ನವದೆಹಲಿ: ಚಂದ್ರಯಾನ 2 ಯೋಜನೆಯಲ್ಲಿ ಇಸ್ರೋದಷ್ಟೇ ಶ್ರಮವನ್ನು ಹಲವು ಖಾಸಗಿ ಕಂಪನಿಗಳೂ ವಹಿಸಿವೆ. ಎಲ್ ಆ್ಯಂಡ್ ಟಿ ಮತ್ತು ಲಕ್ಷ್ಮಿ ಮಶಿನ್ ವರ್ಕ್ಸ್ನಂತಹ ಕಂಪನಿಗಳು ಈ ಯೋಜನೆಯ ಬಹುಮುಖ್ಯ ಭಾಗಗಳ ಉತ್ಪಾದನೆ ಮಾಡಿವೆ. ಗೋದ್ರೇಜ್ ಏರೋಸ್ಪೇಸ್, ಅನಂತ್ ಟೆಕ್ನಾಲಜೀಸ್, ಎಂಟಾರ್ ಟೆಕ್ನಾಲಜೀಸ್, ಐನಾಕ್ಸ್ ಟೆಕ್ನಾಲಜೀಸ್, ಸೆಂಟಮ್ ಅವಸರಲ ಮತ್ತು ಕರ್ನಾಟಕ ಹೈಬ್ರಿಡ್ ಮೈಕ್ರೋಡಿವೈಸಸ್ ಕಂಪನಿಗಳೂ ಸೇರಿ ಸುಮಾರು 400 ಖಾಸಗಿ ಕಂಪನಿಗಳು ವಿವಿಧ ಭಾಗಗಳ ತಯಾರಿಕೆಯಲ್ಲಿ ಕೈಜೋಡಿಸಿವೆ.
ಎಲ್ ಆ್ಯಂಡ್ ಟಿ ಏರೋಸ್ಪೇಸ್, ಗೋದ್ರೇಜ್ ಏರೋಸ್ಪೇಸ್ ಮತ್ತು ಐನಾಕ್ಸ್ ಉಡಾವಣಾ ವಾಹಕ ತಯಾರಿಕೆಯಲ್ಲಿ ಸಹಕರಿಸಿದ್ದರೆ, ಇತರ ಕಂಪನಿಗಳು ಬಾಹ್ಯಾಕಾಶ ನೌಕೆ ತಯಾರಿಯಲ್ಲಿ ಸಹಕರಿಸಿವೆ. ಲ್ಯಾಂಡರ್ ಮತ್ತು ರೋವರ್ ಅನ್ನು ಇಸ್ರೋ ಸ್ವತಂತ್ರವಾಗಿ ತಯಾರಿಸಿದೆ.
ದೇಶದಲ್ಲೇ ಈವರೆಗೆ ಅತ್ಯಂತ ದೊಡ್ಡ ಹಾಗೂ ವಿಶ್ವದಲ್ಲಿ ಮೂರನೇ ಅತಿದೊಡ್ಡ 3.2 ಮಿ. ಘನ ಮೋಟಾರ್ ಅನ್ನು ಎಲ್ ಆ್ಯಂಡ್ ಟಿ ತಯಾರಿಸಿದೆ. ಅಷ್ಟೇ ಅಲ್ಲ, ಇಂಟರ್ ಸ್ಟೇಜ್ ಕನೆಕ್ಟರುಗಳು ಮತ್ತು ಹೀಟ್ ಶೀಲ್ಡ್ಗಳನ್ನೂ ಈ ಕಂಪನಿ ತಯಾರಿಸಿದೆ. ಕ್ರಯೋಜನಿಕ್ ಮತ್ತು ಲಿಕ್ವಿಡ್ ಇಂಜಿನ್‌ಗಳನ್ನು ಗೋದ್ರೇಜ್ ಏರೋಸ್ಪೇಸ್ ತಯಾರಿಸಿದೆ. ಚಂದ್ರನ ಕಡೆಗೆ ನೌಕೆ ಪ್ರಯಾಣ ಆರಂಭಿಸುವುದಕ್ಕೂ ಮುನ್ನ ಕಕ್ಷೆಗೇರಿಸುವ ಪ್ರಕ್ರಿಯೆಯಲ್ಲಿ ಬಳಸುವ ಲಿಕ್ವಿಡ್ ಇಂಜಿನ್‌ಗಳನ್ನೂ ಇದು ತಯಾರಿಸಿದೆ. ಈ ಇಂಜಿನ್‌ಗಳನ್ನು ಬಳಸಿ ನೌಕೆಯ ವೇಗವನ್ನು ಕಡಿಮೆ ಮಾಡಲಾಗುತ್ತದೆ. ಶೇ. 