Advertisement

ಒಂದು ವರ್ಷ ಪೂರೈಸಿದ ಚಂದ್ರಯಾನ-2ರ ಆರ್ಬಿಟರ್‌

01:01 AM Aug 22, 2020 | mahesh |

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ಮಹತ್ವಾ ಕಾಂಕ್ಷೆಯ “ಚಂದ್ರಯಾನ-2′ ಯೋಜನೆಯ ಆರ್ಬಿಟರ್‌ ಕಾರ್ಯಾ ರಂಭಗೊಂಡು ಇದೇ ಆ. 21ಕ್ಕೆ ಒಂದು ವರ್ಷ ಪೂರ್ತಿ ಯಾಗಿದೆ. ಈ ಒಂದು ವರ್ಷದ ಅವಧಿಯಲ್ಲಿ ನಿರೀಕ್ಷೆಯಂತೆ ಚಂದ್ರನನ್ನು ಸುತ್ತುತ್ತಾ ಬಂದಿರುವ ಆರ್ಬಿಟರ್‌ನಲ್ಲಿ ಇನ್ನೂ ಏಳು ವರ್ಷ ಕ್ಕಾಗುವಷ್ಟು ಇಂಧನವಿದ್ದು, ಇನ್ನೂ ಹೆಚ್ಚಿನ ಕೆಲಸವನ್ನು ನಿರೀಕ್ಷಿಸಬಹುದು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತಿಳಿಸಿದೆ. 2019ರ ಜು. 21ರಂದು ಚಂದ್ರಯಾನ-2 ಯೋಜನೆ ಅನುಷ್ಠಾನಗೊಂಡಿತ್ತು. ಆ. 21ರಂದು ಆರ್ಬಿಟರ್‌ ತನ್ನ ಕಾರ್ಯಾಚರಣೆ ಆರಂಭಿಸಿತ್ತು. “”ಆರ್ಬಿಟರ್‌ ಪೋಲಾರ್‌ ಆರ್ಬಿಟ್‌ ಭಾರೀ ವೇಗದಲ್ಲಿ ಚಂದ್ರನನ್ನು ಸುತ್ತುತ್ತಿದೆ. ಆಗಾಗ, ಆ ವೇಗವನ್ನು ಪಿರಿಯಾಡಿಕ್‌ ಆರ್ಬಿಟ್‌ ಮೈಂಟನೆನ್ಸ್‌ (ಒಎಂ) ಕೌಶಲ್ಯಗಳಿಂದ ಬೇಕಾದಂತೆ ಹೊಂದಾಣಿಕೆ ಮಾಡಲಾಗುತ್ತಿದೆ. ಈವರೆಗೆ 17 ಬಾರಿ ಇಂಥ ಹೊಂದಾಣಿಕೆ ಮಾಡಲಾಗಿದೆ” ಎಂದು ಇಸ್ರೋ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next