Advertisement
ಹೌದು.. ನಾನು ಚನ್ನಪಟ್ಟಣ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಲ್ಲ ಎಂದು ಆರಂಭದಿಂದಲೇ ಹೇಳುತ್ತಿರುವ ಡಿ.ಕೆ.ಸುರೇಶ್ ಚನ್ನಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಆಸಕ್ತಿ ತೋರಿದ್ದಾರೆ.
Related Articles
Advertisement
ಈ ಕಾರಣಕ್ಕಾಗಿ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರನ್ನೇ ಕಣಕ್ಕಿಳಿಸುವುದು ಸೂಕ್ತ ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ಡಿ.ಕೆ.ಸುರೇಶ್ ಅವರೇ ನಮ್ಮ ಅಭ್ಯರ್ಥಿಯಾಗ ಬೇಕು ಎಂಬ ಅಭಿಪ್ರಾಯ ಸ್ಥಳೀಯ ಕಾರ್ಯಕರ್ತರಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
ಈ ಸಂಬಂಧ ಪಕ್ಷದ ಆಂತರಿಕ ವೇದಿಕೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಸುರೇಶ್ ಅವರೇ ಕಣಕ್ಕಿಳಿಯ ಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬಹುತೇಕ ಕೈ ನಾಯಕರು, ಬೇರೆ ಪಕ್ಷದಿಂದ ವಲಸೆ ಬಂದಿರುವ ಮುಖಂಡರು ನೇರವಾಗಿ ಡಿ.ಕೆ.ಸುರೇಶ್ ಅವರ ಸಂಪರ್ಕದಲ್ಲಿದ್ದು, ಅವರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಅನುದಾನಗಳಲ್ಲಿ ಡಿ.ಕೆ.ಸುರೇಶ್ ಪಾತ್ರ: ಉಪಚು ನಾವಣೆ ಘೋಷಣೆಯಾದ ಬೆನ್ನಲ್ಲೇ ಚನ್ನಪಟ್ಟಣಕ್ಕೆ ಅನುದಾನದ ಹೊಳೆ ಹರಿದು ಬಂದಿದೆ. ಚನ್ನಪಟ್ಟಣ ದಲ್ಲಿ 5 ಸಾವಿರ ನಿವೇಶನಗಳನ್ನು ನಿರ್ಮಾಣ ಮಾಡಿ ನಿವೇಶನ ರಹಿತರಿಗೆ ಹಂಚಿಕೆ ಮಾಡುವ ಸಂಬಂಧ ಡಿ. ಕೆ.ಸುರೇಶ್ ಚನ್ನಪಟ್ಟಣದ ಕಾಂಗ್ರೆಸ್ ಮುಖಂಡರಾದ ರಘುನಂದನ್ ರಾಮಣ್ಣ ಜತೆಗೂಡಿ ವಸತಿ ಸಚಿವರೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ಚನ್ನಪಟ್ಟಣ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ 500 ಕೋಟಿ ರೂ. ಕೊಡುಗೆ ನೀಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಗಂಗಾಧರ್ ಸುದ್ದಿಗೋಷ್ಠಿ ನಡೆಸಿ ತಿಳಿಸುವ ಜತೆಗೆ ಇದೆಲ್ಲದರ ಹಿಂದೆ ಡಿ.ಕೆ.ಸುರೇಶ್ ಶ್ರಮವಿದೆ ಎಂದು ಹೇಳುವ ಮೂಲಕ ಡಿ.ಕೆ.ಸುರೇಶ್ ಅವರ ಪರ ಪರೋಕ್ಷವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಎಲ್ಲ ಬೆಳವಣಿಗೆ ನೋಡಿದರೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸಂಗತಿ ಬಲಗೊಳ್ಳುತ್ತಿದೆ.
