Advertisement

ಚಂದ್ರನ ಹಿಂಭಾಗದ ಅಧ್ಯಯನ ಮಾಡಿದ ಚೀನದ ಚೇಂಜ್‌ 4

12:17 AM May 17, 2019 | mahesh |

ಬೀಜಿಂಗ್‌: ಇದೇ ಮೊದಲ ಬಾರಿಗೆ ಚಂದ್ರನ ಹಿಂಭಾಗದಲ್ಲಿ ಇಳಿದ ಚೀನದ ಚೇಂಜ್‌ 4 ರೋವರ್‌ ಯುತು ಮಹತ್ವದ ಅಧ್ಯಯನಗಳನ್ನು ನಡೆಸಿದೆ. ಇಲ್ಲಿನ ರಾಸಾಯನಿಕ ಹಾಗೂ ಖನಿಜ ಗುಣಲಕ್ಷಣಗಳ ವಿವರಗಳನ್ನೂ ಭೂಮಿಗೆ ಕಳುಹಿಸಿದೆ. ಇದು ಭೂಮಿ ಹಾಗೂ ಇತರ ನೈಸರ್ಗಿಕ ಉಪಗ್ರಹಗಳ ಉಗಮದ ಬಗ್ಗೆ ಆಳ ಅಧ್ಯಯನಕ್ಕೆ ನೆರವಾಗಲಿದೆ.

Advertisement

ಜನವರಿಯಲ್ಲಿ ಯುತು 2 ಚಂದ್ರನ ಮೇಲೆ ಇಳಿದಿತ್ತು. ಯುತುವಿನಲ್ಲಿ ಅಳವಡಿಸಿದ ಇನ್‌ಫ್ರಾರೆಡ್‌ ಸ್ಪೆಕ್ಟ್ರೋ ಮೀಟರ್‌ ಬಳಸಿ ಶೋಧ ನಡೆಸಿದ ವಿಜ್ಞಾನಿಗಳಿಗೆ ಚೇಂಜ್‌ 4 ಲ್ಯಾಂಡ್‌ ಆದ ಭಾಗದಲ್ಲಿನ ಚಂದ್ರನ ಮಣ್ಣಿನಲ್ಲಿ ಒಲಿವಿನ್‌ ಹಾಗೂ ಪೈರಾಕ್ಸಿನ್‌ ಅಂಶ ಗಳು ಇರುವುದು ಕಂಡುಬಂದಿದೆ. ಈ ಬಗ್ಗೆ ಸಮಗ್ರ ವಿವರಗಳನ್ನು ನೇಚರ್‌ ನಿಯತಕಾಲಿಕೆಯಲ್ಲಿ ವಿವರಿಸಲಾಗಿದೆ.

ಚಂದ್ರನ ಮೇಲ್ಮೆ„ ರಚನೆ ಭೂಮಿಯಂತೆಯೇ ಇದೆ. ಮೇಲಿನ ಪದರ ಮಣ್ಣಿನಂತಿದ್ದು, ನಂತರದ ಪದರದಲ್ಲಿ ಒಲಿವಿನ್‌ ಹಾಗೂ ಪೈರಾಕ್ಸಿನ್‌ ಇದೆ. ಇದು ಕೆಳ ಪದರಗಳನ್ನು ಗಟ್ಟಿಯಾಗಿಸಿದೆ ಎಂದು ಸಂಶೋಧಕ ಲಿ ಚುನ್ಲ„ ಹೇಳಿ ದ್ದಾರೆ. ಈ ಮೇಲ್ಮೆ„ ಮಣ್ಣಿನ ಪದರವು ತುಂಬಾ ಗಟ್ಟಿಯಾಗಿದ್ದುದರಿಂದ ಯಾವುದೇ ರಾಸಾಯನಿಕ ಚಟುವಟಿಕೆ ನಡೆಯುತ್ತಿಲ್ಲ. ಅಲ್ಲದೆ ಪದರಗಳ ಚಲನೆಯೂ ಕೋಟ್ಯಂತರ ವರ್ಷಗಳಿಂದ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

ಚೀನದ ಯುತು ಲ್ಯಾಂಡರ್‌ ವಾನ್‌ ಕರ್ಮನ್‌ ಎಂಬ ಕುಳಿಯಲ್ಲಿ ಇಳಿದಿದ್ದು, ಈ ಕುಳಿ ಸುಮಾರು 2300 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇದು ಚಂದ್ರನ ಕಾಲು ಭಾಗವನ್ನು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next