Advertisement

ಸಂವಿಧಾನ ಬದಲಿಸುವವರನ್ನೇ ಬದಲಾಯಿಸಿ: ಪರಂ

10:26 AM Apr 06, 2019 | Vishnu Das |

ಬೆಂಗಳೂರು: ಸಂವಿಧಾನವನ್ನೇ ಬದಲಾಯಿಸಬೇಕು ಎಂದು ಹೊರಟವರನ್ನು ಈ ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಿದರೆ, ನಮ್ಮ ದೇಶ ಅರಾಜಕತೆಯತ್ತ ಸಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

Advertisement

ಇಂದಿರಾ ನಗರದ ಈಸ್ಟ್‌ ಕಲ್ಚರ್‌ ಅಸೋಸಿಯೇಷನ್‌ನಲ್ಲಿ ಆಯೋಜಿಸಿದ್ದ ಸಂವಿಧಾನ ರಕ್ಷಣೆಯಲ್ಲಿ ಯುವ ಜನರ ಪಾತ್ರ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಲವರ ದೃಷ್ಠಿಯಲ್ಲಿ ಸಂವಿಧಾನ ಭಿನ್ನವಾಗಿ ಕಾಣುತ್ತಿದೆ. ಅದನ್ನು ಬದಲಿಸಲು ಹೊರಟಿದ್ದಾರೆ. ಸಂವಿಧಾನದ ಅಡಿಪಾಯ ಅಲುಗಾಡಿಸುವ ಪ್ರಯತ್ನ ನಡೆದರೆ, ಇಡೀ ಸಮಾಜವೇ ಅಲುಗಾಡುತ್ತದೆ. ಅದರ ವಿರುದಟಛಿ ದೊಡ್ಡ ಆಂದೋಲನವೇ ನಡೆಯಲಿದೆ ಎಂದರು. ಸಂವಿಧಾನ ಹಾಗೂ ಮೀಸಲಾತಿ ವ್ಯವಸ್ಥೆ ಇಂದಿಗೂ ಪ್ರಸ್ತುತ. ಸಂವಿಧಾನದ ರಕ್ಷಣೆಗೆ ನಿಲ್ಲುವುದೇ ನಮ್ಮೆಲ್ಲರ ಜವಾಬ್ದಾರಿ. ಈ ಬಾರಿಯ ಚುನಾವಣೆಯಲ್ಲಿ ಶ್ರಮಿಕ ವರ್ಗ ಸೇರಿದಂತೆ ಎಲ್ಲ ವರ್ಗದ ಸಂವಿಧಾನ ರಕ್ಷಿಸುವ ಅಭ್ಯರ್ಥಿಗಳ ಪರ ನಿಲ್ಲದಿದ್ದರೆ, ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next