Advertisement

ಚನ್ನಮ್ಮ ವಿವಿ ಸ್ನಾತಕೋತ್ತರ ಕೇಂದ್ರಕಗ್ಕೆ ಭೂಮಿ ಕೊಡಿ

02:28 PM Oct 14, 2021 | Team Udayavani |

ಬಾಗಲಕೋಟೆ: ರಾಣಿ ಚನ್ನಮ್ಮ ವಿವಿಯಎಸ್‌.ಆರ್‌. ಕಂಠಿ ಅನುಭಾವ ಸಂಗಮಸ್ನಾತಕೋತ್ತರ ಕೇಂದ್ರಕ್ಕೆ ಅಗತ್ಯ ಭೂಮಿಹಾಗೂ ಇಲ್ಲಿನ ಸಿಬ್ಬಂದಿ ವರ್ಗಾವಣೆಹಿಂಪಡೆಯುವಂತೆ ಕರ್ನಾಟಕ ರಕ್ಷಣಾವೇದಿಕೆ ಒತ್ತಾಯಿಸಿದೆ.

Advertisement

ವೇದಿಕೆಯ ಪದಾಧಿಕಾರಿಗಳುಬುಧವಾರ ಅಪರ ಜಿಲ್ಲಾಧಿಕಾರಿಮಹಾದೇವ ಮುರಗಿ ಅವರಿಗೆಮನವಿ ಸಲ್ಲಿಸಿದರು. ಕರವೇ ಜಿಲ್ಲಾಪ್ರಧಾನ ಕಾರ್ಯದರ್ಶಿ ಬಸವರಾಜಧರ್ಮಂತಿ ಮಾತನಾಡಿ, 2011-12ನೇಶೈಕ್ಷಣಿಕ ಸಾಲಿನಲ್ಲಿ ಬಾಗಲಕೋಟೆಯಲ್ಲಿ ರಾಣಿ ಚನ್ನಮ್ಮ ವಿವಿ ಅಡಿಯಲ್ಲಿಎಸ್‌. ಆರ್‌. ಕಂಠಿ, ಅನುಭಾವ ಸಂಗಮಸ್ನಾತಕೋತ್ತರ ಕೇಂದ್ರ ಮಂಜೂರು ಮಾಡಲಾಗಿತ್ತು.

ಇಲ್ಲಿ ಸ್ನಾತಕೋತ್ತರಎಂಎಸ್‌ಡಬ್ಲೂ ಮತ್ತು ಅರ್ಥಶಾಸ್ತ್ರವಿಭಾಗಗಳನ್ನು ಸೂಕ್ತ ಕಟ್ಟಡವಿಲ್ಲದಕಾರಣ ಬಿವಿವಿ ಸಂಘದ ಬಾಡಿಗೆಕಟ್ಟಡದಲ್ಲಿ ತರಗತಿ ನಡೆಸಲಾಗುತ್ತಿತ್ತು.ಈ ಸ್ನಾತಕೋತ್ತರ ಕೇಂದ್ರದಲ್ಲಿವಿವಿಧ ಅಧ್ಯಯನ ವಿಭಾಗಗಳನ್ನುಆರಂಭಿಸಿ ಸಮಗ್ರ ಅಭಿವೃದ್ಧಿಗಾಗಿಸೂಕ್ತ ಜಮೀನು ಮಂಜೂರುಮಾಡುವಂತೆ ರಾಣಿ ಚನ್ನಮ್ಮವಿಶ್ವವಿದ್ಯಾಲಯದ ಕುಲಸಚಿವರುಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು.

ಆದರೆ,ಸ್ನಾತಕೋತ್ತರ ಕೇಂದ್ರಕ್ಕೆ ಜಮೀನುಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೇಸ್ನಾತಕೋತ್ತರ ಕೇಂದ್ರವನ್ನು ನಿಲ್ಲಿಸಿದ್ದುಬಾಗಲಕೋಟೆ ಜಿಲ್ಲೆಯ ಸುತ್ತಮುತ್ತಲಿನವಿದ್ಯಾರ್ಥಿಗಳನ್ನು ಸ್ನಾತಕೋತ್ತರಶಿಕ್ಷಣದಿಂದ ವಂಚಿತರನ್ನಾಗಿಸಲಾಗುತ್ತಿದೆ ಎಂದರು.

ರಾಣಿ ಚನ್ನಮ್ಮ ವಿವಿಯಕುಲಸಚಿವರು ಇದೀಗ ಕಳೆದ ಅ.8ರಂದು ಬಾಗಲಕೋಟೆಯಲ್ಲಿಕಾರ್ಯನಿರ್ವಹಿಸುವ ಸಿಬ್ಬಂದಿಯನ್ನುವರ್ಗಾವಣೆ ಮಾಡಿ ಆದೇಶಹೊರಡಿಸಿದ್ದಾರೆ. ಅಲ್ಲದೇ ಪ್ರವೇಶಾತಿಅಧಿಸೂಚನೆಯಿಂದ ಬಾಗಲಕೋಟೆಸ್ನಾತಕೋತ್ತರ ಕೇಂದ್ರವನ್ನು ಕೈ ಬಿಟ್ಟಿದ್ದುಮುಳುಗಡೆ ನಗರಕ್ಕೆ ಅನ್ಯಾಯಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕರವೇ ನಗರ ಅಧ್ಯಕ್ಷ ಬಸವರಾಜ ಅಂಬಿಗೇರ, ಉಪಾಧ್ಯಕ್ಷ ಮಂಜುಪವಾರ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next