ಲಂಡನ್: ಕ್ರಿಕೆಟ್ ನಿಯಮಗಳನ್ನು ರೂಪಿಸುವ ಮೇರಿಲ್ ಬೋನ್ ಕ್ರಿಕೆಟ್ ಕ್ಲಬ್ ಇದೀಗ ಹಲವು ನಿಮಗಳಲ್ಲಿ ಬದಲಾವಣೆ ತಂದಿದೆ. ಹೊಸ ಬದಲಾವಣೆಗಳು ಅಕ್ಟೋಬರ್ ನಂತರ ಜಾರಿಗೆ ಬರಲಿದೆ.
ಪ್ರಮುಖ ಬದಲಾವಣೆ:
ಎಂಜಲು ಸವರುವಂತಿಲ್ಲ: ಕೋವಿಡ್ ಕಾರಣದಿಂದ ತಾತ್ಕಾಲಿಕವಾಗಿ ನಿಷೇಧಕ್ಕೊಳಗಾಗಿದ್ದ ಸಲೈವಾ ಬಳಕೆ ( ಚೆಂಡಿಗೆ ಎಂಜಲು ಸವರುವುದು) ಯನ್ನು ಇನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.
ಮಂಕಡ್ ಗೆ ಅವಕಾಶ: ವಿವಾದಿತ ಮಂಕಡ್ ಇನ್ನು ನ್ಯಾಯಯುತ ರನೌಟ್ ಎಂದು ತೀರ್ಮಾನಿಸಲಾಗಿದೆ. ನಾನ್ ಸ್ಟ್ರೈಕ್ ನಲ್ಲಿದ್ದ ಆಟಗಾರ ಕ್ರೀಸ್ ಬಿಟ್ಟು ಹೋದಾಗ ಬೌಲರ್ ಔಟ್ ಮಾಡಿದರೆ ಅದನ್ನು ರನೌಟ್ ಎಂದು ಪರಿಗಣಿಸಲಾಗುತ್ತದೆ. ಮತ್ತು ಅದು ನ್ಯಾಯಯುತ ಆಟ (ಫೇರ್ ಪ್ಲೇ) ಎಂದು ಪರಿಗಣಿಸಲಾಗುತ್ತದೆ.
ಹೊಸ ಆಟಗಾರ ಸ್ಟ್ರೈಕ್ ಗೆ: ಕ್ಯಾಚ್ ನೀಡಿ ಔಟಾದ ಸಮಯದಲ್ಲಿ ಹೊಸ ಆಟಗಾರ ನೇರ ಸ್ಟ್ರೈಕ್ ಗೆ ಬರಬೇಕು. ಆತನೇ ಮುಂದಿನ ಎಸೆತ ಎದುರಿಸಬೇಕು. ಈ ಹಿಂದೆ ಕ್ಯಾಚ್ ಪಡೆಯುವ ಮೊದಲು ನಾನ್ ಸ್ಟ್ರೈಕರ್ ಕ್ರಾಸ್ ಆಗಿದ್ದರೆ ಆತ ಮುಂದಿನ ಎಸೆತ ಎದುರಿಸುತ್ತಿದ್ದ.
ಇದನ್ನೂ ಓದಿ:ಉಕ್ರೇನ್ ನಲ್ಲಿ ರಕ್ಷಣೆ ಮಾಡಿದ್ದಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಪಾಕಿಸ್ಥಾನದ ಹುಡುಗಿ
5 ಪೆನಾಲ್ಟಿ ರನ್: ಬೌಲಿಂಗ್ ವೇಳೆ ಫೀಲ್ಡಿಂಗ್ ತಂಡದ ಸದಸ್ಯ ಅಸಮರ್ಪಕ ಚಲನೆ ಮಾಡಿದರೆ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಹೊಸ ನಿಯಮದ ಪ್ರಕಾರ ಫೀಲ್ಡರ್ ನ ಅಸಮರ್ಪಕ ಚಲನೆಯು ಬ್ಯಾಟಿಂಗ್ ತಂಡಕ್ಕೆ 5 ಪೆನಾಲ್ಟಿ ರನ್ ಗಳನ್ನು ನೀಡಲಾಗುತ್ತದೆ.