Advertisement
ಕುಂದಾಪುರ: ಗೇರು ಕೃಷಿಯಲ್ಲಿ ಬರೋಬ್ಬರಿ 43 ತಳಿಗಳನ್ನು ದೇಶದ ಬೇರೆ ಬೇರೆ ಕಡೆಗಳಿಂದ ತಂದು ಪೋಷಿಸಿ, ಅದರಿಂದ ಉತ್ತಮ ಇಳುವರಿ ಪಡೆದ, ಹಡಿಲು ಬಿಟ್ಟ ಗದ್ದೆಗಳನ್ನೇ ಹುಡುಕಿ ಭತ್ತದ ಕೃಷಿ ಮಾಡುವ ಕಾಯಕಯೋಗಿ, ಕೃಷಿ ಬೆಳೆಯ ಕುರಿತು ರೈತರಿಗೆ ಪಾಠ ಮಾಡುವ “ಕೃಷಿ ಶಿಕ್ಷಕ’ ಕೆಂಚನೂರಿನ ಚಂದ್ರಶೇಖರ ಉಡುಪ. ಭತ್ತ, ಗೇರು, ತೆಂಗು, ಹಡಿಲು ಬಿಟ್ಟ ಗದ್ದೆಗಳಲ್ಲಿ ತರಹೇವಾರಿ ತರಕಾರಿಗಳನ್ನು ಬೆಳೆದು, ಸಮಗ್ರ ಕೃಷಿಯಲ್ಲಿ ಯಶ ಕಂಡವರು ಕೆಂಚನೂರಿನ ಸಾವಯವ ಕೃಷಿಕ ಎಕ್ರೆಗೆ 28 ಕ್ವಿಂಟಾಲ್‌ಅದರಲ್ಲೂ ಬೇರೆಲ್ಲ ತಳಿಯಿಂದ ಎಕ್ರೆಗೆ 13-14 ಕ್ವಿಂಟಾಲ್ ಗೇರು ಇಳುವರಿ ಸಿಕ್ಕರೆ, ವೆಂಗೂರ್ಲಾ ಗೇರು ತಳಿಯಲ್ಲಿ ಎಕ್ರೆಗೆ ಬರೋಬ್ಬರಿ 28 ಕ್ವಿಂಟಾಲ್ ವಾರ್ಷಿಕ ಇಳುವರಿಯನ್ನು ಗಳಿಸಿದ್ದು, 1 ಎಕರೆಗೆ 1.5 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಗೇರು ಗಿಡಗಳ ಮಧ್ಯೆ ಇತರೆ ಉಪ ಬೆಳೆಗಳನ್ನು ಮಾಡಿದರೆ ಗೇರು ಗಿಡಕ್ಕೂ ಪ್ರಯೋಜನವಾಗುತ್ತದೆ ಎನ್ನುತ್ತಾರೆ.
ಚಂದ್ರಶೇಖರ ಉಡುಪ ಅವರು ವಿಶೇಷವಾಗಿ ಗೇರು ಕೃಷಿಯಲ್ಲಿ 43 ತಳಿಗಳನ್ನು ಬೇರೆ ಬೇರೆ ಕಡೆಯಿಂದ ತಂದು, ಪೋಷಣೆ ಮಾಡಿದ್ದಲ್ಲದೆ ಅದರಿಂದ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಉಳ್ಳಾಲ-1, 2, 3, ಭಾಸ್ಕರ, ವೆಂಗೂರ್ಲಾ -7, 8, ಕೇರಳದಿಂದ ತರಿಸಿದ ಮಡಕತ್ತರ್, ಪ್ರಿಯಾಂಕ, ಕನಕ, ದನ, ಸುಲಭ, ಧಾರಶ್ರೀ, ತಮಿಳುನಾಡು, ಆಂಧ್ರದಿಂದಲೂ ಗೇರು ಗಿಡಗಳನ್ನು ತಂದು ನಾಟಿ ಮಾಡಿದ್ದಾರೆ. ಇದಲ್ಲದೆ ದೇಶದ ಬೇರೆ ಬೇರೆ ಕಡೆಗಳಿಗೆ ಕೃಷಿಯ ಕುರಿತಾದ ಅಧ್ಯಯನಕ್ಕಾಗಿ ತೆರಳುತ್ತಾರೆ. ಕೃಷಿಕರಿಗೆ ಮಾಹಿತಿ ನೀಡುವ ಕಾಯಕದಲ್ಲೂ ತೊಡಗಿಸಿಕೊಂಡಿದ್ದಾರೆ. ನೇರ ಬಿತ್ತನೆ ಪ್ರಯೋಗ
ತಮ್ಮ 1 ಎಕರೆ ಗದ್ದೆ ಹಾಗೂ ಬೇರೆಯವ ರೊಬ್ಬರು ಹಡಿಲು ಬಿಟ್ಟ ಸುಮಾರು 6 ಎಕರೆ ಗದ್ದೆಯಲ್ಲಿ ಭತ್ತದ ವಿವಿಧ ತಳಿಗಳ ನೇರ ಬಿತ್ತನೆ ಕಾರ್ಯವನ್ನು ಮಾಡಿ, ಅದರಲ್ಲೂ ಯಶಸ್ವಿ ಯಾಗಿದ್ದಾರೆ. ಇದು ಕುಂದಾಪುರ ತಾಲೂಕು ಮಾತ್ರವಲ್ಲದೆ ಉಡುಪಿ ಜಿಲ್ಲೆಯಲ್ಲಿಯೇ ಕೃಷಿ ಇಲಾಖೆಯಿಂದ ನಡೆದ ಮೊದಲ ನೇರ ಬಿತ್ತನೆ ಪ್ರಯೋಗ ಎನ್ನುವುದು ವಿಶೇಷ. ಇದರಲ್ಲಿ ಹೆಚ್ಚಿನ ಫಸಲು ಕೂಡ ಬಂದಿತ್ತು. 20-22 ಕ್ವಿಂಟಾಲ್ ಭತ್ತದ ಇಳುವರಿಯನ್ನು ಕೂಡ ಗಳಿಸಿದ್ದರು. ಕಳೆ ಕೂಡ ಕಡಿಮೆಯಿರುತ್ತದೆ ಎನ್ನುತ್ತಾರೆ ಚಂದ್ರಶೇಖರ ಉಡುಪ.
