ಸಕಲೇಶಪುರ: ಹೊಳೆ ದಡದಲ್ಲಿ ಮರಳು ಗಣಿಗಾರಿಕೆ ಮಾಡುವಾಗ ಐತಿಹಾಸಿಕ ಚನ್ನಕೇಶವಸ್ವಾಮಿ ವಿಗ್ರಹ ಪತ್ತೆಯಾಗಿರುವ ಘಟನೆ ತಾಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಹಾಲೇಬೇಲೂರು ಗ್ರಾಮದ ಹೇಮಾವತಿ ನದಿ ತೀರದಲ್ಲಿ ಮರಳುಗಣಿಗಾರಿಕೆ ಮಾಡುವಾಗ ಮಂಗಳವಾರ ರಾತ್ರಿ ವೇಳೆ ಜೆಸಿಬಿ ಯಂತ್ರಕ್ಕೆ ದೇವರ ವಿಗ್ರಹವೊಂದು ಸಿಲುಕಿದ್ದು ಹೆದರಿದ ಜೆಸಿಬಿ ಯಂತ್ರದ ಚಾಲಕ ಸ್ಥಳದಿಂದ ಓಡಿಹೋಗಿದ್ದಾನೆ.
ಗ್ರಾಮಸ್ಥರಿಂದ ವಿಗ್ರಹಕ್ಕೆ ಪೂಜೆ: ವಿಷಯ ತಿಳಿದ ಹಾಲೇಬೇಲೂರಿನ ಗ್ರಾಮಸ್ಥರು ವಿಗ್ರಹವನ್ನು ಹುಡುಕಾಡಿದಾಗ ಐತಿಹಾಸಿಕ ಚನ್ನಕೇಶವ ಸ್ವಾಮಿಯ ವಿಗ್ರಹ ಪತ್ತೆಯಾಗಿದೆ. ಈ ವಿಗ್ರಹವನ್ನು ಗ್ರಾಮದಲ್ಲಿರುವ ಚನ್ನ ಕೇಶವ ದೇವಸ್ಥಾನದ ಮುಂಭಾಗ ತಂದಿಟ್ಟು ವಿಗ್ರಹವನ್ನು ತೊಳೆದು ಹೂವಿನಿಂದ ಅಲಂಕಾರ ಮಾಡಿ ತಾತ್ಕಾಲಿಕ ಪೂಜೆ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. ಪತ್ತೆಯಾಗಿರುವ ಐತಿಹಾಸಿಕ ವಿಗ್ರಹ ಬಹಳ ಸುಂದರವಾಗಿದ್ದು ಸುಮಾರು 4 ರಿಂದ 4.5 ಅಡಿಯಷ್ಟು ಉದ್ದವಾಗಿರುವ ಚನ್ನಕೇಶವ ಸ್ವಾಮಿ ವಿಗ್ರಹ ಯಾವುದೇರೀತಿಯಲ್ಲಿ ಭಿನ್ನವಾಗಿಲ್ಲ.
