Advertisement

Tech News: 60 ವರ್ಷದಲ್ಲೇ ಮೊದಲ ಬಾರಿಗೆ ನೋಕಿಯಾ ಲೋಗೋ ಬದಲು!

02:24 PM Mar 03, 2023 | Team Udayavani |

ಹೊಸದಿಲ್ಲಿ: ನೋಕಿಯಾ! ಈ ಹೆಸರು ಕೇಳದವರೇ ಇಲ್ಲ, ಕೀ ಪ್ಯಾಡ್‌ನಿಂದ ಸ್ಮಾರ್ಟ್‌ಫೋನ್‌ವರೆಗೆ ಭಾರತದಲ್ಲಿ ಖ್ಯಾತ ಮೊಬೈಲ್‌ ತಯಾರಕ ಸಂಸ್ಥೆ ಎನ್ನುವ ಸಾಲಿನಲ್ಲಿ ದಶಕಗಳಿಂದ ನೋಕಿಯಾ ಸ್ಥಾನ ಗಿಟ್ಟಿಸಿಕೊಂಡಿದೆ.

Advertisement

ಈ ಸಂಸ್ಥೆ ಹೆಸರು ಕೇಳುತ್ತಿದ್ದಂತೆ ನೆನಪಾ ಗುವುದು ಅದರ ಲೋಗೋ! ಆದರೆ ಇದೀಗ 60 ವರ್ಷಗಳಲ್ಲೇ ಮೊದಲ ಬಾರಿಗೆ ನೋಕಿಯಾ ಸಂಸ್ಥೆ ತನ್ನ ಲೋಗೋವನ್ನು ಬದಲಾಯಿಸುತ್ತಿದ್ದು, ಹೊಸ ಲೋಗೋ ಪರಿಚಯಿಸಿದೆ.

ಈ ಹಿಂದೆ ನೀಲಿ ಬಣ್ಣದಲ್ಲಿದ್ದ ನೋಕಿಯಾ ಅಕ್ಷರಗಳು ಮಾಯವಾ ಗಿದ್ದು, ಹೊಸ ಡಿಸೈನ್‌ನ 5 ಫಾಂಟ್‌ನಲ್ಲಿ ಬಣ್ಣ ಬಣ್ಣದಲ್ಲಿ ನೋಕಿಯಾ ಪದದ ಅಕ್ಷರ ಗಳು ಲೋಗೋದಲ್ಲಿ ಕಂಗೊ ಳಿಸುತ್ತಿವೆ.

ಸ್ಮಾರ್ಟ್‌ಫೋನ್‌ ಜತೆಗೆ ಹೊಸ ತಂತ್ರಜ್ಞಾನಕ್ಕೂ ಹೊಂದಿಕೊಂಡು ಹೆಜ್ಜೆ ಇಡುತ್ತಿರುವ ನೋಕಿಯಾ, ತನ್ನ ಲೋಗೋ ಬದಲಾವಣೆಗೆ ಮೂಲಕ ಮತ್ತಷ್ಟು ಜನರನ್ನು ಆಕರ್ಷಿಸಲಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next