ಡಿ.ಕೆ.ಸುರೇಶ್ ಅಭ್ಯರ್ಥಿಯಾಗಲು ಇರುವ ಕಾರಣಗಳು:
ಚನ್ನಪಟ್ಟಣ ಅಭಿವೃದ್ಧಿ ವಿಚಾರದಲ್ಲಿ ಸಕ್ರಿಯವಾಗಿರುವ ಡಿ.ಕೆ.ಸುರೇಶ್, ಕೆಲ ಸಚಿವರು, ಸರ್ಕಾರಿ ಇಲಾಖೆಗಳಿಗೆ ಖುದ್ದು ಚನ್ನಪಟ್ಟಣ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸುತ್ತಿರುವುದು.
ಇತ್ತೀಚಿಗೆ ರಾಮನಗರದಲ್ಲಿ ಚನ್ನಪಟ್ಟಣ ಉಪಚುಣಾವಣೆ ಸಂಬಂಧ ಸಭೆ ನಡೆಸಿದ ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ದತ್ತ ಅವರ ಸಮ್ಮುಖದಲ್ಲಿ ಚನ್ನಪಟ್ಟಣದ ಎಲ್ಲಾ ಮುಖಂಡರು ಡಿ. ಕೆ.ಸುರೇಶ್ ಅವರೇ ಅಭ್ಯರ್ಥಿಯಾಗಬೇಕು ಎಂದಿರುವುದು.
ಚನ್ನಪಟ್ಟಣದಲ್ಲಿ ಸ್ಥಳೀಯವಾಗಿ ಸಮರ್ಥ ಅಭ್ಯರ್ಥಿಗಳು ಯಾರೂ ಇಲ್ಲದ ಕಾರಣ ಡಿ.ಕೆ.ಸುರೇಶ್ ಅವರನ್ನೇ ಕಣಕ್ಕಿಳಿಸಬೇಕು ಎಂದು ಸ್ಥಳೀಯ ಕಾರ್ಯಕರ್ತರು ಒತ್ತಡ
ಚನ್ನಪಟ್ಟಣ ನಗರಸಭೆಯ ಜೆಡಿಎಸ್‌ನ 12ಕ್ಕೂ ಹೆಚ್ಚು ಸದಸ್ಯರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ , ಕೆಲ ಬಿಜೆಪಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಡಿ.ಕೆ.ಸುರೇಶ್ ಪ್ರಮುಖ ಪಾತ್ರ
ಚನ್ನಪಟ್ಟಣದ ಕಾಂಗ್ರೆಸ್ ರಾಜಕೀಯದ ಕೇಂದ್ರ ಬಿಂದು ಡಿ.ಕೆ.ಸುರೇಶ್ ಎನಿಸಿದ್ದು, ಡಿ.ಕೆ.ಸುರೇಶ್ ಅಭ್ಯರ್ಥಿಯಾದರೆ ಯಾವುದೇ ಪ್ರತಿರೋಧವಿಲ್ಲದೇ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸಹಮತ ವ್ಯಕ್ತಪಡಿಸುತ್ತಿರುವುದು.
ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ವರಿಷ್ಠರು ಘೋಷಣೆ ಮಾಡುತ್ತಾರೆ. ಚನ್ನಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಶ್ರಮ ಹೆಚ್ಚು ಇದೆ. ಹಗಲು ರಾತ್ರಿ ಎನ್ನದೆ ಸರ್ಕಾರಿ ಕಚೇರಿಗಳಿಗೆ ತಿರುಗಾಡಿ ಚನ್ನಪಟ್ಟಣಕ್ಕೆ ನೂರಾರು ಕೋಟಿ ರೂ. ಅನುದಾನ ತಂದಿದ್ದಾರೆ. ಅವರ ಕೊಡುಗೆ, ಶ್ರಮವನ್ನು ನಾವು ಸ್ಮರಿಸಬೇಕು. ●ಎಸ್.ಗಂಗಾಧರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ್ಯ
– ಸು.ನಾ.ನಂದಕುಮಾರ್