Advertisement

ಯಾರೂ ಮುಟ್ಟದ ಶಶಾಂಕನ “ದಕ್ಷಿಣ”ಕ್ಕೆ ನಮ್ಮ ಹೆಜ್ಜೆ

09:20 AM Jul 15, 2019 | mahesh |

ಈವರೆಗೆ ಯಾರೂ ಹೆಜ್ಜೆಯಿಡದ “ಶಶಾಂಕ’ನ ಕತ್ತಲ ಸಾಮ್ರಾಜ್ಯಕ್ಕೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಲಗ್ಗೆಯಿಡುತ್ತಿದೆ. “ಚಂದ್ರಯಾನ-2′ ಎಂಬ ಹೊಸ ಸಾಹಸದ ಮೂಲಕ ಚಂದ್ರನ ದಕ್ಷಿಣ ಧ್ರುವದ ಅನ್ವೇಷಣೆಗೆ ತಯಾರಾಗಿರುವ ಇಸ್ರೋ ಕಡೆಗೆ, ಇಡೀ ಜಗತ್ತೇ ಮುಖ ಮಾಡಿದೆ. ಇಂದು ರಾತ್ರಿ 2:51ಕ್ಕೆ ಅನುಷ್ಠಾನಗೊಳ್ಳಲಿದೆ.

Advertisement

ದಕ್ಷಿಣ ಧ್ರುವವೇ ಏಕೆ?
ಚಂದ್ರದ ದಕ್ಷಿಣ ಧ್ರುವವು ಅನೇಕ ರಹಸ್ಯಗಳ ತಾಣ ಎಂಬುದು ವಿಜ್ಞಾನಿಗಳ
ಲೆಕ್ಕಾಚಾರ. ದಕ್ಷಿಣ ಧ್ರುವದಲ್ಲಿ ನೀರಿನ ಕಣಗಳಿರುವುದನ್ನು “ಚಂದ್ರಯಾನ-1′ ಪತ್ತೆ
ಹಚ್ಚಿದೆ. ಈಗ, ಅದನ್ನು “ಚಂದ್ರಯಾನ-2’ರ ಮೂಲಕ ಪ್ರತ್ಯಕ್ಷವಾಗಿ
ಕಂಡುಕೊಳ್ಳಲು ಯತ್ನಿಸಲಾಗುತ್ತಿದೆ. ಜತೆಗೆ, ಅಲ್ಲಿನ ಪರಿಸರದ ಅಧ್ಯಯನವು
ಚಂದ್ರನ ಸೃಷ್ಟಿ, ಬೆಳವಣಿಗೆಯ ಬಗ್ಗೆ ಮತ್ತಷ್ಟು ಅಪರೂಪದ ಮಾಹಿತಿ ನೀಡುವ
ಸಾಧ್ಯತೆಗಳಿದ್ದು, ಭವಿಷ್ಯದಲ್ಲಿ ಮತ್ತಷ್ಟು ಸಂಶೋಧನೆಗೆ ಅವು ನೆರವಾಗುತ್ತವೆ.

ಎಲ್ಲರೂ ಹೆದರುವ ಜಾಗ!
ಚಂದ್ರನ ದಕ್ಷಿಣ ಧ್ರುವವನ್ನು ಈವರೆಗೆ ಯಾರೂ ಅನ್ವೇಷಿಸಿಲ್ಲ. ಅದಕ್ಕೆ ಮೊದಲ
ಕಾರಣ ಅಲ್ಲಿರುವ ಶಾಶ್ವತ ಕತ್ತಲೆ. ಎರಡನೇಯದಾಗಿ, ಅಲ್ಲಿರುವ ಅಪಾರ ದೈತ್ಯ
ಕುಳಿಗಳ ಸಮೂಹ. ಅಲ್ಲಿ ಯಂತ್ರೋಪಕರಣಗಳನ್ನು ಇಳಿಸುವುದು ಒಂದು
ದುಸ್ಸಾಹಸ. ಕೂದಲೆಳೆಯಷ್ಟು ಲೆಕ್ಕಾಚಾರ ತಪ್ಪಾದರೂ, ಸಾವಿರಾರು ಕೋಟಿ ರೂ.ಗಳ
ಕೆಲಸ ನೀರಲ್ಲಿ! ಹಾಗಾಗಿಯೇ, ಈ ಸಾಹಸಕ್ಕೆ ಈವರೆಗೆ ಯಾರೂ ಕೈ ಹಾಕಿಲ್ಲ.

