Advertisement

ವಾಟ್ಸಾಪ್ ನಿಯಮಗಳಲ್ಲಿ ಬದಲಾವಣೆ: ಷರತ್ತು ಒಪ್ಪದಿದ್ದರೇ ನಿಮ್ಮ ಅಕೌಂಟ್ ಡಿಲೀಟ್ !

09:49 AM Jan 06, 2021 | Team Udayavani |

ನವದೆಹಲಿ: ಜನಪ್ರಿಯ ವಾಟ್ಸಾಪ್ ಮಂಗಳವಾರದಿಂದ (ಜ.5)  ತನ್ನ ಬಳಕೆದಾರರಿಗೆ ಅದರ ಸೇವಾ ನಿಯಮಗಳಲ್ಲಿನ ಬದಲಾವಣೆ ಮತ್ತು ಗೌಪ್ಯತೆ ನೀತಿಯ ಬಗ್ಗೆ ತಿಳಿಸಲು ನೋಟಿಫಿಕೇಶನ್ ಗಳನ್ನು ಕಳುಹಿಸಲು ಆರಂಭಿಸಿದೆ.

Advertisement

ವಾಟ್ಸಾಪ್ ತನ್ನ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸುತ್ತಿದೆ ಎಂದು ಕಂಪನಿಯು ಅಧಿಸೂಚನೆಯಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ತಿಳಿಸಿದೆ.  ಕಂಪನಿಯು ಬಳಕೆದಾರರ ಡೇಟಾವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಮುಂತಾದ ಪ್ರಮುಖ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ವಾಟ್ಸಾಪ್ ನ ಈ  ಹೊಸ ನಿಯಮಗಳು ಫೆಬ್ರವರಿ 8, 2021 ರಿಂದ ಜಾರಿಗೆ ಬರಲಿದೆ. ಒಂದು ವೇಳೆ ಈ ನೀತಿಗಳನ್ನು ಬಳಕೆದಾರರು ಒಪ್ಪದಿದ್ದರೆ ಅಥವಾ Agree ಆಯ್ಕೆಯನ್ನು ಕ್ಲಿಕ್ ಮಾಡದಿದ್ದರೇ ವಾಟ್ಸಾಪ್ ಖಾತೆ ಡಿಲೀಟ್ ಆಗುತ್ತದೆ. ಸರಳವಾಗಿ ಹೇಳವುದಾದರೇ ಈ ಬದಲಾವಣೆಗಳನ್ನು ಸ್ವೀಕರಿಸದ ಬಳಕೆದಾರರನ್ನು ವಾಟ್ಸಾಪ್ ನಿಂದ ಬಹಿಷ್ಕರಿಸಲಾಗುತ್ತದೆ ಎಂದೇ ವರದಿಯಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಸಂಚಲನ ಸೃಷ್ಟಿಸಲು ಬರುತ್ತಿದೆ Renault Kiger: ಬಿಡುಗಡೆ ದಿನಾಂಕ ಪ್ರಕಟ

Advertisement

ವಾಟ್ಸಾಪ್ ತನ್ನ ವೆಬ್ ಸೈಟ್ ಅನ್ನು ಕೂಡ ಅಪ್ ಡೇಟ್ ಮಾಡಿದ್ದು, ಇಲ್ಲಿ ಹೊಸ ನಿಯಮಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ನೀಡಲಾಗಿದೆ.  ಬಳಕೆದಾರರು ಹೊಸ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಬೇಕಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:  ಹಲವು ವೈಶಿಷ್ಟ್ಯಗಳನ್ನು ಹೊತ್ತು ಬರಲಿದೆ ಸ್ಯಾಮ್​ಸಂಗ್ Galaxy S21: ಹೇಗಿದೆ ಕಾರ್ಯಕ್ಷಮತೆ ?

Advertisement

Udayavani is now on Telegram. Click here to join our channel and stay updated with the latest news.

Next