Advertisement
ಚಿಕನ್, ಮಟನ್ ಖಾದ್ಯಗಳ ವಿಭಿನ್ನ ರುಚಿಯಿಂದಲೇ ಮನೆಮಾತಾದ ಹೋಟೆಲ್, “ಚಂದ್ರು, ನಿಮ್ಮ ಮನೆ’! ಇದರ ಮಾಲೀಕರು, ಶೇಷಾದ್ರಿಪುರಂನ ಚಂದ್ರಶೇಖರ್. 26 ವರ್ಷಗಳಿಂದ ಈ ಹೋಟೆಲ್ ನಡೆಸುತ್ತಾ, ಸ್ನೇಹಜೀವಿಯಾಗಿಯೂ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ, ಚಂದ್ರು ಅವರು ಹೋಟೆಲ್ ಆರಂಭಿಸುವ ಮೊದಲು, ವರನಟ ಡಾ. ರಾಜಕುಮಾರ್ ಅವರಿಗೆ ಮೇಕಪ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರಂತೆ.
ಚಂದ್ರು ಅವರ ತಾಯಿ, ಮನೆಯಲ್ಲಿ ರುಚಿಯಾಗಿ ಅಡುಗೆ ಮಾಡುತ್ತಿದ್ದರಂತೆ. ಮೇಕಪ್ ಮಾಡುತ್ತಿದ್ದರಲ್ಲ; ಅದೇ ಸಲುಗೆಯಲ್ಲಿ ಆಗೊಮ್ಮೆ ಈಗೊಮ್ಮೆ ತಮ್ಮ ಮನೆಯ ಊಟದ ರುಚಿಯನ್ನು ಅಣ್ಣಾವ್ರಿಗೆ ತೋರಿಸುವ ಅವಕಾಶ ಇವರಿಗೆ ಒದಗಿಬಂದಿತ್ತು. ಆ ರುಚಿ ಅಣ್ಣಾವ್ರ ಮನಸ್ಸನ್ನೂ ಗೆದ್ದಿತ್ತು. ಅದೇ ರುಚಿ ಜನರನ್ನೂ ತಲುಪಲಿ ಎಂಬ ರಾಜ್‌ಕುಮಾರ್ ಅವರ ಸಲಹೆ ಮೇರೆಗೆ ಈ ಹೋಟೆಲ್ ಹುಟ್ಟಿಕೊಂಡಿತಂತೆ. “ಅಮ್ಮನಿಂದ ಅಡುಗೆ ಕಲೆಯನ್ನು ಕಲಿತುಕೊಂಡೆ. ಅದೇ ರುಚಿಯನ್ನೇ ಗ್ರಾಹಕರಿಗೆ ಹಂಚುತ್ತೇನೆ’ ಎನ್ನುತ್ತಾರೆ ಚಂದ್ರು. ಈ ಹೋಟೆಲ್‌ನಲ್ಲಿ ಅವರ ಪತ್ನಿ ಹಾಗೂ ಮೂವರು ಕೆಲಸಗಾರರು ಸೇರಿ ಒಟ್ಟು ಐವರು ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಟೇಸ್ಟೇ, ಸೂಪರ್ ಹಿಟ್
“ಚಂದ್ರು, ನಿಮ್ಮ ಮನೆ’ ಹೋಟೆಲ್‌ನ ಊಟಕ್ಕೂ ಮನೆಯ ಊಟಕ್ಕೂ ಜಾಸ್ತಿ ವ್ಯತ್ಯಾಸವೇನೂ ಇಲ್ಲ. ಅದರಲ್ಲೂ ಚಿಕನ್, ಮಟನ್‌ನ ವೆರೈಟಿಗಳ ರುಚಿ ಇಲ್ಲಿ ಸೂಪರ್ ಹಿಟ್ ಆಗಿದೆ. ನಾಟಿಕೋಳಿ ಊಟ, ಪೆಪ್ಪರ್ ಚಿಕನ್, ಮಟನ್ ಚಾಪ್ಸ್, ಕೈಮಾ ಸಾರು, ಚಿಕನ್ ಬಿರಿಯಾನಿ ಸೇರಿದಂತೆ 19 ವಿವಿಧ ಐಟಂಗಳನ್ನು ಇಲ್ಲಿ ಬಹಳ ರುಚಿಕಟ್ಟಾಗಿ ತಯಾರಿಸಲಾಗುತ್ತದೆ. ಮುದ್ದೆಯೂಟವೂ ಇಲ್ಲಿದೆ.
