ಕಲಬುರಗಿ: ಸ್ನಾತಕೋತ್ತರ ಶಿಕ್ಷಣ ಕಾರ್ಯಕ್ರಮಗಳ ಅಡಿಯಲ್ಲಿ ಕೌಶಲ್ಯ ಮತ್ತು ಅಪ್ರಂಟಿಸ್‌ಶಿಪ್ ಆಧಾರಿತ ಪದವಿಪೂರ್ವ, ಡಿಪ್ಲೋಮಾ ಕೋರ್ಸ್ಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯ ಎಂದು ಕೌಶಲ್ಯ ಅಭಿವೃದ್ಧಿ ನಿಗಮ ಸಚಿವಾಲಯ ಆಧಿಧೀನದ ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್‌ನ ಪ್ರೊ| ಎಸ್. ಗಣೇಶ ಹೇಳಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಬುಧವಾರ ಬಿಬಿಎ ಲಾಜಿಸ್ಟಿಕ್ಸ್, ಬಿಎಂಎಸ್ ಏವಿಯೇಷನ್ ಸರ್ವೀಸಸ್, ಏರ್ ಕಾರ್ಗೋ, ಪಿಜಿ ಡಿಪ್ಲೋಮಾ ಇನ್ ಡಾಟಾ ಸೈನ್ಸ್ ಫಾರ್ ಲಾಜಿಸ್ಟಿಕ್ಸ್ ಕುರಿತು ಆಯೋಜಿಸಿದ್ದ ಸಂವೇದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಕೌಶಲ್ಯ ಪರಿಚಯಿಸಲು ಶಿಕ್ಷಣ ನೀತಿ ಮತ್ತು ಎಂಎಚ್‌ಆರ್‌ಡಿ ಹೊಸ ಪ್ರಯತ್ನ ನಡೆಸಿದೆ. ಪದವಿಪೂರ್ವ ಮತ್ತು ಸ್ನಾತಕೋತ್ತರ ಶಿಕ್ಷಣ ಹಂತದಲ್ಲಿ ಅಪ್ರಂಟಿಸ್‌ಶಿಪ್ ಆಧಾರಿತ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಕೌಶಲ್ಯ ಮತ್ತು ವೃತ್ತಿ ಮನೋಭಾವ ಒದಗಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆಸಕ್ತಿ ಸೃಷ್ಟಿಸುತ್ತದೆ ಎಂದರು. ಉನ್ನತ ಶಿಕ್ಷಣ ಮತ್ತು ಕಾಲೇಜುಗಳು ಜ್ಞಾನದ ಉತ್ಪನ್ನಗಳನ್ನು ತಯಾರು ಮಾಡುತ್ತವೆ. ಆದರೆ ವಿದ್ಯಾರ್ಥಿಗಳಲ್ಲಿ ಕೌಶಲ್ಯಾಧರಿತವಾಗಿ ಕೆಲಸ ಮಾಡುವ ಮನೋಭಾವದ ಕೊರತೆಯಿದೆ ಎಂದರು.
