Advertisement
ಇತ್ತೀಚೆಗೆ ನಡೆದ ಅಸೋಸಿಯೇಶನ್‌ನ 86ನೇ ಮಹಾಸಭೆಯಲ್ಲಿ ಮುಂದಿನ 2018-2021ನೇ ಸಾಲಿಗೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ಜು. 16 ರಂದು ಸಾಂತಾಕ್ರೂಜ್ ಪೂರ್ವ ಬಿಲ್ಲವ ಭವನದ ಸಮಾಲೋಚನಾ ಸಭಾಗೃಹದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಮಾರ್ಗದರ್ಶನದಲ್ಲಿ ಮತ್ತು ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಪ್ರಥಮ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದ್ದು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಜಯಂತಿ ವಿ. ಉಳ್ಳಾಲ್ ಹಾಗೂ ಯುವಾಭ್ಯುದಯ ಉಪ ಸಮಿತಿಯ ಕಾರ್ಯಾಧ್ಯಕ್ಷರಾಗಿ ನಾಗೇಶ್ ಎಂ. ಕೋಟ್ಯಾನ್ ಆಯ್ಕೆಯಾದರು.
Related Articles
1991ರಿಂದ ಬಿಲ್ಲವರ ಶಿರೋಮಣಿ ಪ್ರಸಿದ್ಧಿಯ ಜಯ ಸಿ. ಸುವರ್ಣ ಅವರ ದಿಟ್ಟ ಮಾರ್ಗದರ್ಶನದಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಕಂಡ ಬಿಲ್ಲವರ ಅಸೋಸಿಯೇಶನ್ ಸುವರ್ಣಯುಗವನ್ನು ಕಂಡಿರುವು ದರಲ್ಲಿ ಸಂಶಯವಿಲ್ಲ. ಅಲ್ಲಲ್ಲಿ ಸಮನ್ವಯ ಸಮಿತಿ, ಸ್ಥಳೀಯ ಕಚೇರಿಗಳನ್ನು ಸ್ಥಾಪಿಸಿ, ತನ್ಮೂಲಕ ಆ ಪರಿಸರದ ಜನರಿಗೆ ಅಸೋಸಿಯೇಶನ್‌ನ ಸವಲತ್ತು, ಸೇವೆಗಳನ್ನು ಮನೆ ಮನಗಳಿಗೆ ತಲುಪಿಸುವಲ್ಲಿ ಸಂಸ್ಥೆ ಸಫಲತೆ ಕಂಡಿದೆ.
Advertisement
ವಿವಿಧ ಯೋಜನೆಗಳುಅಮೃತ ವಿದ್ಯಾನಿಧಿ, ಆರೋಗ್ಯ ನಿಧಿ, ವಿಧವಾ ಮಾಶಾಸನ, ಪಡುಬೆಳ್ಳೆಯಲ್ಲಿ ನಾರಾಯಣ ಗುರು ವಿದ್ಯಾ ಸಂಕುಲ, ಮುಂಬಯಿಯಲ್ಲಿ ಗುರು ನಾರಾಯಣ ರಾತ್ರಿ ಶಾಲೆ, ಕೋಟಿ-ಚೆನ್ನಯ ಕ್ರೀಡೋತ್ಸವ, ನಾರಾಯಣ ಗುರು ನಾಟಕೋತ್ಸವ, ಹಾಗೂ ನವಿ ಮುಂಬಯಿಯಲ್ಲಿ ಗುರು ಮಂದಿರ ಮತ್ತು ಸಮುದಾಯ ಭವನದ ಶಂಕುಸ್ಥಾಪನೆ, ವರದಿ ವರ್ಷದಲ್ಲಿ ಕಾಂದಿವಲಿ ಹಾಗೂ ಮುಲುಂಡ್‌ನಲ್ಲಿ ಸ್ವಂತ ಕಚೇರಿಯ ಲೋಕಾರ್ಪಣೆ, ಇಂತಹ ಹತ್ತು ಹಲವು ಯೋಜನೆಗಳು ಸಹಕಾರಗೊಂಡಿವೆ. ಕಳೆದ ಹಲವು ದಶಕಗಳಿಂದ ಜಯ ಸಿ. ಸುವರ್ಣರ ಮಾರ್ಗದರ್ಶನದಲ್ಲಿ ಅಸೋಸಿಯೇಶನ್‌ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ನನ್ನ ಕೈಯಿಂದಾದಷ್ಟು