ಪರಿಕರಗಳ ಪರಿಚಯ
ಚಂದ್ರಯಾನ-2 ಅಡಿಯಲ್ಲಿ ಚಂದ್ರನನ್ನು ಅಧ್ಯಯನ ನಡೆಸುವುದು ಆರ್ಬಿಟರ್‌, ಲ್ಯಾಂಡರ್‌, ರೋವರ್‌ ಎಂಬ ವೈಜ್ಞಾನಿಕ ಪರಿಕರಗಳು. ಇಲ್ಲಿ ಲ್ಯಾಂಡರ್‌ಗೆ, ಭಾರತೀಯ ಬಾಹ್ಯಾಕಾಶ ಸಂಶೋಧ ನೆಯ ಪಿತಾಮಹ ಎನಿಸಿರುವ ವಿಕ್ರಮ್‌ ಸಾರಾಭಾಯ್‌ ಹೆಸರಿಡಲಾಗಿದ್ದು, ಇದನ್ನು ವಿಕ್ರಮ್‌ ಲ್ಯಾಂಡರ್‌ ಎಂದೇ ಕರೆಯಲಾ ಗುತ್ತದೆ. ರೋವರ್‌ಗೆ “ಪ್ರಜ್ಞಾನ’ ಎಂಬ ಹೆಸರಿಡಲಾಗಿದೆ. ಇವೆಲ್ಲವನ್ನೂ ಬಾಹ್ಯಾಕಾಶಕ್ಕೆ ಹೊತ್ತೂ
ಯ್ಯುವ “ಜಿಎಸ್‌ಎಲ್‌ವಿ ಎಂ.ಕೆ. 2′ ಎಂಬ ರಾಕೆಟ್‌ಗೆ “ಬಾಹುಬಲಿ’ ಎಂಬ
ಅಡ್ಡಹೆಸರು ಇಡಲಾಗಿದೆ.

ನಾಲ್ಕು ಪ್ರಮುಖ ವಿಶೇಷತೆ
􀂄 ಅನ್ಯ ಆಕಾಶಕಾಯವೊಂದರ ಮೇಲೆ ತನ್ನ ಯಂತ್ರವನ್ನು ಇಳಿಸಿ ಅಧ್ಯಯನ
ನಡೆಸುವಲ್ಲಿ ಭಾರತದ ಮೊದಲ ಪ್ರಯತ್ನ.
􀂄 ಇದೇ ಮೊದಲ ಬಾರಿಗೆ ಚಂದ್ರನ ಅಧ್ಯಯನ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದೊಂದಿಗೆ.
􀂄 ಅನ್ಯ ಗ್ರಹದ ಮೇಲೆ ಸಾಫ್ಟ್ ಲ್ಯಾಂಡಿಂಗ್‌ ಆಗುತ್ತಿರುವ ಇಸ್ರೋದ ಮೊದಲ ಸ್ವದೇಶಿ
ತಂತ್ರಜ್ಞಾನದ ಪರಿಕರ.
􀂄 ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆ ಭಾರತಕ್ಕೆ

Advertisement

ಜುಲೈ 14-15 ಮಧ್ಯರಾತ್ರಿ 2.51ಕ್ಕೆ ಚಂದ್ರಯಾನ ಶುರು

Advertisement

Udayavani is now on Telegram. Click here to join our channel and stay updated with the latest news.

Next