Advertisement
ಪ್ರಮುಖ ಕೂಟಗಳಲ್ಲಿ ಪದಕ ಗೆದ್ದಿರುವ ಚಾಂಗ್ ವೀಗೆ ಇದುವರೆಗೆ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್ ಕೂಟಗಳಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಈ ಕನಸು ನನಸಾಗುವ ಮೊದಲೇ ಅವರು ಮೂಗಿನ ಕ್ಯಾನ್ಸರ್‌ಗೆ ತುತ್ತಾದರು. ತಜ್ಞ ವೈದ್ಯರ ಪರಿಣಾಮಕಾರಿ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಹಂತದಲ್ಲೇ ಗುರುವಾರ ವೃತ್ತಿ ಜೀವನಕ್ಕೆ ದಿಢೀರ್ ವಿದಾಯ ಘೋಷಿಸಿದ್ದಾರೆ.
ಚಾಂಗ್ ವೀ ಓರ್ವ ಪ್ರಬುದ್ಧ ಆಟಗಾರನಾಗಿ ತಮ್ಮ ಆಧಿಪತ್ಯ ಸ್ಥಾಪಿಸಿದ್ದರು. ಒಟ್ಟು 348 ವಾರಗಳ ಕಾಲ ವಿಶ್ವ ನಂ.1 ರ್‍ಯಾಂಕಿಂಗ್ ಆಟಗಾರನಾಗಿ ಮೆರೆದಿದ್ದರು. 3 ಬಾರಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಚಾಂಗ್ ವೀ, ಮಲೇಶ್ಯಕ್ಕೆ ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದುಕೊಟ್ಟ ಮೊದಲ ಆಟಗಾರನೆಂಬ ಹಿರಿಮೆ ಹೊಂದಿದ್ದಾರೆ. ಕಷ್ಟದ ನಿರ್ಧಾರ: ಚಾಂಗ್ ವೀ
“ನನ್ನ ಆರೋಗ್ಯದ ದೃಷ್ಟಿಯಿಂದ ನಿವೃತ್ತಿ ತೆಗೆದು ಕೊಂಡಿದ್ದೇನೆ, ಇದಕ್ಕಾಗಿ ನನಗೆ ವಿಷಾದವಿಲ್ಲ.’ ಒಲಿಂಪಿಕ್ಸ್ ಬಳಿಕ ನಿವೃತ್ತಿ ತೆಗೆದುಕೊಳ್ಳಲು ನಿರ್ಧರಿಸಿದ್ದೆ. ಆದರೆ ಹಠಾತ್ ಆಗಿ ನಿರ್ಧಾರ ತೆಗೆದುಕೊಳ್ಳ ಬೇಕಾಯಿತು. ಅನಾರೋಗ್ಯದ ಕಾರಣದಿಂದ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದೇನೆ. ಇಷ್ಟು ವರ್ಷದ ಕ್ರೀಡಾ ಪ್ರಯಾಣ ನನಗೆ ಸಂತೃಪ್ತಿ ತಂದಿದೆ. ‘ ಎಂದರು ಲೀ ಚಾಂಗ್ ವೀ.
Related Articles
Advertisement