Advertisement

ನಭಕ್ಕೆ ನೆಗೆದ ಬಾಹುಬಲಿ

02:21 AM Jul 23, 2019 | sudhir |

ಶತಕೋಟಿ ಕನಸುಗಳನ್ನು ಚಂದ್ರನಲ್ಲಿಗೆ ತೆಗೆದುಕೊಂಡು ಹೋಗುವ ಇಸ್ರೋದ ಕನಸು ನನಸಾಗಿದೆ.ಸರಿಯಾಗಿ 11 ವರ್ಷಗಳ ಹಿಂದೆ ಚಂದ್ರಯಾನ-1ರಲ್ಲಿ ಕಂಡಿದ್ದ ಯಶಸ್ಸನ್ನು ಇಸ್ರೋ ಪುನರಾವರ್ತಿಸಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಶಕ್ತಿ ಸಾಮರ್ಥ್ಯವನ್ನು ಅನಾವರಣ ಮಾಡಿರುವ ಇಸ್ರೋ, ಚಂದ್ರಯಾನ-2 ಹೊತ್ತೂಯ್ದ ಜಿಎಸ್‌ಎಲ್‌ ವಿ ಮಾರ್ಕ್‌ 3 ರಾಕೆಟ್‌ (ಬಾಹುಬಲಿ) ಅನ್ನು 16
ನಿಮಿಷ 14 ಸೆಕೆಂಡ್‌ಗಳಲ್ಲೇ ಕಕ್ಷೆಗೆ ಸೇರಿಸಿದೆ.

Advertisement

ದೃಢಪಡಿಸಿದ್ದು ಬೆಂಗಳೂರಿನ ಕೇಂದ್ರ
ಅತ್ತ ಚಂದ್ರಯಾನ-2 ಪರಿಕರ ಹೊತ್ತೂಯ್ದಿದ್ದ ಜಿಎಸ್‌ಎಲ್‌ವಿ ಮಾರ್ಕ್‌ 3 ರಾಕೆಟ್‌ ಕಕ್ಷೆಗೆ ತಲುಪು ತ್ತಿದ್ದ ವಿಷಯವನ್ನು ದೃಢಪಡಿಸಿದ್ದು ಬೆಂಗಳೂರಿನ ನಿಯಂತ್ರಣ ಕೇಂದ್ರ. ಈ ಬಗ್ಗೆ ಅನಂತರ ಹೇಳಿಕೆ ಹೊರಡಿಸಿದ ಇಸ್ರೋ, 16.14 ನಿಮಿಷಗಳಲ್ಲೇ ಚಂದ್ರಯಾನ-2 ಕಕ್ಷೆಗೆ ಮುಟ್ಟಿದೆ ಎಂದು ತಿಳಿಸಿತು.

ಸಾಫ್ಟ್ ಲ್ಯಾಂಡಿಂಗ್‌ ಗುರಿ
ಈಗಾಗಲೇ ಬೆಂಗಳೂರಿನಲ್ಲಿರುವ ನಿಯಂತ್ರಣ ಕೇಂದ್ರ ಚಂದ್ರಯಾನ- 2 ಅನ್ನು ತನ್ನ ಪರಿಧಿಗೆ ತೆಗೆದು ಕೊಂಡಿದೆ. ಸೆ.7ರಂದು ಚಂದ್ರನಲ್ಲಿಗೆ ರೋವರ್‌ ಅನ್ನು ಇಳಿಸುವ ಅಷ್ಟೂ ಜವಾಬ್ದಾರಿ ಇದರದ್ದೇ ಆಗಿದೆ. ಅಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಬೇಕಾಗಿದ್ದು, ಕಡೆಯ 15 ನಿಮಿಷ ಅತ್ಯಂತ ಮಹತ್ವದ್ದಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್‌ ಹೇಳಿದ್ದಾರೆ.

ಸೂರ್ಯನಲ್ಲಿಗೆ ಮಿಷನ್‌ ಆದಿತ್ಯ
ಚಂದ್ರನಾಯಿತು,
ಸೂರ್ಯನ ಮೇಲೇಕೆ ಅಧ್ಯಯನ ಮಾಡಬಾರದು ಎಂಬ ನಿಟ್ಟಿನಲ್ಲಿ ಇಸ್ರೋ, ಮುಂದಿನ ವರ್ಷದ ಮಧ್ಯಭಾಗದಲ್ಲಿ ಆದಿತ್ಯ-ಎಲ್‌1 ಅನ್ನು ಉಡಾವಣೆ ಮಾಡಲು ಎಲ್ಲ ಸಿದ್ಧತೆ ನಡೆಸಿದೆ. ಸೂರ್ಯನ ಹೊರಭಾಗದ ಪದರಗಳಾದ ಕೋರೋನಾವನ್ನು ಅಧ್ಯಯನ ಮಾಡುವುದು ಈ
ಯೋಜನೆಯ ಗುರಿ.