ಸ್ನಾತಕೋತ್ತರ ಪದವಿ ಮುಗಿದ ನಂತರ ಲಾಭದಾಯಕ ಉದ್ಯೋಗ ಪಡೆಯುವಲ್ಲಿ ವಿದ್ಯಾರ್ಥಿಗಳಲ್ಲಿ ಕೆಲವೊಂದು ಪ್ರಮುಖ ನ್ಯೂನತೆಗಳಿವೆ. ಪ್ರಸ್ತುತ ಸರ್ಕಾರ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಮಟ್ಟದಲ್ಲಿ ಕೌಶಲ್ಯ ಮತ್ತು ಅಪ್ರಂಟಿಸ್‌ಶಿಪ್ ಆಧಾರಿತ ಕೋರ್ಸ್‌ಗಳನ್ನು ಪರಿಚಯಿಸಲು ನಿರ್ಧರಿಸಿದೆ. ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಿಂದ ಹೊರಬರುವ ಪದವೀಧರ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳು ಉದ್ಯೋಗಕ್ಕೆ ಸಿದ್ಧರನ್ನಾಗಿಸಬೇಕು ಎಂದರು. ಮಹಿಳೆಯರಿಗೆ ಪ್ರತ್ಯೇಕವಾಗಿ ಬಿಎಂಎಸ್ ಏವಿಯೇಷನ್ ಸರ್ವೀಸಸ್ ಮತ್ತು ಏರ್ ಕಾರ್ಗೋ ಕೋರ್ಸ್‌ಗಳನ್ನು ಪ್ರಪ್ರಥಮ ಬಾರಿಗೆ ಪರಿಚಯಿಸಿದ್ದು, ಈ ಸಂಸ್ಥೆಯಾಗಿದೆ.
ಮಹಿಳೆಯರಿಗಾಗಿ ಪದವಿಪೂರ್ವ ಮಟ್ಟದಲ್ಲಿ ಪ್ರತ್ಯೇಕ ಕೋರ್ಸ್ ಪರಿಚಯಿಸಿದ್ದ ಶ್ರೇಯಸ್ಸು ಶರಣಬಸವ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ ಎಂದು ಹೇಳಿದರು. ಶರಣಬಸವ ವಿಶ್ವವಿದ್ಯಾಲಯವನ್ನು ದೇಶದ ಅನೇಕ ಶಿಕ್ಷಣ ಸಂಸ್ಥೆಗಳು ಅನುಕರಿಸಬೇಕಿದೆ. ವಿಶ್ವವಿದ್ಯಾಲಯವು ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಮೂರು ಕೋರ್ಸ್‌ಗಳನ್ನು ಮಂಜೂರು ಮಾಡಿದೆ ಎಂದು ಹೇಳಿದರು. ಪ್ರೊ| ಗಣೇಶ ಮಾತನಾಡಿ, ಪ್ರಸ್ತುತ ಸುಮಾರು 50 ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ
ಕೇಂದ್ರಗಳು ದೇಶಾದ್ಯಂತ ಈ ಕೋರ್ಸ್‌ನ್ನು ಪರಿಚಯಿಸಿವೆ ಎಂದರು.
ಶರಣಬಸವ ವಿಶ್ವವಿದ್ಯಾಲಯ ಕುಲಪತಿ ಡಾ| ನಿರಂಜನ್ ವಿ. ನಿಷ್ಠಿ ಅಧ್ಯಕ್ಷತೆ ವಹಿಸಿದ್ದ ರು. ಕೌಶಲ್ಯ ಮತ್ತು ಅಕಾಡೆಮಿ ಲಿಂಕೇಜ್, ಲಾಜಿಸ್ಟಿಕ್ಸ್ ಸೆಕ್ಟರ್
ಸ್ಕಿಲ್ ಕೌನ್ಸಿಲ್ ಮುಖ್ಯಸ್ಥೆ ಪ್ರೊ| ಗಾಯತ್ರಿ ಹರೀಶ ಮಾತನಾಡಿದರು. ವಿಶ್ವವಿದ್ಯಾನಿಲಯ ಕುಲಸಚಿವ ಡಾ| ಅನಿಲಕುಮಾರ ಬಿಡವೆ ಸ್ವಾಗತಿಸಿದರು. ವಿವಿ
ಸಮಕುಲಪತಿ ಡಾ| ವಿ.ಡಿ. ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರೀ, ಡೀನ್ ಡಾ| ಲಕ್ಷ್ಮೀ ಪಾಟೀಲ ಮಾಕಾ, ಬಿಸಿನೆಸ್ ಸ್ಟಡೀಸ್
ಡೀನ್ ಡಾ|ಎಸ್.ಎಚ್. ಹೊನ್ನಳ್ಳಿ ಇದ್ದರು.