Advertisement
ಪಟ್ಟಣದ ತಟ್ಟೆಕರೆ ಬಳಿಯ 14 ಎಕರೆ ಜಮೀನನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಈ ಹಿಂದೆ ಕಂದಾಯ ಇಲಾಖೆ ಮಂಜೂರು ಮಾಡಿತ್ತಾದರೂ, ಆ ಜಾಗದ ವಿವಾದ ಇದುವರೆಗೂ ಬಗೆಹರಿಯದ ಕಾರಣ ಕ್ರೀಡಾಂಗಣ ನಿರ್ಮಾಣದ ಕನಸು ಕಂಡಿದ್ದ ಸಾವಿರಾರು ಕ್ರೀಡಾಪಟುಗಳ ನಿರೀಕ್ಷೆ ಹುಸಿಯಾಗಿದೆ.
Related Articles
Advertisement
ಕ್ರೀಡಾಂಗಣ ನಿರ್ಮಾಣ ಕನಸು ಹೊತ್ತು ಕಾಯುತ್ತಿ ರುವ ತಾಲೂಕಿನ ನೂರಾರು ಮಂದಿ ಕ್ರೀಡಾಪಟುಗಳ ಬವಣೆ ತಪ್ಪಿಸಲು ಈಗಲಾದರೂ ಸಾಧ್ಯವಾಯಿತಲ್ಲ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಮೂಲ ಉದ್ದೇಶವೇ ತಣ್ಣಗಾದದ್ದು ಕ್ರೀಡಾಪಟುಗಳ ನಿರಾಸೆಗೆ ಕಾರಣವಾಗಿದೆ.
ಈ ಬಗ್ಗೆ ಸಂಬಂಧಿಸಿದ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಕ್ರೀಡಾ ಇಲಾಖೆ ಗಮನಹರಿಸಿ, ಸಮಸ್ಯೆಗಳನ್ನು ಸರಿಪಡಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಮುಂದಾಗಬೇಕಿದೆ.
ನೆರವೇರದ ಉದ್ದೇಶ : ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ಉಸ್ತುವಾರಿ ಸಚಿವರಾಗಿದ್ದ ಸಮಯದಲ್ಲಿ ವಿವಾದಗಳನ್ನು ಶೀಘ್ರವಾಗಿ ಬಗೆಹರಿಸಿ ಕ್ರೀಡಾಂಗಣ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಆದೇಶಿಸಿದ್ದರಾದರೂ, ನಂತರದ ದಿನಗಳಲ್ಲಿ ಈ ಬಗ್ಗೆ ಪ್ರಸ್ತಾಪವಾಗದಿರುವುದು ಸಮಸ್ಯೆ ಜಟಿಲವಾಗಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಕಂದಾಯ ಇಲಾಖೆಯ ಉನ್ನತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳೇ ಜಾಗವನ್ನು ಮಂಜೂರು ಮಾಡಿದ್ದರೂ, ಇದುವರೆಗೂ ಉದ್ದೇಶ ನೆರವೇರುತ್ತಿಲ್ಲ.
ಜನಪ್ರತಿನಿಧಿ ಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕ್ರೀಡಾಂಗಣಕ್ಕೆ ನಿಗದಿಪಡಿಸಿರುವ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಇದುವರೆಗೂ ಆಗಿಲ್ಲ. ಮಾಜಿ ಮುಖ್ಯಮಂತ್ರಿಗಳು, ಕ್ಷೇತ್ರದ ಶಾಸಕರಾಗಿರುವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಪ್ರಭಾವಿ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಮುಖಂಡ ಪುಟ್ಟಣ್ಣ, ಉಸ್ತುವಾರಿ ಸಚಿವ ಡಾ. ಅಶ್ವತ್ಥನಾರಾಯಣ ಅವರಿಗೆ ನಿಜಕ್ಕೂ ಕ್ರೀಡಾಕ್ಷೇತ್ರದ ಬಗ್ಗೆ ಆಸಕ್ತಿಯಿದ್ದರೆ ಕೂಡಲೇ ಒತ್ತುವರಿಗಳನ್ನು ತೆರವುಗೊಳಿಸಿ, ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಬೇಕು. ಖಾಸಗಿ ವ್ಯಕ್ತಿ ತಮ್ಮದೆನ್ನುವ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕು. -ಪಿ.ಜೆ.ಗೋವಿಂದರಾಜು, ಅಥ್ಲೆಟಿಕ್ಸ್ ಕ್ರೀಡಾಪಟು.
ಕ್ರೀಡಾಂಗಣ ನಿರ್ಮಾಣಕ್ಕಾಗಿ ಸದ್ಯ9 ಎಕರೆ ಇಲಾಖೆ ಸುಪರ್ದಿಗೆ ಬಂದಿದ್ದು, ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತೆರವು ಗೊಳಿಸಿ ಕೊಡುವಂತೆ ಉಪವಿಭಾಗಾ ಕಾರಿಗಳು, ತಹಶೀಲ್ದಾ ರರಿಗೆ ಮನವಿ ಸಲ್ಲಿಸಿದ್ದೇವೆ. ಒತ್ತುವರಿ ತೆರವಾದರೆ ಶೀಘ್ರ ಹಿಂದಿನ ಯೋಜನೆಯಂತೆ ಕ್ರೀಡಾಂಗಣ ನಿರ್ಮಾಣ ಮಾಡಲು ಇಲಾಖೆ ಮುಂದಾಗಲಿದೆ. -ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ.
-ಎಂ.ಶಿವಮಾದು