Advertisement

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

05:34 PM Apr 26, 2024 | Team Udayavani |

■ ಉದಯವಾಣಿ ಸಮಾಚಾರ
ಚನ್ನಮ್ಮನ ಕಿತ್ತೂರು: ಭಾರತ ದೇಶ ಮಹಾನ್‌ ಯೋಗಿಗಳು, ಸೂಫಿ ಸಂತರು, ಶರಣರು ನಡೆದಾಡಿದ ಪುಣ್ಯ ನೆಲವಾಗಿದೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದು ಸಮಾಜ ಸೇವಕ ಹಬೀಬ ಶಿಲೇದಾರ ಹೇಳಿದರು.

Advertisement

ತಾಲೂಕಿನ ಅಂಬಡಗಟ್ಟಿ ಗ್ರಾಮದ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಹಜರತ್‌ ಪೀರ್‌ ಸೈಯ್ಯದ ಹಬೀಬ ಶಾವಲಿ ಬಾಬಾರ ಸಂದಲ್‌ ಮತ್ತು ಉರುಸ್‌ ಕಾರ್ಯಕ್ರಮದ ನೇತೃತ್ವವಹಿಸಿ ಅವರ ಮಾತನಾಡಿದರು. ಹಜರತ್‌ ಪೀರ್‌ ಸೆ„ಯ್ಯದ ಹಬೀಬ ಶಾವಲಿ ದರ್ಗಾ ಸರ್ವ ಜನಾಂಗದ ಭಕ್ತಿಯ ಕೇಂದ್ರವಾಗಿದೆ.

ರೈತರಿಗೆ ಮಳೆ, ಬೆಳೆ ಚನ್ನಾಗಿ ಬರುವಂತೆ, ದೇಶದ ಸೈನಿಕರಿಗೆ ಇನ್ನಷ್ಟು ಶಕ್ತಿ ಕರುಣಿಸಲೆಂದು ಹಾಗೂ ನಾಡಿಗೆ ಕಂಟಕ, ಆಪತ್ತು ಬಾರದಂತೆ ಹಾಗೂ ಸರ್ವರಿಗೂ ಆರೋಗ್ಯ, ಆಯುಸ್ಸು, ಐಶ್ವರ್ಯ ಕರುಣಿಸಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು. ದಿವ್ಯ ಸಾನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೇಂದ್ರ ಸ್ವಾಮೀಗಳು ಎಲ್ಲರೂ ಶಾಂತಿ, ಹಾರ್ದತೆಯಿಂದ ಬಾಳಬೇಕೆಂದು ಕರೆ ನೀಡಿದರು.

ಹೈದ್ರಾಬಾದದ ವಚನಕಾರರು, ಜಗದ್ಗುರು ಆಶ್ರಮದ ಜನಾಬ ಸೂಫಿ ಸೈಯ್ಯದ ಬಾಷಾ ಅವರು ಭಾವೈಕ್ಯತೆ ಹಾಗೂ ವಿಶ್ವಶಾಂತಿ ಕುರಿತು ಮಾತನಾಡಿದರು. ಅಂಬಡಗಟ್ಟಿಯ ಶ್ರೀ ಗುರುಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ, ಮುಸ್ಲಿಂ ಸಮಾಜದ ಧರ್ಮ ಗುರು ಮೊಹ್ಮದ ಇಕ್ಬಾಲ ಸಿದ್ದಕಿ ಸಾನ್ನಿಧ್ಯ ವಹಿಸಿದ್ದರು.

ಬೈಲಹೊಂಗಲದ ವೇ.ಮೂ. ಡಾ. ಮಹಾಂತಶಾಸ್ತ್ರಿ ಆರಾದ್ರಿಮಠ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಕಚ್ಚಾಡುವ ಬದಲು
ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡಬೇಕು. ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬಾಳಬೇಕು.

Advertisement

ಶರಣರ-ಸೂಫಿ-ಸಂತರ, ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಸಮಾಜದಲ್ಲಿ ಎಲ್ಲರೂ
ಸಹೋದರತ್ವದಿಂದ ಬದುಕಬೇಕೆಂದು ಕರೆ ನೀಡಿದರು. ನಂತರ ಕೊಲ್ಹಾಪೂರದ ಪರವೀನ ಸುಲ್ತಾನ ರವಾಲನ ಹಾಗೂ ಬೆಂಗಳೂರಿನ ತೌಸೀಫ್‌ ಖಾದ್ರಿ ಕವಾಲಿ ಅವರಿಂದ ಜಬರದಸ್ತ ಕವಾಲಿ ಮುಖಾಬಲ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಹಜರತ್‌ ಪೀರ್‌ ಸೈಯ್ಯದ ಹಬೀಬ ಶಾವಲಿ ದರ್ಗಾದಲ್ಲಿ ಭಕ್ತರು ಉಪಸ್ಥಿತರಿದ್ದರು.

ಭಾವೈಕ್ಯತೆ ಪ್ರತೀಕ
ಹಿಂದೂ, ಮುಸ್ಲಿಂ ಸಮಾಜದವರು ಭಕ್ತಿಯಿಂದ ಹಜರತ್‌ ಪೀರ್‌ ಸೈಯ್ಯದ ಹಬೀಬ ಶಾವಲಿ ದರ್ಗಾದಲ್ಲಿ ಗೌರವ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಮಾಜ ಸೇವಕ ಹಬೀಬ ಶಿಲೇದಾರ ಅವರ ಮನೆಯಿಂದ ಗಂಧವನ್ನು ಮೆರವಣಿಗೆ ಮೂಲಕ ದರ್ಗಾಕ್ಕೆ ತಂದು ಸಮರ್ಪಿಸಲಾಯಿತು. ಅನೇಕ ಗಣ್ಯರು ಭಾಗವಹಿಸಿ ಹಜರತ್‌ ಪೀರ್‌ ಸೈಯ್ಯದ ಹಬೀಬ ಶಾವಲಿ ಬಾಬಾರ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next