Advertisement

Parle-G ಬಿಸ್ಕಟ್‌ ಪ್ಯಾಕೆಟ್‌ನಲ್ಲಿ ಬದಲಾವಣೆ; ಪಾರ್ಲೆ-ಜಿ ಆಯ್ತು ಬುನ್‌ ಶಾ-ಜಿ!

08:34 PM Dec 28, 2023 | Pranav MS |

ನವದೆಹಲಿ: ಭಾರತೀಯರಿಗೆ ಬಾಲ್ಯದಿಂದಲೇ ಚಿರಪರಿಚಿತವಾಗಿರುವ ಪಾರ್ಲೆ-ಜಿ ಬಿಸ್ಕಟ್‌ ತನ್ನ ಪ್ಯಾಕೆಟ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಪಾರ್ಲೆ-ಜಿ ಪ್ಯಾಕೆಟ್‌ ಮೇಲೆ ಬಾಲಕಿಯ ಚಿತ್ರದ ಬದಲು ಇನ್‌ಫ್ಲುಯೆನ್ಸರ್‌ ಜೆರ್ವಾನ್‌ ಜೆ ಬುನ್‌ಶಾ ಅವರ ಚಿತ್ರವನ್ನು ಹಾಕಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ, ಇದು ತಾತ್ಕಾಲಿಕ ಮಾತ್ರ.

Advertisement

ಹಾಸ್ಯದ ವಿಡಿಯೋಗಳಿಂದ ಜನಪ್ರಿಯವಾಗಿರುವ ಬುನ್‌ಶಾ ಅವರು ತಮ್ಮ ವಿಡಿಯೋ ಒಂದರಲ್ಲಿ, ಹಿಂದಿ ಸಿನಿಮಾ “ರಾಮ್‌ ಲಖನ್‌”ನ ಪ್ರಸಿದ್ಧ ಸಂಭಾಷಣೆ, “ಐ ಜೀ, ಓ ಜೀ” ಕುರಿತು ಪ್ರಸ್ತಾಪಿಸುತ್ತಾ, “ನೀವು ಏನಾದರೂ ಪಾರ್ಲೆ-ಜಿ ಮಾಲೀಕರನ್ನು ಭೇಟಿಯಾದರೆ ಏನೆಂದು ಸಂಬೋಧಿಸುತ್ತೀರಿ?. ಪಾರ್ಲೆ ಸರ್‌, ಮಿಸ್ಟರ್‌ ಪಾರ್ಲೆ ಅಥವಾ ಪಾರ್ಲೆ ಜಿ?.

ಈ ವಿಡಿಯೋ ಅನ್ನು ಗಮನಿಸಿದ ಪಾರ್ಲೆ-ಜಿ ಆಡಳಿತ, ಅದಕ್ಕೆ ಪ್ರತಿಕ್ರಿಯಿಸಿ, “ಬುನ್‌ಶಾ ಜೀ ನೀವು ನಮ್ಮನ್ನು ಓ ಜೀ ಎಂದು ಸಂಬೋಧಿಸಬಹುದು” ಎಂದು ಹೇಳಿದೆ. ಜತೆಗೆ ಪಾರ್ಲೆ-ಜಿ ಪ್ಯಾಕೆಟ್‌ ಮೇಲೆ ಬಾಲಕಿಯ ಚಿತ್ರದ ಬದಲಾಗಿ ಬುನ್‌ಶಾ ಅವರ ಚಿತ್ರವನ್ನು ಹಾಕಿ ಧನ್ಯವಾದ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next