Related Articles
- 2012ರಲ್ಲಿ ಉತ್ತಮ ಗೇರು ಕೃಷಿಗಾಗಿ ಗೇರು – ಕೊಕ್ಕೊ ಕೃಷಿ ವಿ.ವಿ. ಕೊಚ್ಚಿ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿ.
- 2011 ರಲ್ಲಿ ಕೃಷಿ ವಿ.ವಿ. ಬೆಂಗಳೂರಲ್ಲಿ ಆಯೋಜಿಸಿದ ರಾಷ್ಟಿÅàಯ ಕೃಷಿ ಮೇಳದಲ್ಲಿ ತಾಲೂಕು ಮಟ್ಟದ ಪ್ರಗತಿಶೀಲ ಯುವ ರೈತ ಪ್ರಶಸ್ತಿ.
- 2017 ರಲ್ಲಿ ಕೃಷಿ ಮತ್ತು ತೋಟಗಾರಿಕೆ ವಿ.ವಿ. ಶಿವಮೊಗ್ಗ ವತಿಯಿಂದ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ.
– 2018 ರಲ್ಲಿ ಆತ್ಮ ಯೋಜನೆಯಡಿ ತೋಟಗಾರಿಕಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ.
– 2002 ರಲ್ಲಿ ತಾಲೂಕು ಮಟ್ಟದ ಫಲಪುಷ್ಪ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ.
Advertisement
ಹಡಿಲು ಗದ್ದೆಯಲ್ಲಿ ತರಕಾರಿ ಬೆಳೆಇವರು ಬೇರೆಯವರು ಹಡಿಲು ಬಿಟ್ಟ ಸುಮಾರು 3 ಎಕರೆ ಗದ್ದೆಯಲ್ಲಿ ಹಾಗಲಕಾಯಿ, ಹೀರೆಕಾಯಿ, ಬೆಂಡೆ, ಅಲಸಂಡೆ, ಬೂದು ಕುಂಬಳಕಾಯಿ ಸೇರಿದಂತೆ ತರಹೇವಾರಿ ತರಕಾರಿ ಗಿಡಗಳನ್ನು ಬೆಳೆಸಿದ್ದಾರೆ. ಕೃಷಿಯಲ್ಲೇ ಖುಷಿ
ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡರೆ ಯಶಸ್ಸು ಸಾಧಿಸಬಹುದು. ಈಗಿನ ಕಾಲಕ್ಕೆ ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿಕೊಂಡು ಕೃಷಿ ಮಾಡಿದರೆ ಉತ್ತಮ. ಕೇವಲ ಬೆಳೆಸುವುದು ಮಾತ್ರವಲ್ಲದೆ, ಅದನ್ನು ಮಾರುಕಟ್ಟೆ ಮಾಡುವ ಕಲೆಯನ್ನು ಕಲಿತರೆ ರೈತರೇ ಬಹುಪಾಲು ಲಾಭ ಪಡೆಯಬಹುದು. ಕೃಷಿ ಇರಲಿ ಅಥವಾ ಯಾವುದೇ ಕ್ಷೇತ್ರವಿರಲಿ ಗೆದ್ದವರಿಗಿಂತ ಸೋತವರ ಅಭಿಪ್ರಾಯ, ಸಲಹೆ ಪಡೆಯಬೇಕು. ಯಾಕೆಂದರೆ ಅವರು ಯಾಕೆ ಸೋತರು ಎಂದು ಅರಿತರೆ ನಾವು ಮತ್ತೆ ಅಂತಹ ತಪ್ಪು ಮಾಡುವುದಿಲ್ಲ. ನಾನು ಇದನ್ನು ಸ್ವತಃ ನನ್ನಲ್ಲೂ ಅಳವಡಿಸಿ ಕೊಂಡಿದ್ದೇನೆ.
– ಚಂದ್ರಶೇಖರ ಉಡುಪ, ಕೆಂಚನೂರು -ಪ್ರಶಾಂತ್ ಪಾದೆ