹಕರಿಸಿದವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.

Advertisement

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಪ್ರಮೋದ್‌, ಸುನಿಲ್‌ ಕುಮಾರ್‌, ಡಿ.ಕೆ.ಕಾಂತರಾಜು, ಕಾಂಗ್ರೆಸ್‌ ಮುಖಂಡರಾದ ಬೋರ್‌ ವೆಲ್‌ ರಂಗನಾಥ್‌, ಸಿ.ವಿ.ಚಂದ್ರಸಾಗರ್‌, ಪಿ.ಡಿ.ರಾಜು, ವಿರುಪಾಕ್ಷಿಪುರ ಶ್ರೀನಿವಾಸ್‌, ಸುಜಯ್‌ ಕುಮಾರ್‌, ಸುಣ್ಣಘಟ್ಟ ಪಾಪಣ್ಣ, ಕನಕಪುರದ ರಾಯಸಂದ್ರ ರವಿ, ರಾಜೇಂದ್ರ, ಸತೀಶ್‌, ಪುರುಷೋತ್ತಮ್‌ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next