Advertisement

ಅವ್ಯವಸ್ಥಿತ ವಿದ್ಯುತ್‌ ಕಂಬಗಳ ಬದಲಾವಣೆ 

11:58 AM Jul 23, 2018 | |

ನಗರ: ನಗರದಲ್ಲಿ ಹಾದು ಹೋಗಿರುವ ವಿದ್ಯುತ್‌ ವ್ಯವಸ್ಥೆಯ ಅವ್ಯವಸ್ಥಿತ, ಅಪಾಯಕಾರಿ ವಿದ್ಯುತ್‌ ಕಂಬಗಳನ್ನು ಬದಲಾಯಿಸುವ ಕಾರ್ಯವನ್ನು ಮೆಸ್ಕಾಂ ಇಲಾಖೆ ರವಿವಾರ ನಡೆಸಿತು. ನಗರದ ಕೋರ್ಟು ರಸ್ತೆಯ ಗ್ರಾಮ ಚಾವಡಿ ಬಳಿ ವಿದ್ಯುತ್‌ ಕಂಬ ಮುರಿದು ಅಪಾಯಕಾರಿಯಾಗಿರುವ ಕುರಿತು ಉದಯವಾಣಿ ಸುದಿನದಲ್ಲಿ ಜು. 16 ರಂದು ಸಚಿತ್ರ ವರದಿ ಪ್ರಕಟಿಸಲಾಗಿತ್ತು. ಸಂಚಾರ ನಿಬಿಡ ಇರುವ ಕಾರಣ ರವಿವಾರ ಕಾಮಗಾರಿ ನಡೆಸುವುದಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದರು. ರವಿವಾರ ಕಾರ್ಮಿಕರ ಮೂಲಕ ಆ ಕಂಬವನ್ನು ಬದಲಾಯಿಸುವ ಕಾರ್ಯವನ್ನು ನಡೆಸಿದರು.

Advertisement

ಇದರ ಜತೆಗೆ ನಗರದ ಇತರ ಕಡೆಗಳಲ್ಲಿ ಅಪಾಯಕಾರಿಯಾಗಿದ್ದ ವಿದ್ಯುತ್‌ ಕಂಬಗಳನ್ನು ಬದಲಾವಣೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಪುತ್ತೂರು ನಗರದಲ್ಲಿ ರವಿವಾರ ಹಲವು ಸಮಯಗಳ ಕಾಲ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. 

ಮತ್ತೆ ರಸ್ತೆಯಲ್ಲಿ ಕಂಬ
ನಗರದ ಮುಖ್ಯರಸ್ತೆಯ ಬದಿ ಹಳೆಯ ವಿದ್ಯುತ್‌ ಕಂಬಗಳು ರಸ್ತೆಗೆ ಹೊಂದಿಕೊಂಡಂತೆ ಇದ್ದು, ಬದಲಾವಣೆ ಮಾಡುವ ಸಂದರ್ಭದಲ್ಲೂ ಅದನ್ನು ಸ್ಥಳಾಂತರಿಸದೆ ಮತ್ತೆ ರಸ್ತೆಯ ಬದಿಗೆ ಅಳವಡಿಸುತ್ತಿರುವ ಕುರಿತು ಸಾರ್ವಜನಿಕರ ಕಡೆಯಿಂದ ಆಕ್ಷೇಪ ವ್ಯಕ್ತವಾಗುತ್ತಿರುವುದು ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next