Advertisement
ಬಿಜೆಪಿ ಸರಕಾರ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ರಚಿಸಿ 5ರಿಂದ 10ನೇ ತರಗತಿ ವರೆಗಿನ ಕೆಲವು ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಿತ್ತು. ಇದನ್ನು ಖಂಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಠ್ಯಪುಸ್ತಕವನ್ನು ಸಾರ್ವಜನಿಕವಾಗಿ ಹರಿದು ಆಕ್ರೋಶ ವ್ಯಕ್ತಪಡಿಸಿದ್ದರು. ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ನಡೆದ ಪ್ರತಿ ಭಟನೆಯಲ್ಲಿ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಮುಂತಾದವರು ಪಾಲ್ಗೊಂಡಿದ್ದರು.
Related Articles
Advertisement
ಈಗಾಗಲೇ ಪಠ್ಯ ಮುದ್ರಣಕ್ಕೆ ಸುಮಾರು 170 ಕೋಟಿ ರೂ. ಖರ್ಚಾಗಿದೆ. ಈಗ ಮತ್ತೆ ಪುಸ್ತಕ ಮುದ್ರಣ ದೊಡ್ಡ ಸಾಹಸವಾಗಲಿದೆ. ಜತೆಗೆ ಜಾಗತಿಕ ವಿದ್ಯಮಾನಗಳ ಪರಿಣಾಮ ಕಾಗದದ ದರವೂ ಹೆಚ್ಚಾಗಿದ್ದು ಪುಸ್ತಕ ಮುದ್ರಣ ದರ ಮತ್ತಷ್ಟು ಹೆಚ್ಚಾಗುವುದು ನಿಶ್ಚಿತ. ಹಾಗೆಯೇ ರಾಜ್ಯದಲ್ಲಿ ಕಾಗದದ ಮಿಲ್‌ಗಳಿಲ್ಲ. ಇದರಿಂದಾಗಿ ಸಕಾಲದಲ್ಲಿ ಪುಸ್ತಕ ಸರಬರಾಜು ಮಾಡುವುದು ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯಪುಸ್ತಕ ಮುಂದುವರಿಯುವ ಸಾಧ್ಯತೆಗಳು ಹೆಚ್ಚಿವೆ. ಆದರೂ ಹೊಸ ಸರಕಾರ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದು ಮುಖ್ಯ. ನಾವೀಗ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಹೇಳುತ್ತಾರೆ.
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ| ಬಿ.ವಿ. ವಸಂತ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ಮೂಡಂಬಡಿತ್ತಾಯ ಅವರು ರೂಪಿಸಿದ್ದ ಪಠ್ಯ ಪುಸ್ತಕವನ್ನು ಬರಗೂರು ರಾಮಚಂದ್ರಪ್ಪ ಅವರ ಸಮಿತಿ ಪರಿಷ್ಕರಿಸಿದೆ. ಆ ಬಳಿಕ ಚಕ್ರತೀರ್ಥ ಸಮಿತಿ ಮತ್ತೆ ಪರಿಷ್ಕರಿಸಿದೆ. ಆದ್ದರಿಂದ ಪದೇಪದೆ ಪರಿಷ್ಕರಿಸಲು ಪಠ್ಯಪುಸ್ತಕ ರಾಜಕೀಯ ಪಕ್ಷದ ಪ್ರಣಾಳಿಕೆಯಲ್ಲ. ದೇಶದ್ರೋಹದ ಅಂಶಗಳಿದ್ದರೆ ಪರಿಷ್ಕರಿಸಲಿ. ಆದರೆ ನಾಡಿನ ಶೈಕ್ಷಣಿಕ, ಸಾಂಸ್ಕೃತಿಕ ಅಂಶಗಳನ್ನು ಹೊಂದಿರುವ, ಮಕ್ಕಳನ್ನು ಸತøಜೆಗಳನ್ನಾಗಿ ರೂಪಿಸುವ ಅಂಶಗಳಿರುವ ಪಠ್ಯವನ್ನು ಪರಿಷ್ಕರಿಸಬಾರದು. ಪಠ್ಯದಲ್ಲಿ ಭಾರತೀಕರಣ ಇರಬೇಕು ಎಂದು ಅಭಿಪ್ರಾಯಪಟ್ಟರು.
ಪಠ್ಯ ಪುಸ್ತಕ ಸಂವಿಧಾನದ ಆಶಯವನ್ನು ಬಿಂಬಿಸ ಬೇಕೇ ಹೊರತು ಪಕ್ಷದ, ವ್ಯಕ್ತಿಯ ಸಿದ್ಧಾಂತವನ್ನಲ್ಲ. ಆದ್ದ ರಿಂದ ಶಿಕ್ಷಣ ತಜ್ಞರು, ವಿಷಯ ತಜ್ಞರನ್ನು ಒಳಗೊಂಡು ನಿಯಮ ಪ್ರಕಾರ ಪಠ್ಯಪುಸ್ತಕ ಪರಿಷ್ಕರಣೆ ನಡೆಯ ಬೇಕೇ ಹೊರತು ಆತುರ ದಿಂದಲ್ಲ. ಈ ನಿಟ್ಟಿ ನಲ್ಲಿ ಮುಂದಿನ ಸರಕಾರ ವಿವೇಕದ ತೀರ್ಮಾನ ಕೈಗೊಳ್ಳಲಿ.– ನಿರಂಜನಾರಾಧ್ಯ, ಶಿಕ್ಷಣ ತಜ್ಞ – ರಾಕೇಶ್ ಎನ್. ಎಸ್