Related Articles
ನೀವು ನಂಬಿ¤àರೋ, ಇಲ್ಲವೋ… ಈ ಹೋಟೆಲ್ ಇರೋದೇ 10*10 ವಿಸ್ತೀರ್ಣದಲ್ಲಿ. ಆದರೆ, ಈ ಹೋಟೆಲಿಗೆ ಒಂದು ದಿನಕ್ಕೆ 250ರಿಂದ 300 ಜನ ಊಟ ಮಾಡಲು ಬರುತ್ತಾರೆ! ಇಲ್ಲಿನ ಊಟದ ಬೆಲೆಯೂ ಅಷ್ಟೇ. 100 ರಿಂದ 140 ರೂ. ವರೆಗೆ ಹೊಟ್ಟೆ ತುಂಬಿ ಹೋಗುವ ಟೇಸ್ಟಿ ಊಟ. ನಾನ್‌ವೆಜ್ ಅಂದಮೇಲೆ 100 ರುಪಾಯಿ, ಕಡಿಮೆ ಮೊತ್ತವೆಂದೇ ಹೇಳಬಹುದು. ಹಾಗಾಗಿ, ಬಡವ, ಬಲ್ಲಿದರೆಲ್ಲಾ ಈ ಹೋಟೆಲಿಗೆ ನಾಮುಂದು-ತಾಮುಂದು ಎಂಬಂತೆ ಬರುತ್ತಾರೆ.
ಈ ಹೋಟೆಲಿಗೆ ಪ್ರತಿ ಸೋಮವಾರ ರಜೆ. ಉಳಿದ ದಿನಗಳಲ್ಲಿ 11 ರಿಂದ 3ರ ವರೆಗೂ ಇಲ್ಲಿ ರುಚಿಕರವಾದ ಮಾಂಸಾಹಾರಿ ಊಟ ಲಭ್ಯ. ನೀವೇನಾದರೂ, ಕ್ರಸೆಂಟ್ ರಸ್ತೆಯತ್ತ ಸವಾರಿ ಹೊರಟರೆ, ಇಲ್ಲಿ ಊಟ ಮಾಡೋದನ್ನು ಮರೆಯಬೇಡಿ.
Advertisement
ಅಣ್ಣಾವ್ರಿಂದ ರಜನಿ ವರೆಗೆ…ಪುಟ್ಟ ಹೋಟೆಲ್ ಆದರೂ, ಸ್ಟಾರ್‌ಗಳ ನೆಚ್ಚಿನ ಹೋಟೆಲ್ ಇದು. ಡಾ. ರಾಜ್‌ಕುಮಾರ್ ಮಾತ್ರವೇ ಅಲ್ಲ. ರಜನೀಕಾಂತ್ ಕೂಡ ಚಂದ್ರು ಅವರ ಹೋಟೆಲ್‌ನ ದೊಡ್ಡ ಅಭಿಮಾನಿ. ರೆಬೆಲ್ ಸ್ಟಾರ್ ಅಂಬರೀಶ್ ಕೈಯಲ್ಲಿ “ಟೇಸ್ ಮಸ್ತಾಗೈತೆ ಕಣ್ಲಾ’ ಎಂದು ಶಹಬ್ಟಾಶ್ ಗಿಟ್ಟಿಸಿಕೊಂಡಿದ್ದಾರೆ, ಚಂದ್ರು. ಶ್ರೀಮುರಳಿಯಂಥ ಯುವನಟರನ್ನೂ ಇದು ಆಕರ್ಷಿಸಿದೆ. ನನಗೆ ಜನರ ಹಸಿವನ್ನು ನೀಗಿಸುವ ಅವಕಾಶ ಸಿಕ್ಕಿದೆ. ಗ್ರಾಹಕರ ಹಾರೈಕೆಯಿಂದ ಈ ಹೋಟೆಲ್ ತುಂಬಾ ಚೆನ್ನಾಗಿ ನಡೆಯುತ್ತಿದೆ. ಅವರ ಆಶೀರ್ವಾದ ಇರುವವರೆಗೂ ನನ್ನ ಕಾರ್ಯ ಮುಂದುವರಿಯುತ್ತದೆ.
– ಚಂದ್ರಶೇಖರ್, ಮಾಲೀಕ ನಾನು ಸುಮಾರು 9 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಇಲ್ಲಿನ ಊಟ ನನಗಂತೂ ತುಂಬಾ ಹಿಡಿಸಿದೆ. ನಾಟಿಕೋಳಿ ಸಾರಂತೂ ಮಸ್ತ್.
– ರಮೇಶ್, ಗ್ರಾಹಕ ಉಮೇಶ್ ರೈತನಗರ