Advertisement

‘ಶಿಕ್ಷಣ ಕ್ಷೇತ್ರದ ಬದಲಾವಣೆ ಒಪ್ಪುವ ಮನಃಸ್ಥಿತಿ ಬರಲಿ’

12:26 AM Jun 29, 2019 | Team Udayavani |

ಬಂಟ್ವಾಳ: ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳಾದಾಗ ಒಪ್ಪಿಕೊಳ್ಳುವ ಮನೋಸ್ಥಿತಿ ನಿರ್ಮಾಣವಾಗಬೇಕು. ಆಗ ಶಿಕ್ಷಣ ದೃಢವಾಗುತ್ತದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಹೇಳಿದರು.

Advertisement

ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾ ಏವಿದ್ಯಾಲಯದ ದಶಮಾನೋತ್ಸವ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ, ರಾಷ್ಟ್ರಾಭಿಮಾನ- ಸಂಸ್ಕಾರ- ಸಂಸ್ಕೃತಿ ಬಿಂಬಿ ಸುವ, ಮಾನಸಿಕ- ಶಾರೀರಿಕ- ಬೌದ್ಧಿಕ- ಸಾಮಾಜಿಕ- ಆಧ್ಯಾತ್ಮಿಕ ಆಯಾಮಗಳ ಮೂಲಕ ಇಲ್ಲಿ ಶಿಕ್ಷಣ ನೀಡುತ್ತಿರುವುದು ವಿಶೇಷ ಎಂದರು

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ದೇಶದ ಗರಿಮೆ, ಹಿರಿಮೆ, ಸಂಸ್ಕಾರ, ಸಂಸ್ಕೃತಿಯನ್ನು ಶಿಕ್ಷಣದ ಜತೆಗೆ ಎತ್ತಿ ಹಿಡಿಯುವ ವಿದ್ಯಾಸಂಸ್ಥೆಗಳ ಅವಶ್ಯಕತೆ ಇದ್ದು, ನಮ್ಮ ಸಂಸ್ಥೆ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಎನ್‌.ಎಂ.ಪಿ.ಟಿ. ಅಧ್ಯಕ್ಷ ಎ. ವೆಂಕಟ ರಮಣ ಅಕ್ಕರಾಜು ಮಾತನಾಡಿ, ಈ ಶಿಕ್ಷಣ ಸಂಸ್ಥೆಯು ಮಾದರಿಯಾಗಿದ್ದು, ಮುಂದೊಂದು ದಿನ ಸ್ವರ್ಣ ಭಾರತ ಕಾಣುವ ಭರವಸೆ ಇದೆ ಎಂದರು. ಆರ್‌. ಟಿ.ಐ. ಕಮಿಷನರ್‌ ಸಂತೋಷ್‌ ಎಲ್. ಪಾಟೀಲ್ ಪ್ರವೇಶೋತ್ಸವಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕುಡಚಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರಾಜೀವ ಮಾತನಾಡಿ, ವಿದ್ಯಾರ್ಥಿಯ ವಿದ್ಯಾಭ್ಯಾಸವು ಭಾರತಮಾತೆಗೆ ಮುಡಿಪಾ ಗಿರಲಿ ಎಂದರು. ಚಲನಚಿತ್ರ ನಿರ್ಮಾಪಕ ಟಿ. ಆರ್‌. ಚಂದ್ರಶೇಖರ ಮಾತನಾಡಿ, ಇಲ್ಲಿ ಸಿಗುವ ಶಿಕ್ಷಣ ದೇಶದ ಮೂಲೆಮೂಲೆಗಳಿಗೂ ಪಸರಿಸಲಿ ಎಂದು ಆಶಿಸಿದರು. ದಶಮಾನೋತ್ಸವ ಸ್ಮರಣಾರ್ಥವಾಗಿ ತೆಂಗಿನ ಸಸಿಯನ್ನು ನೆಡಲಾಯಿತು.

Advertisement

ಉದ್ಯಮಿ ಪ್ರಕಾಶ್‌ ಭಟ್, ಪ್ಯಾರಾ ಒಪಿಂಪಿಕ್‌ ಸ್ವರ್ಣ ಪದಕ ವಿಜೇತ ನಯಮತ್ತುಲ್ಲಾ ಖಾನ್‌, ಮುನೀಶ್‌ ಕುಮಾರ್‌, ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್‌ ಎನ್‌., ರಾಷ್ಟ್ರ ಸೇವಿಕಾ ಸಮಿತಿ ದಕ್ಷಿಣ ಪ್ರಾಂತ ಕಾರ್ಯ ಕಾರಿಣಿ ಸದಸ್ಯೆ ಡಾ| ಕಮಲಾ ಪ್ರಭಾಕರ ಭಟ್ ಉಪಸ್ಥಿತರಿದ್ದರು. ಬಂಕಿಮ ಚಂದ್ರ ಚಟರ್ಜಿ ಜನ್ಮದಿನದ ಅಂಗವಾಗಿ ಹಿರಿಯ ವಿದ್ಯಾರ್ಥಿನಿ ವಿದ್ಯಾಶ್ರೀ ವಂದೇ ಮಾತರಂ ಹಾಡಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತಿಲಕ ಧಾರಣೆ ಮಾಡಲಾಯಿತು. ವಿದ್ಯಾರ್ಥಿ ಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ಅಗ್ನಿಗೆ ಹವಿಸ್ಸನ್ನು ಅರ್ಪಿಸಿದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಸಾಕ್ಷ್ಯಾ ವಂದಿಸಿ, ಭವಾನಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next