ಅಭಿನಂದಿಸಿದ ನಾಸಾ
ಇಸ್ರೋದ ಚಂದ್ರಯಾನ 2 ಅನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮುಕ್ತ ಕಂಠದಿಂದ ಶ್ಲಾ ಸಿದೆ. ಟ್ವೀಟ್‌ ಮೂಲಕ ಅಭಿನಂದಿಸಿದ ನಾಸಾ ನಿಮನ್ನು ಈ ಮಹಾಕಾರ್ಯಕ್ಕೆ ಬೆಂಬಲಿಸಲು ನಮಗೆ ಹೆಮ್ಮೆಯಾಗುತ್ತಿದೆ ಎಂದಿದೆ. ನಿಮ್ಮ ಕಾರ್ಯದ ಗುರಿಯಾದ ಚಂದ್ರನ ದಕ್ಷಿಣ ಮೇಲ್ಮೆ„ಯ ಅಧ್ಯಯನವನ್ನು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲಿ ಇಮ್ಮಡಿ ಯಾಗಿದೆ, ಮುಂಬರುವ ವರ್ಷ ಗಳಲ್ಲಿ ಅಮೆರಿಕ ಮಾನವಸಹಿತ ಚಂದ್ರಯಾನ ನಡೆಸಲಿದೆ ಎಂದು ಹೇಳಿದೆ.

Advertisement

ಮುಖ್ಯಾಂಶಗಳು
– ಉಡಾವಣೆಗೊಂಡ 16.14 ನಿಮಿಷಗಳ ಬಳಿಕ 6 ಸಾವಿರ ಕಿ.ಮೀ. ಕಕ್ಷೆಯಲ್ಲಿ ಪರಿಕರಗಳ ಸೇರ್ಪಡೆ

– ಇನ್ನು 23 ದಿನಗಳ ಕಾಲ ಈ ಪರಿಕರಗಳು ಈ ಕಕ್ಷೆಯಲ್ಲಿದ್ದು, ಅನಂತರ ಅದನ್ನು ಮೇಲಿನ ಕಕ್ಷೆಗೆ ಎತ್ತರಿಸಲಾಗುವುದು.

– 48 ದಿನಗಳ ಬಳಿಕ ಸೆ.7ರಂದು ಚಂದ್ರನ ಮೇಲೆ ರೋವರ್‌ ಇಳಿಯುವ ನಿರೀಕ್ಷೆ.

– ಕಚೇರಿಯಲ್ಲಿ ಕುಳಿತು ಚಂದ್ರಯಾನ ವೀಕ್ಷಿಸಿದ ಪ್ರಧಾನಿ ಮೋದಿ.

ಜು. 14ರ ಮಧ್ಯರಾತ್ರಿ ನಡೆಯಬೇಕಿದ್ದ ಉಡಾವಣೆ ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿತ್ತು. ಆಗ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷವನ್ನು ಇಸ್ರೋ ವಿಜ್ಞಾನಿಗಳು ಹಗಲಿರುಳೂ ಶ್ರಮಿಸಿ ಸರಿ ಪಡಿಸಿದ್ದಾರೆ. ಹಿಂದಿನ ಹಿನ್ನಡೆಯನ್ನು ಸಮರ್ಥವಾಗಿ ಮೆಟ್ಟಿ ನಾವಿಂದು ಪುಟಿದೆದ್ದು ಬಂದಿದ್ದೇವೆ.

-ಕೆ. ಶಿವನ್‌, ಇಸ್ರೋ ಅಧ್ಯಕ್ಷ

ಯೋಜನೆಯಲ್ಲಿ ಕಾಣಿಸಿಕೊಂಡಿದ್ದ ಲೋಪಗಳನ್ನು ವಿಜ್ಞಾನಿಗಳು ಅವಿರತ ಶ್ರಮದಿಂದ ಪತ್ತೆ ಹಚ್ಚಿದ್ದಾರೆ. ದೈತ್ಯ ಪ್ರತಿಭೆಗಳು, ದೈತ್ಯ ಸಾಮರ್ಥ್ಯಗಳು ಹಾಗೂ ದೈತ್ಯ ಆತ್ಮವಿಶ್ವಾಸಗಳು ಒಂದೆಡೆ ಸೇರಿದರೆ ಎಂಥ ಮಹತ್ಕಾರ್ಯಗಳಾಗುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ.
-ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next