Advertisement

ಶರಣರ ತತ್ವದಿಂದ ಸಮಾಜದಲ್ಲಿ ಬದಲಾವಣೆ: ತೇಗಲತಿಪ್ಪಿ

11:10 AM Dec 10, 2021 | Team Udayavani |

ಚಿಂಚೋಳಿ: ಮನುಷ್ಯ ಸಂಬಂಧಗಳಲ್ಲಿ ಬಿರುಕು ಕಾಣುತ್ತಿರುವ ದಿನಗಳಲ್ಲಿ ಸಮಾಜ ಎದುರಿಸುತ್ತಿರುವ ಮಾನವೀಯತೆಯ ಬರ ನೀಗಿಸಲು ಶರಣರ ಪುರಾಣ, ಪುಣ್ಯಕತೆ, ಸತ್ಸಂಗಗಳು ಸಮಾಜದಲ್ಲಿ ಬದಲಾವಣೆ ತರಲು ಸಹಕಾರಿಯಾಗಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

Advertisement

ತಾಲೂಕಿನ ರಾನಾಪುರದಲ್ಲಿ ದಿವಂಗತ ತಿಪ್ಪಣ್ಣ ನಾಗಪ್ಪ ದಂಪತಿಯ 26ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಶ್ರೀ ಗುರು ಕುಮಾರ ಪಂಚಾಕ್ಷರೇಶ್ವರ ಸಂಗೀತ ಕಲಾ ವೇದಿಕೆ ಆಯೋಜಿಸಿದ್ದ ಮಹಾದಾಸೋಹಿ ಕಲಬುರಗಿಯ ಶರಣಬಸವೇಶ್ವರ ಪುರಾಣ ಮಹೋತ್ಸವದ ಸಮಾರೋಪ ಉದ್ಘಾಟಿಸಿ ಹಾಗೂ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ತಂದೆ-ತಾಯಿ ಸ್ಮರಣೆಯಲ್ಲಿ ಇಂತಹ ಸಂದೇಶ ಸಾರುವ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಇವುಗಳಿಂದ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಮಾನವೀಯ ಮೌಲ್ಯ ವೃದ್ಧಿಸುತ್ತವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಮಾದರಿ ಸಮಾಜ ನಿರ್ಮಾಣ ಆಗುತ್ತದೆ ಎಂದರು.

ಐನಾಪುರದ ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಪಂಚಾಕ್ಷರಿ ದೇವರು ಸಾನ್ನಿಧ್ಯ ವಹಿಸಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಡಿ. ಶೇರಿಕಾರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ನಿಡವಂಚಾದ ಮೈತ್ರಾದೇವಿ ತಾಯಿ, ಚಂದನಕೇರಾದ ರಾಮರಾವ್‌ ಪಾಟೀಲ ಮಾತನಾಡಿದರು.

ಪ್ರಥಮ ದರ್ಜೆ ಗುತ್ತಿಗೆದಾರ ಜಗದೀಶ ಮರಪಳ್ಳಿ, ಕಾಳೇಶ್ವರ ರಾಮಗೊಂಡ, ಶರಣಗೌಡ ಪಾಟೀಲ, ಚಾಂದ ಪಟೇಲ್‌, ಜ್ಯೋತಿ ನಾಗೇಂದ್ರ ರಾಣಾಪುರ, ಪೂಜಾ ಶಿವರುದ್ರ, ಶಾರದಾ ನವಲಿಂಗ, ಸಂಗ್ರಾಮ ಕೊಟಗಾ ಇದ್ದರು. ನವಲಿಂಗ ಪಾಟೀಲ ನಿರೂಪಿಸಿದರು, ಪುನೀತ್‌ ವಂದಿಸಿದರು. ಗದುಗಿನ ಟಿ.ಎಂ ಪಂಚಾಕ್ಷರ ಶಾಸ್ತ್ರೀ ಪುರಾಣ ಕಾರ್ಯಕ್ರಮ ನಡೆಸಿಕೊಟ್ಟರು. ನಾಗೇಂದ್ರ ರಾಣಾಪುರ, ಪುನೀತ್‌, ವಿನೂತ್‌, ಪೂಜಾ ಶಿವರುದ್ರ, ಕರಬಸಯ್ಯ ಯಲಮಡಗಿ ಮತ್ತಿತರರು ರಾತ್ರಿಯಿಡಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇದಕ್ಕೂ ಮುನ್ನ ಹಾಸ್ಯಕಲಾವಿದ ನವಲಿಂಗ ಪಾಟೀಲ ಮಿಮಿಕ್ರಿ ನಡೆಸಿಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next