Advertisement

ಶ್ರೀಕಾಂತ ಹೆಗಡೆ ಪೇಟೇಸರರಿಗೆ ದಿ.ಚಂದುಬಾಬು ಪ್ರಶಸ್ತಿ

03:12 PM Jul 10, 2022 | Team Udayavani |

ಶಿರಸಿ: ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡಿದ ಚಂದುಬಾಬು ಅವರ ಹೆಸರಿನಲ್ಲಿ ನೀಡಲಾಗುವ ದಿ.ಚಂದುಬಾಬು ಪ್ರಶಸ್ತಿ-೨೦೨೨ನ್ನು ಈ ಬಾರಿ ಯಕ್ಷಗಾನ, ತಾಳಮದ್ದಲೆ ಸಹಿತ ಅತ್ಯಂತ ಹಳೆಯ ಕಾರ್ಯಕ್ರಮಗಳ ಧ್ವನಿ ಮುದ್ರಣ ಸಂಗ್ರಹಕಾರ ಶ್ರೀಕಾಂತ ಹೆಗಡೆ ಪೇಟೇಸರ ಅವರಿಗೆ ನೀಡಲಾಗುತ್ತಿದೆ.

Advertisement

ಯಕ್ಷ ಸಂಭ್ರಮದ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ ಈ ವಿಷಯ ಪ್ರಕಟಿಸಿದ್ದು, ಮೂಲತಃ ಸಿದ್ದಾಪುರ ತಾಲೂಕಿನ ಪೇಟೇಸರದ ಶ್ರೀಕಾಂತ ಹೆಗಡೆ ಅವರು, ಹಿಂದುಸ್ತಾನಿ ಸಂಗೀತಾಭ್ಯಾಸಿ, ಹವ್ಯಕ ಸಾಂಪ್ರದಾಯಿಕ ಹಾಡುಗಳ ಸಂಗ್ರಾಹಕರು. ಯಕ್ಷಗಾನ, ತಾಳಮದ್ದಲೆ, ಸಂಗೀತ ಕಾರ್ಯಕ್ರಮಗಳ ಸಂಯೋಜಕರು. ಮುಖ್ಯವಾಗಿ ಯಕ್ಷಗಾನ, ತಾಳಮದ್ದಲೆ, ಸಂಗೀತ ಸಹಿತ ಅತ್ಯಂತ ಹಳೆಯ ಕಾರ್ಯಕ್ರಮಗಳ ಧ್ವನಿ ಮುದ್ರಣ ಸಂಗ್ರಹಕಾರ, ಯೂಟ್ಯೂಬ್ ಮೂಲಕ ಇತರರಿಗೂ ಹಂಚುವವರು. ಶ್ರೀಕಾಂತ ನರಸಿಂಹ ಹೆಗಡೆ ಅವರ ಈ ಸದ್ದಿಲ್ಲದ ಕಲಾ ಸೇವೆಗೆ ಈ ಪ್ರಶಸ್ತಿ ನೀಡುವುದು ನಮಗೆ ಖುಷಿ ಹೆಚ್ಚಿಸಿದೆ ಎಂದಿದ್ದಾರೆ.

ಶ್ರೀಕಾಂತ ಹೆಗಡೆ ಅವರ ತಂದೆ ನರಸಿಂಹ ಹೆಗಡೆ ಅವರೂ ಭಾಗವತರಾಗಿ, ಮದ್ದಲೆವಾದಕರಾಗಿ, ಮುಮ್ಮೇಳದ ಕಲಾವಿದರಾಗಿ ಕೂಡ ಅನೇಕ ಶಿಷ್ಯರನ್ನು ಸಿದ್ಧ ಮಾಡಿದ್ದು ಗಮನಾರ್ಹ. ಅಪ್ಪನ ಕಲಾಸಕ್ತಿ ಮಗನಿಗೂ ಹರಿದು ಬಂದು ಇದೀಗ ಇವರ ಬಳಿ ಸುಮಾರು ಎರಡು ಸಾವಿರಕ್ಕೂ ಅಧಿಕ ಅಪರೂಪದ ಧ್ವನಿ ಮುದ್ರಣ ಇರುವದು ವಿಶೇಷವಾಗಿದೆ.

ಆಗಷ್ಟನಲ್ಲಿ ಯಕ್ಷ ಸಂಭ್ರಮ ಶಿರಸಿಯಲ್ಲಿ ನಡೆಸುವ ತಾಳಮದ್ದಲೆ ಸರಣಿಯ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಪ್ರಕಟನೆಯಲ್ಲಿ ಸಂಸ್ಥೆ ಕೋಶಾಧ್ಯಕ್ಷ ಚಂದು ಸೀತಾರಾಮ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next