Advertisement

Exam; ಮೌಲ್ಯಾಂಕನ ಪರೀಕ್ಷೆ ಮಾರ್ಗಸೂಚಿಯಲ್ಲಿ ಬದಲಾವಣೆ

11:59 PM Jan 01, 2024 | Team Udayavani |

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು 2023-24ನೇ ಸಾಲಿನ 5, 8 ಮತ್ತು 9ನೇ ತರಗತಿ ಮೌಲ್ಯಾಂಕನ ಪರೀಕ್ಷೆಗೆ ಪರಿಷ್ಕೃತ ಪಠ್ಯವಸ್ತು ಮತ್ತು ಅಂಕಗಳನ್ನು ನಿಗದಿಪಡಿಸಿದೆ.

Advertisement

ಮೌಲ್ಯಾಂಕನದಲ್ಲಿ ಪ್ರಥಮ ಭಾಷೆಗೆ 100 ಅಂಕ, ದ್ವಿತೀಯ, ತೃತೀಯ ಭಾಷೆ ಮತ್ತು ಕೋರ್‌ ವಿಷಯಗಳಿಗೆ 80 ಅಂಕಗಳಂತೆ 500 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಬೇಕು. ಅಂತಿಮವಾಗಿ ಆಂತರಿಕ ಮೌಲ್ಯಮಾಪನದ ಅಂಕಗಳು ಮತ್ತು ಎಸ್‌ಎ-2 ಬದಲಾಗಿ ನಡೆಸುವ ಲಿಖೀತ ಪರೀಕ್ಷೆಯ ಅಂಕಗಳನ್ನು ಪರಿಗಣಿಸಬೇಕೆಂದು ಸೂಚಿಸಲಾಗಿದೆ.

5ನೇ ತರಗತಿ ಮೌಲ್ಯಾಂಕನ ಪ್ರಕ್ರಿಯೆ ಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ನೀಡಿರುವಂತೆ ನವೆಂಬರ್‌-2023ರಿಂದ ಫೆಬ್ರವರಿ -2024ರ ವರೆಗಿನ ಪಠ್ಯವಸ್ತುವನ್ನು ಪರಿಗಣಿಸಬೇಕು. ಎಲ್ಲ ಭಾಷೆ ಮತ್ತು ಕೋರ್‌ ವಿಷಯಗಳಿಗೆ 10 ಅಂಕಗಳಿಗೆ ಮೌಖೀಕ ಮತ್ತು 40 ಅಂಕಗಳಿಗೆ ಲಿಖೀತ, ಒಟ್ಟು 50 ಅಂಕಗಳಿಗೆ ಮೌಲ್ಯಾಂಕನ ನಡೆಸಿ 20 ಅಂಕಗಳಿಗೆ ಪರಿವರ್ತಿಸುವುದು. ಫಲಿತಾಂಶ ನಿರ್ಣಯಿಸಲು ಎಫ್‌ಎ-1,2,3 ಮತ್ತು 4ಕ್ಕೆ ತಲಾ 15 ಅಂಕಗಳು ಎಸ್‌ಎ-1 ಮತ್ತು ಎಸ್‌ಎ-2ನ ತಲಾ 20 ಅಂಕ ಸೇರಿ 100 ಅಂಕಗಳಿಗೆ ಪರಿಗಣಿಸು ವುದು. ಎಸ್‌ಎ-2 ಹೊರತುಪಡಿಸಿ ಸ್ಯಾಟ್ಸ್‌ನಲ್ಲಿ ಅಂಕ ದಾಖಲಿಸಿರು ವುದರಿಂದ ಎಸ್‌-2 ಅಂಕ ಸೇರಿಸಿ ಫಲಿತಾಂಶ ಪ್ರಕಟಿಸಲು ಸೂಚಿಸಲಾಗಿದೆ.

8ನೇ ತರಗತಿ ಮೌಲ್ಯಾಂಕನ ಎಸ್‌ಎ-2 ಮೌಲ್ಯಾಂಕನವನ್ನು ವಾರ್ಷಿಕ ಪಠ್ಯವಸ್ತುವನ್ನು ಪರಿಗಣಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ 9 ಮತ್ತು 10ನೇ ತರಗತಿ ಪರೀಕ್ಷೆ ಬರೆಯಲು ಅಭ್ಯಾಸಕ್ಕೆ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ 2023ರ ಜೂನ್‌ನಿಂದ ಫೆಬ್ರವರಿ-2024ರ ವರೆಗಿನ ವಾರ್ಷಿಕ ಪಠ್ಯವಸ್ತುವನ್ನು ಪರಿಗಣಿಸಬೇಕು. ಎಲ್ಲ ಭಾಷೆ ಮತ್ತು ಕೋರ್‌ ವಿಷಯ ಗಳಿಗೆ 10 ಅಂಕಗಳಿಗೆ ಮೌಖೀಕ ಮತ್ತು 50 ಅಂಕಗಳಿಗೆ ಲಿಖೀತ ಸಹಿತ 60 ಅಂಕಗಳನ್ನು 30ಕ್ಕೆ ಪರಿವರ್ತಿಸಿ ಫಲಿತಾಂಶ ನೀಡಬೇಕು. ಎಫ್‌ಎ-1,2,3 ಮತ್ತು 4ಕ್ಕೆ ತಲಾ 10 ಅಂಕಗಳಂತೆ 40 ಅಂಕ ಎಸ್‌ಎ-1 ಮತ್ತು ಎಸ್‌ಎ-2 ತಲಾ 30 ಅಂಕಗಳಂತೆ 60 ಅಂಕವನ್ನು 100ಕ್ಕೆ ಪರಿವರ್ತಿಸಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next