Advertisement

ಚಂದಿರನ ಕಕ್ಷೆಯಲ್ಲಿ ವಿಕ್ರಮ್‌

10:46 AM Aug 23, 2019 | Team Udayavani |

ಮಣಿಪಾಲ: ಚಂದ್ರಯಾನ-2 ಚಂದ್ರನ ಕಕ್ಷೆಯಲ್ಲಿ ಕಾರ್ಯಾಚರಿಸುತ್ತಿದೆ. ಮಂಗಳವಾರವೇ ಚಂದ್ರನ ಸುತ್ತ ಸಂಚರಿಸಲು ಆರಂಭಿಸಿದೆ. ಬುಧವಾರ ಮಧ್ಯಾಹ್ನ 12.30ರಿಂದ 1.30ರ ಸುಮಾರಿನಲ್ಲಿ ಚಂದಿರನ ಮೇಲ್ಮೆ„ಯತ್ತ ಚಲಿಸುತ್ತಿದೆ.

Advertisement

4 ಹಂತ
ಆಗಸ್ಟ್‌ 21ರಿಂದ ಸೆಪ್ಟಂಬರ್‌ 1ರ ವರೆಗೆ ಒಟ್ಟು 4 ಬಾರಿ ಚಂದ್ರಯಾನ ನೌಕೆ ತನ್ನ ಕಕ್ಷೆಯಿಂದ ಚಂದ್ರನ ಸನಿಹಕ್ಕೆ ಬರಲಿದೆ. ಆಗಸ್ಟ್‌ 21, ಆಗಸ್ಟ್‌ 28, ಆಗಸ್ಟ್‌ 30ರಂದು ಹಾಗೂ ಸೆಪ್ಟಂಬರ್‌ 1ರಂದು ಕಕ್ಷೆಯಲ್ಲಿ ಸುತ್ತುವ ಗಾತ್ರವನ್ನು ಚಂದ್ರನ ಸಮೀಪಕ್ಕೆ ಕೊಂಡೊಯ್ಯಲಿದೆ.

ಸೆ. 2
100×30 ಕಿ.ಮೀ. ಕಕ್ಷೆಯಲ್ಲಿ ಸುತ್ತುತ್ತಿರುವ ನೌಕೆಯಿಂದ ಲ್ಯಾಂಡರ್‌ “ವಿಕ್ರಮ್‌’ ಸೆ. 2ರಂದು ಬೇರ್ಪಡಲಿದೆ. ಬಳಿಕ ಚಂದ್ರನ ಸುತ್ತ ತನ್ನ ಅಧ್ಯಯನದ ಅಂತಿಮ ಹಂತವನ್ನು ವಿಕ್ರಮ್‌ ಪೂರೈಸಲಿದೆ.

ಸೆ. 4
ಚಂದ್ರನ ಸುತ್ತ ಸುತ್ತುತ್ತಿರುವ ವಿಕ್ರಮ್‌ 35 x75 ಕಿ.ಮೀ. ಕಕ್ಷೆ ಇಳಿದು ಚಂದ್ರ ಹತ್ತಿರಕ್ಕೆ ಬರಲಿದೆ. ಈ ನಡುವೆ ಇದರ ಎತ್ತರವನ್ನು 2 ಬಾರಿ ಕುಗ್ಗಿಸಲಾಗುತ್ತದೆ. ಉಳಿದ ದಿನ ಚಂದ್ರನಲ್ಲಿ ತಾನು ಇಳಿಯುವ ಸುರಕ್ಷಿತ ಜಾಗವನ್ನು ಹುಡುಕಲಿದೆ.

ಸೆ. 7
ಸೆ. 7ರಂದು ಲ್ಯಾಂಡರ್‌ “ವಿಕ್ರಮ್‌’ ಚಂದ್ರನ ಮೇಲೆ ಇಳಿಯಲಿದೆ. ಈ ವೇಳೆ ಲ್ಯಾಂಡರ್‌ನಿಂದ ರೋವರ್‌ ಬೇರ್ಪಡಲಿದ್ದು, ಚಂದ್ರಯಾನ-2 ಯಶಸ್ವಿ ಎಂದೇ ಪರಿಗಣಿತ.

