Advertisement
ಇದೇ ರೀತಿ ಕಣ್ಮರೆಯಾದ ಇನ್ನೊಂದು ಅವಿಷ್ಕಾರ ಟಿಟಿ (ಟೆಲೆಗ್ರಾಫಿಕ್ ಟ್ರಾನ್ಸ್‌ಫರ್). ಒಂದು ಕಾಲಕ್ಕೆ ತ್ವರಿತ ಗತಿಯಲ್ಲಿ ಹಣ ರವಾನೆ ಮಾಡುವುದಕ್ಕೆ ಈ ಅವಿಷ್ಕಾರವನ್ನು ಬಳಸುತ್ತಿದ್ದರು. ಇದನ್ನು ಹೆಚ್ಚಾಗಿ ವ್ಯಾಪಾರೀ ಸಮುದಾಯಗಳು ಬಳಸುತ್ತಿದ್ದವು. ಬ್ಯಾಂಕುಗಳು ತಮ್ಮ ಗ್ರಾಹಕರು ಕಳಿಸಬೇಕಾದ ಮೊತ್ತದ ಸಂಗಡ ಬೆನಿಫಿಷಿಯರ್‌ರ ಖಾತೆಯ ವಿವರ ಪಡೆದು, ಅವುಗಳಿಗೆ ತಮ್ಮ ರಹಸ್ಯ ಬ್ಯಾಂಕ್ ಕೋಡ್‌ಗಳನ್ನು ಸೇರಿಸಿ, ಬೆನಿಫಿಷಿಯರ್ ಬ್ಯಾಂಕ್ ಖಾತೆ ಇರುವ ಶಾಖೆಗಳಿಗೆ ಟೆಲೆಗ್ರಾಮ್ ಕಳಿಸುತ್ತಿದ್ದರು. ಟೆಲೆಗ್ರಾಮ್ ರಿಸೀವ್ ಮಾಡಿದ ಶಾಖೆಗಳು ರಹಸ್ಯ ಟಿಟಿ ಸಂದೇಶದಲ್ಲಿರುವ ಕೋಡ್ ಅನ್ನು ಡಿಕೋಡ್ ಮಾಡಿ, ಮೊತ್ತ ಮತ್ತು ಖಾತೆದಾರನನ್ನು ಖಚಿತ ಮಾಡಿಕೊಂಡು ಖಾತೆದಾರನಿಗೆ ಹಣ ಜಮಾಯಿಸುತ್ತಿದ್ದರು. ಈ ರೀತಿ ಹಣ ರವಾನೆಗೆ ಕನಿಷ್ಠ ಒಂದು ದಿವಸ ಹಿಡಿಯುತ್ತಿತ್ತು. ಬ್ಯಾಂಕುಗಳಲ್ಲಿ ಟೆಲೆಕ್ಸ್ ಬಳಕೆ ಆರಂಭವಾದ ಮೇಲೆ ಟಿಟಿ ವ್ಯವಸ್ಥೆ ಕಡಿಮೆಯಾಯಿತು. ಬ್ಯಾಂಕುಗಳಲ್ಲಿ ಕೋರ್ ಬ್ಯಾಂಕಿಂಗ್ ತಂತ್ರ ಜ್ಞಾನವನ್ನು ಅಳವಡಿಸಿದ ಮೇಲೆ ಇದು ಸಂಪೂರ್ಣವಾಗಿ ಕಣ್ಮರೆಯಾಗಿ NEEFT ಮತ್ತು RTGS ಎನ್ನುವ ಹೊಸ ಅವಿಷ್ಕಾರಗಳು ಬಂದಿವೆ. 2 ಲಕ್ಷದ ವರೆಗಿನ ಹಣ ರವಾನೆಗೆ NEEFT ಮತ್ತು ಅದಕ್ಕೂ ಮೇಲಿನ ಮೊತ್ತದ ರವಾನೆಗೆ RTGS ವ್ಯವಸ್ಥೆಯನ್ನು ಬಳಸಲಾಗುತ್ತದೆ. ಟಿಟಿ ಮತ್ತು ಎಮ್ಟಿಗಳನ್ನು ಒಂದು ಬ್ಯಾಂಕಿನ ಬೇರೆ ಶಾಖೆಗಳಿಗೆ ಮಾತ್ರ ಹಣ ರವಾನೆ ಮಾಡಬಹುದಿತ್ತು. ಆದರೆ , NEEFT ಮತ್ತು RTGS ಮೂಲಕ ಬೇರೆ ಬ್ಯಾಂಕುಗಳಿಗೆ ನೇರವಾಗಿ ಹಣ ರವಾನೆ ಮಾಡಬಹುದು. ಇದು