80 ರಷ್ಟು ಉಡಾವಣಾ ವಾಹಕ ಮತ್ತು ಶೇ. 60 ರಷ್ಟು ಗಗನನೌಕೆಯನ್ನು ಖಾಸಗಿ ಕಂಪನಿಗಳು ತಯಾರಿಸಿವೆ. ಈ ಯೋಜನೆ ಯಶಸ್ವಿಯಾಗುತ್ತಿದ್ದಂತೆ ಕಂಪನಿಗಳ ಮೌಲ್ಯವೂ ಏರಿಕೆಯಾಗ ಲಿದೆ. ಅÊ ಬೋಯಿಂಗ್ ಮತ್ತು ಏರ್‌ಬಸ್‌ನಂತಹವು ಗಳಿಂದ ಬೇಡಿಕೆ ಪಡೆಯುವ ನಿರೀಕ್ಷೆ ಯಲ್ಲಿವೆ.
ಚಂದ್ರಯಾನದಲ್ಲೂ ರಾಜಕೀಯ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚಂದ್ರಯಾನದಲ್ಲೂ ರಾಜಕೀಯ ಹುಡುಕಿದ್ದಾರೆ. ‘ಚಂದ್ರ ಯಾನವನ್ನು ವೈಭವೀಕರಿಸುವ ಮೂಲಕ ಜನರ ಗಮನವನ್ನು ಆರ್ಥಿಕ ಬಿಕ್ಕಟ್ಟಿನಿಂದ ಬೇರೆಡೆ ಸೆಳೆವ ಯತ್ನವನ್ನು ಸರ್ಕಾರ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ. ಇದೇ ಮೊದಲ ಬಾರಿಗೆ ಅಂಥದ್ದನ್ನು ನಡೆಸಿ ದಂತೆ ಬಿಜೆಪಿ ವರ್ತಿಸುತ್ತಿದೆ. ಕಳೆದ 60-70 ವರ್ಷಗಳಲ್ಲಿ ಇಂಥ ವೈಜ್ಞಾ ನಿಕ ಸಾಧನೆಗಳು ನಡೆಯುತ್ತಲೇ ಇವೆ. ಈಗ ಮೋದಿ ಇಸ್ರೋ ಕೇಂದ್ರಕ್ಕೆ ಹೋಗಿದ್ದಾರೆ. ನಾಲ್ಕೈದು ದಿನ ಚಂದ್ರಯಾನದ್ದೇ ಸುದ್ದಿ ಇರುತ್ತದೆ. ದೇಶದಲ್ಲಿ ಎಲ್ಲ ವನ್ನೂ ಬಿಜೆಪಿಯೇ ಸಾಧಿಸಿದ್ದು ಎಂಬಂತೆ ಬಿಂಬಿಸಲಾಗುತ್ತದೆ ಎಂದೂ ದೀದಿ ಕಿಡಿಕಾರಿದ್ದಾರೆ. ಬಿಜೆಪಿ ಆಕ್ರೋಶ: ದೀದಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ‘ಮಮತಾ ಅವರು ಅತ್ಯಂತ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಇಡೀ ದೇಶ ಸಂಭ್ರಮದಲ್ಲಿ ಮುಳುಗಿದ್ದರೆ, ಅವರು ಮಾತ್ರ ಹತಾಶೆ ಗೀಡಾದವರಂತೆ ವರ್ತಿಸುತ್ತಿದ್ದಾರೆ’ ಎಂದಿದೆ.