Advertisement

ಆತಂಕ ಯಾಕೆ?
ಚಂದ್ರನ ಮೇಲೆ ಇಳಿಯುವ ವೇಗ ಸೆಕೆಂಡ್‌ಗೆ 1.6 ಕಿ.ಮೀ. ಇರಲಿದೆ. ಈ ವೇಳೆ ಧೂಳಿನ ಕಣಗಳು ವಿಕ್ರಮ್‌ನ ಕಾರ್ಯ ಚಟುವಟಿಕೆಗೆ ಅಡ್ಡಿಪಡಿಸಬಹುದು. ಅಲ್ಲಿನ ನಿಖರ ಹವಾ ಮಾನದ‌ ಕುರಿತು ಏನನ್ನೂ ಊಹಿಸಲಾಗುತ್ತಿಲ್ಲ. ಒಮ್ಮೆ ಚಂದಿರನ ಅಂಗಳದಲ್ಲಿ ಲ್ಯಾಂಡ್‌ ಆದ ಬಳಿಕ ಚಂದ್ರಯಾನ-2 ಯಶಸ್ವಿ ಎಂದೇ ಕರೆಯಲಾಗುತ್ತದೆ.

ಬೆಳಗ್ಗೆ 1.40
ಬೆಳಗ್ಗೆ 1.40ರ ಬಳಿಕದ 15 ನಿಮಿಷ ಅತ್ಯಂತ ಮಹತ್ವದ ಸಮಯವಾಗಿದೆ. ಲ್ಯಾಂಡರ್‌ ವಿಕ್ರಂ ತನ್ನ “ಸಾಫ್ಟ್ ಲ್ಯಾಂಡಿಂಗ್‌’ ಗೆ ಸ್ಥಳವನ್ನು ಹುಡುಕಲಿದೆ.

ಬೆಳಗ್ಗೆ 1.55
15 ನಿಮಿಷಗಳು ಅತ್ಯಂತ ಕಠಿನ ಸಮಯ. ಬೆಳಗ್ಗೆ 1.55ಕ್ಕೆ ಸರಿಯಾಗಿ ಚಂದ್ರಯಾನ 2 ಲ್ಯಾಂಡರ್‌ ವಿಕ್ರಮ್‌ ಚಂದ್ರನ ದಕ್ಷಿಣ ಮೇಲ್ಮೆ„ ಮೇಲೆ ಇಳಿಯಲಿದೆ.

ಬೆಳಗ್ಗೆ 3.55
ಚಂದ್ರನ ಮೇಲೆ ಲ್ಯಾಂಡರ್‌ ಇಳಿದ 2 ತಾಸುಗಳ ಬಳಿಕ ಲ್ಯಾಂಡರ್‌ನಲ್ಲಿದ್ದ 6 ಚಕ್ರಗಳು ಇರುವ ರೋವರ್‌ “ಪ್ರಗ್ಯಾನ್‌’ ಹೊರ ಬರಲಿದೆ.

ಬೆಳಗ್ಗೆ 5.05
ರೋವರ್‌ “ಪ್ರಗ್ಯಾನ್‌’ ತನ್ನಲ್ಲಿರುವ ಸೋಲಾರ್‌ ಪ್ಯಾನೆಲ್‌ ಅನ್ನು ತೆರೆದುಕೊಳ್ಳುತ್ತದೆ. ಬಳಿಕ ಸೋಲಾರ್‌ ಶಕ್ತಿಯನ್ನು ಬಳಸಿ ತಾನು ಹೊತ್ತೂಯ್ದ ಹಲವು ಪರಿಕರಗಳು ಕೆಲಸ ಮಾಡುವಂತೆ ಅದು ನೋಡಿಕೊಳ್ಳುತ್ತದೆ.

ಬೆಳಗ್ಗೆ 5.10
“ಪ್ರಗ್ಯಾನ್‌’ ಚಂದ್ರನ ಸುತ್ತ ಓಡಾಡಿ ಮಾಹಿತಿಯನ್ನು ಕಲೆ ಹಾಕಲು ಆರಂಭಿಸುತ್ತದೆ. ಇದು ಚಂದ್ರನಲ್ಲಿ ಒಂದು ದಿನ ಈ ಕಾರ್ಯವನ್ನು ಮಾಡಲಿದೆ. ಚಂದ್ರನ 1ದಿನ ಎಂದರೆ ಭೂಮಿಯ ಎರಡುವಾರಗಳಿಗೆ (14 ದಿನಗಳಿಗೆ)ಸಮ.

ರೋವರ್‌ ಏನು ಮಾಡುತ್ತೆ?
ರೋವರ್‌ “ಪ್ರಗ್ಯಾನ್‌’ ಚಂದ್ರನ ಮೇಲೆ ಓಡಾಡಿ ಮಾಹಿತಿಯನ್ನು ಕಲೆ ಹಾಕಲಿದೆ. ಚಂದ್ರನಲ್ಲಿ ಸುಮಾರು 500 ಮೀ. ಓಡಾಡಿ ಅಲ್ಲಿನ ಚಿತ್ರಗಳು ಹಾಗೂ ಮಾಹಿತಿಯನ್ನು ಇಸ್ರೋ ಕೇಂದ್ರಕ್ಕೆ ಕಳುಹಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next