ಅತ ಶೀಘ್ರವಾದ ಹಣ ರವಾನೆ ವ್ಯವಸ್ಥೆ. NEEFT ವ್ಯವಸ್ಥೆ ಯ ಮೂಲಕ ಮಾಡಿದರೆ ಒಂದು ದಿನ ತೆಗೆದುಕೊಳ್ಳಬಹುದು. ಆದರೆ RTGS ವ್ಯವಸ್ಥೆ ಒಂದೆರಡು ತಾಸುಗಳಲ್ಲಿ ಹಣ ರವಾನೆ ಮಾಡುತ್ತದೆ. ಬ್ಯಾಂಕುಗಳಲ್ಲಿ ಅಂತರಾಷ್ಟ್ರೀಯ ಹಣ ವರ್ಗಾವಣೆಗೆ ಮೊದಲಿನ ಟಿಟಿ ವ್ಯವಸ್ಥೆಯನ್ನು ಕೈಬಿಟ್ಟು SWIFT ಎನ್ನುವ ಅಂತರಾಷ್ಟ್ರೀಯ ಮಾನ್ಯಿಕೃತ ಬಾರೀ ಭದ್ರತೆ ಇರುವ ಅವಿಷ್ಕಾರವನ್ನು ಬಳಸಲಾಗುವುದು. ಅಂತರಾಷ್ಟ್ರೀಯ ಹಣ ವರ್ಗಾವಣೆ ಮಾಡುವವರು ಕಡ್ಡಾಯವಾಗಿ SWIFT ಹಣ ರವಾನೆ ವ್ಯವಸ್ಥೆಯನ್ನು ಬಳಸಲೇ ಬೇಕಾಗುತ್ತದೆ.
ಇನ್ನೊಂದು ವಿಶೇಷ ಆವಿಷ್ಕಾರವೆಂದರೆ, ಬ್ಯಾಂಕುಗಳಲ್ಲಿ 2000 ಕ್ಕಿಂತ ಹೆಚ್ಚು ವ್ಯವಹಾರ ಮಾಡಿದರೆ, ಅದರ ಸಂಕ್ಷಿಪ್ತ ವಿವರ ಕ್ಷಣ ಮಾತ್ರದಲ್ಲಿ ಖಾತೇದಾರನಿಗೆ sಞs ಸಂದೇಶದ ಮೂಲಕ ತಲುಪುತ್ತದೆ. ಬಹಳಷ್ಟು ಗ್ರಾಹಕರು ಇದನ್ನು ಬಳಸಿಕೊಳ್ಳುವುದಿಲ್ಲ. ಈ ಸೇವೆಗಾಗಿ ಬ್ಯಾಂಕುಗಳು ಆಕರಿಸುವ ಸಣ್ಣ ಶುಲ್ಕ ದ ಬಗೆಗೆ ತಕರಾರು ಎತ್ತುತ್ತಾರೆ. ಹಾಗೆಯೇ ತಮ್ಮ ಖಾತೆಯಲ್ಲಿರರುವ ಬ್ಯಾಲೆನ್ಸ್ ತಿಳಿಯಲು ಬ್ಯಾಂಕ್‌ಗೆ ತೆರಳಿ ವಿಚಾರಿಸುವ ಅಗತ್ಯವಿಲ್ಲ. ಬ್ಯಾಂಕ್‌ನ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿದರೆ ಬ್ಯಾಲೆನ್ಸ್ ಆತನ ಮೊಬೈಲ್ ಸ್ಕ್ರೀನ್ ಮೇಲೆ ಮೂಡುತ್ತದೆ. ಹಾಗೆಯೇ ಬ್ಯಾಂಕ್ ಖಾತೆಯನ್ನೂ ಆನ್ ಲೈನ್‌ನ°ಲ್ಲಿ ತೆರೆಯುವ ಸೌಲಭ್ಯವಿದೆ. ಬ್ಯಾಂಕುಗಳಲ್ಲಿ ಈ ಅವಿಷ್ಕಾರಗಳನ್ನು ಗ್ರಾಹಕ ಸ್ನೇಹಿಯಾಗಿ ನಿರಂತರವಾಗಿ, ಅನುಭವ, ಮತ್ತು ಫೀಡ್‌ಬ್ಯಾಕ್ ಆಧಾರದ ಮೇಲೆ ಬದಲಾಯಿಸುತ್ತಾರೆ.
Related Articles
Advertisement
ರಮಾನಂದ ಶರ್ಮಾ