Advertisement

ಮನ್ ಕೀ ಬಾತ್ ನಲ್ಲಿ ಚೆನ್ನಪಟ್ಟಣದ ಗೊಂಬೆಗಳ ಕೊಂಡಾಡಿದ ಪ್ರಧಾನಿ ಮೋದಿ

03:30 PM Aug 30, 2020 | keerthan |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು 68ನೇ ಆವೃತ್ತಿಯ  ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಸ್ಥಳೀಯ ಉದ್ದಿಮೆಗಳಿಗಳ ಬೆಳವಣಿಗೆಯ ಬಗ್ಗೆ ಪ್ರಸ್ಥಾಪಿಸಿದ ಅವರು ಕರ್ನಾಟಕದ ಚೆನ್ನಪಟ್ಟಣದ ಗೊಂಬೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ದೇಶಿಯ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಸ್ಥಳೀಯ ಆಟಿಕೆಗಳ ಶ್ರೀಮಂತ ಸಂಪ್ರದಾಯವಿದೆ. ಉತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿರುವ ಅನೇಕ ಪ್ರತಿಭಾವಂತ ಮತ್ತು ನುರಿತ ಕುಶಲಕರ್ಮಿಗಳಿದ್ದಾರೆ. ಭಾರತದ ಕೆಲವು ಭಾಗಗಳಿಂದು ಆಟಿಕೆ ಸಮೂಹಗಳಾಗಿ ಬೆಳೆಯುತ್ತಿವೆ. ಅಂದರೆ ಆಟಿಕೆಗಳ ಕೇಂದ್ರಗಳಾಗಿ ರೂಪುಗೊಳ್ಳುತ್ತಿವೆ. ಉದಾಹರಣೆಗೆ ಕರ್ನಾಟಕದ ಚನ್ನಪಟ್ಟಣ, ಆಂಧ್ರಪ್ರದೇಶದ ಕೊಂಡಪಲ್ಲಿ, ತಮಿಳುನಾಡಿನ ತಂಜಾವೂರು, ಅಸ್ಸಾಂನ ಧುಬ್ರಿ, ಉತ್ತರ ಪ್ರದೇಶದ ವಾರಣಾಸಿ ಆಟಿಕೆಗಳ ಕೇಂದ್ರಗಳಾಗಿವೆ. ಇಷ್ಟೇ ಅಲ್ಲ, ಇನ್ನು ಅನೇಕ ಹೆಸರುಗಳನ್ನು ಭಾರತಲ್ಲಿ ಎಣಿಸಬಹುದಾಗಿದೆ ಎಂದರು.

ಇಂದಿನ ಕಂಪ್ಯೂಟರ್​ ಮತ್ತು ಸ್ಮಾರ್ಟ್​ಫೋನ್​ ಯುಗದಲ್ಲಿ ಕಂಪ್ಯೂಟರ್​ ಗೇಮ್​ಗಳು ಬಹು ದೊಡ್ಡ ಟ್ರೆಂಡ್​ ಆಗಿವೆ. ಇಂತಹ ಗೇಮ್​ಗನ್ನು ಮಕ್ಕಳು ಆಡುತ್ತಾರೆ ಮತ್ತು ಅದರಂತೆಯೇ ಬೆಳೆಯುತ್ತಾರೆ. ಆದರೆ, ಈ ಗೇಮ್​ಗಳಲ್ಲಿ ಇರುವ ವಿಷಯಾಂಶಗಳು ಸಹ ಬಹುತೇಕ ಹೊರಗಿನ ಬಂದವುಗಳಾಗಿವೆ. ವರ್ಚುವಲ್​ ಆಟಗಳಾಗಿರಲಿ ಅಥವಾ ಆಟಿಕೆಗಳ ವಲಯವಾಗಿರಲಿ ಆತ್ಮನಿರ್ಭರ ಭಾರತದ ಅಭಿಯಾನ ಬಹಳ ಮುಖ್ಯ ಪಾತ್ರವಹಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

 

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬಿಎಸ್ ವೈ, ಸ್ವಾವಲಂಬಿ ರಾಷ್ಟ್ರ ನಿರ್ಮಾಣದ ಪ್ರಧಾನಿ ನರೇಂದ್ರ ಮೋದಿಯವರ #VocalForLocal ಪರಿಕಲ್ಪನೆಗೆ ಅನುಗುಣವಾಗಿ, ಆಟಿಕೆ ತಯಾರಿಕೆ ಮೂಲಕ ಆರ್ಥಿಕತೆ ಹಾಗು ಉದ್ಯೋಗ ಸೃಷ್ಟಿಗೆ ಬಲ ತುಂಬಲು ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಕೊಪ್ಪಳದಲ್ಲಿ ಪ್ರಾರಂಭಿಸಲಾಗುತ್ತಿದೆ. ಇಲ್ಲಿ ದೇಶವಿದೇಶಗಳ ಆಟಿಕೆ ತಯಾರಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next