ಇದರ ಕೆತ್ತನೆ ನೋಡುಗರ ಮನಸೆಳೆಯುತ್ತಿದೆ. ಸಾವಿರಾರು ವರ್ಷಗಳ ಕಾಲ ಈ ವಿಗ್ರಹ ಹೇಮಾವತಿ ದಂಡೆಯಲ್ಲಿರುವ ಮರಳಿನ ಅಡಿಯಲ್ಲೆ ಇತ್ತು ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಸಿಕ್ಕಿರುವ ಚನ್ನಕೇಶವ ವಿಗ್ರಹ ಹಾಲೇಬೇಲೂರು ಗ್ರಾಮಸ್ಥರಲ್ಲಿ ಸಂತೋಷ ತಂದಿದೆ. ಹಾಲೇಬೇಲೂರು ಗ್ರಾಮವನ್ನು ಈ ಹಿಂದೆ ಹಳೆಬೇಲೂರು ಎಂದು ಕರೆಯಲಾಗುತ್ತಿದ್ದು, ಕಾಲಕ್ರಮೇಣ ಹಾಲೇಬೇಲೂರು ಗ್ರಾಮವಾಯಿತೆಂದು ಗ್ರಾಮಸ್ಥರು ಅಭಿಪ್ರಾಯ ಪಡುತ್ತಾರೆ.ಸ್ಥಳಕ್ಕೆ ತಹಶೀಲ್ದಾರ್ ಜೈಕುಮಾರ್, ನಗರ ಠಾಣೆ ಪಿಎಸ್‌ಐ ಬಸವರಾಜು ಚಿಂಚೋಳಿ ಹಾಗೂ ಕಂದಾಯ ಇಲಾಖೆಯ ಇತರೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಗ್ರಾಮಸ್ಥ ಕುಮಾರ್ ಮಾತನಾಡಿ, ಈ ಹಿಂದೆ ಬೇಲೂರು ಹಳೇಬೀಡಿನಲ್ಲಿ ದೇವಸ್ಥಾನ ಕಟ್ಟುವ ಮೊದಲು ಹೊಯ್ಸಳರು ಇಲ್ಲಿಗೆ ಬಂದು ದೇವಸ್ಥಾನ ಮಾಡಲು ಪ್ರಾರಂಭಿಸಿದ್ದು ಆದರೆ ವಿಗ್ರಹ ಭಿನ್ನವಾಯಿತೆಂದು ಇಲ್ಲಿನ ದೇವಾಲಯದ ಕೆಲಸವನ್ನು ಅರ್ಧಕ್ಕೆ ಕೈ ಬಿಟ್ಟು ಅಲ್ಲಿಗೆ ಹೋಗಿ ದೇವಸ್ಥಾನ ಕಟ್ಟಿದರು ಎಂದು ಇತಿಹಾಸ ಹೇಳುತ್ತದೆ. ಕಳೆದ 2 ವರ್ಷಗಳ ಹಿಂದೆ ಮಳೆಯಿಂದ ಗ್ರಾಮದಲ್ಲಿರುವ ಚನ್ನಕೇಶವ ಸ್ವಾಮಿ ದೇವಸ್ಥಾನ ಶಿಥಿಲಗೊಂಡು ಬಿದ್ದು ಹೋಗಿದ್ದರಿಂದ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಆರಂಭಿಸಿದೆ ªàವು. ಸೋಜಿಗವೆಂದರೆ ಇದೀಗ ನಮಗೆ ಈ ವಿಗ್ರಹ ಸಿಕ್ಕಿರುವುದು ಆಶ್ಚರ್ಯಕರವಾಗಿದೆ.
ಹಳೆ ವಿಗ್ರಹದ ಮಾದರಿಯಲ್ಲೆ ಈ ವಿಗ್ರಹವಿದೆ. ಈ ಹಿನ್ನೆಲೆಯಲ್ಲಿ ಯಥಾವತ್ತಾಗಿ ಇದೇ ವಿಗ್ರಹವನ್ನು ಮೂಲ ವಿಗ್ರಹವನ್ನಾಗಿ ಮಾಡಲು ತೀರ್ಮಾನಿಸಿದ್ದೇವೆ. ಇದಕ್ಕೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಅನುಮತಿ ನೀಡಬೇಕು ಹಾಗೂ ಪ್ರಾಚ್ಯ ವಸ್ತು ಹಾಗೂ ಪುರಾತತ Ì ಇಲಾಖೆಯ ತಜ್ಞರು ಇಲ್ಲಿಗೆ ಬಂದು ವಿಗ್ರಹದ ಕುರಿತು ಸಂಶೋಧನೆ ಮಾಡಲೆಂದು ಮನವಿ ಮಾಡುತ್ತೇವೆ ಎಂದರು.
ಸುಧೀರ್ ಎಸ್.ಎಲ್