Advertisement

ISRO: ಚಂದ್ರಯಾನ-3 ಉಡಾವಣಾ ವಾಹನ ಬಿಡಿಭಾಗ ಸಮುದ್ರಕ್ಕೆ

09:05 PM Nov 16, 2023 | Pranav MS |

ಹೈದರಾಬಾದ್‌: ಚಂದ್ರಯಾನ-3 ಯೋಜನೆಯ ಲ್ಯಾಂಡರ್‌ ಮತ್ತು ರೋವರ್‌ ಹೊತ್ತು ಜು.14ರಂದು ಉಡಾವಣೆಯಾಗಿದ್ದ ಎಲ್‌ವಿಎಂ3 ಎಂ4 ಉಡಾವಣಾ ವಾಹನದ ಬಿಡಿ ಭಾಗವು ಭೂಮಿಯ ವಾತಾವರಣಕ್ಕೆ ಮರಳಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಎಲ್‌ವಿಎಂ3 ಎಂ4 ಉಡಾವಣಾ ವಾಹನದ ಬಿಡಿ ಭಾಗವು ಭೂಮಿಗೆ ಅಪ್ಪಳಿಸುವುದರಿಂದ ಯಾವುದೇ ಅಪಾಯವಿಲ್ಲ. ಏಕೆಂದರೆ ಅದು ಉತ್ತರ ಶಾಂತಿಸಾಗರಕ್ಕೆ ಬೀಳುವಂತೆ ಅದನ್ನು ನಿಯಂತ್ರಿಸಲಾಗಿದೆ.

Advertisement

ಅಪ್ಪಳಿಸುವ ತೀವ್ರತೆ ತಗ್ಗಿಸುವ ದೃಷ್ಟಿಯಿಂದ ಅದರಲ್ಲಿರುವ ಇಂಧನವನ್ನು ಖಾಲಿ ಮಾಡಲಾಗಿದೆ. ವಿಶ್ವಸಂಸ್ಥೆ ಮತ್ತು ಇಂಟರ್‌-ಏಜೆನ್ಸಿ ಸ್ಪೇಸ್‌ ಡೆಬ್ರಿಸ್‌ ಕೋಆರ್ಡಿನೇಷನ್‌ ಕಮಿಟಿಯ(ಐಎಡಿಸಿ) ನಿಯಮಗಳಂತೆ ಬಾಹ್ಯಾಕಾಶ ನೌಕೆಯ ಅವಶೇಷಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಇಸ್ರೋ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next