Advertisement

2022ರ ಅಂತ್ಯಕ್ಕೆ ಚಂದ್ರಯಾನ-3 ಅನುಷ್ಠಾನ

11:10 PM Jul 28, 2021 | Team Udayavani |

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯು, ಮುಂದಿನ ವರ್ಷದ ಮಧ್ಯಭಾಗದಲ್ಲಿ  (ಅಕ್ಟೋಬರ್‌ನಿಂದ ಡಿಸೆಂಬರ್‌) ಅವಧಿಯಲ್ಲಿ ಜಾರಿಗೊಳ್ಳಲಿದೆ ಎಂದು ಬಾಹ್ಯಾಕಾಶ ಇಲಾಖೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಬುಧವಾರ, ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “”ಚಂದ್ರಯಾನ-3 ಯೋಜನೆಯಲ್ಲಿ ಹಲವಾರು ಹಂತಗಳಿವೆ. ಕೊರೊನಾದಿಂದಾಗಿ ಯೋಜನೆ ಅನುಷ್ಠಾನಕ್ಕೆ ಕೊಂಚ ಹಿನ್ನಡೆಯಾಗಿತ್ತು. ಆದರೂ, ನಮ್ಮ ವಿಜ್ಞಾನಿಗಳು ವರ್ಕ್‌ ಫ್ರಂ ಹೋಂ ಮೂಲಕ ಈ ಯೋಜನೆಯ ಸಾಕಾರಕ್ಕಾಗಿ ಸಾಧ್ಯವಾದಷ್ಟು ಸೇವೆ ಸಲ್ಲಿಸಿದ್ದಾರೆ.

ಈಗ, ಈ ಎಲ್ಲಾ ಹಂತಗಳ ಸಿದ್ಧತೆಗಳು ಸುಸೂತ್ರವಾಗಿ ನೆರವೇರುತ್ತಿವೆ. ಹಾಗಾಗಿ, ಈ ಯೋಜನೆಯು 2022ರ ಅಕ್ಟೋಬರ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ನೆರವೇರಲಿದೆ” ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next