ಸಮಾಜಪರ ಕಾರ್ಯಗಳನ್ನು ನಡೆಸಿದ ಆತ್ಮ ತೃಪ್ತಿ ನನಗಿದೆ. ನನ್ನ ಅಧಿಕಾರವಧಿಯಲ್ಲಿ ಬಹಳಷ್ಟು ಯೋಜನೆಗಳು ಕಾರ್ಯಗತಗೊಂಡಿವೆ. ಅದರಲ್ಲೂ ಅಸೋಸಿಯೇಶನ್ ಮತ್ತು ಬಿಲ್ಲವ ಜಾಗೃತಿ ಬಳಗ ಒಂದಾಗಿರುವುದು ಬಹಳಷ್ಟು ಖುಷಿ ತಂದಿದೆ. ಇದು ಸಮಾಜದ ಅಭಿವೃದ್ಧಿಗೆ ಮುನ್ನುಡಿ ಎಂದು ಹೇಳಬಹುದು. ಕಾರ್ಯಕಾರಿ ಸಮಿತಿ, ಸ್ಥಳೀಯ ಕಚೇರಿಗಳು-ಸಮಿತಿಗಳು ಅದರಲ್ಲೂ ಮುಂಬಯಿಯ ತುಳು-ಕನ್ನಡಿಗರ ಪ್ರೋತ್ಸಾಹ-ಸಹಕಾರವನ್ನು ನಾನು ಎಂದಿಗೂ ಮರೆಯುಂತಿಲ್ಲ. ನೂತನ ಅಧ್ಯಕ್ಷರಾಗಿ ನೇಮಕಗೊಂಡ ಚಂದ್ರಶೇಖರ ಎಸ್. ಪೂಜಾರಿ ಅವರು ಸಮಾಜ ಸೇವೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ಯುವಕರನ್ನು ಒಂದುಗೂಡಿಸಿಕೊಂಡು ಪ್ರಸ್ತುತ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಭವಿಷ್ಯದಲ್ಲಿ ಅಸೋಸಿಯೇಶನ್ ಇನ್ನಷ್ಟು ಅಭಿವೃದ್ಧಿಯನ್ನು ಕಾಣಬೇಕು ಎಂಬುದು ನನ್ನ ಆಶಯ. ನೂತನ ಸಮಿತಿಗೆ ನನ್ನಿಂದಾಗುವ ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹ ಮುಂದೆಯೂ ಲಭಿಸಲಿದೆ
– ನಿತ್ಯಾನಂದ ಡಿ. ಕೋಟ್ಯಾನ್
(ನಿರ್ಗಮನ ಅಧ್ಯಕ್ಷರು : ಬಿಲ್ಲವರ ಅಸೋಸಿಯೇಶನ್ ಮುಂಬಯಿ). ಬಿಲ್ಲವರ ಅಸೋಸಿಯೇಶನ್ ಈಗಾಗಲೇ ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸಮಾಜ ಬಾಂಧವರು ಒಗ್ಗಟ್ಟು-ಒಮ್ಮತದಿಂದ ಸಮಾಜವನ್ನು ಬೆಳೆಸುವಲ್ಲಿ ಸಹಕಾರ ನೀಡಬೇಕು. ಯುವಪೀಳಿಗೆಗೆ ಹೆಚ್ಚಿನ ಪ್ರಾಶಸ್ತÂವನ್ನು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಭಾವಿಸಿದ್ದೇನೆ. ಬಿಲ್ಲವ ಸಮಾಜ ಇನ್ನಷ್ಟು ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂಬ ದೃಷ್ಟಿಯಿಂದ ಹೊಸ ಬೇರು – ಹಳೆ ಚಿಗುರು ಎಂಬಂತೆ ಉತ್ತಮವಾದ ಸಮಿತಿಯೊಂದು ರಚನೆಯಾಗಿದೆ. ಇಲ್ಲಿ ಯಾರು ಕೀಳೂ ಅಲ್ಲ, ಮೇಲೂ ಅಲ್ಲ. ಇಲ್ಲಿ ಎಲ್ಲರು ಸಮಾನರು ಎಂಬ ಭಾವನೆ ಮುಖ್ಯವಾಗಿರಬೇಕು. ನಾವೆಲ್ಲರು ಒಂದಾಗಿ ಭವಿಷ್ಯದಲ್ಲಿ ಉನ್ನತ ಶಿಕ್ಷಣ ಯೋಜನೆ ಮತ್ತು ನವಿಮುಂಬಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನ-ಗುರುಮಂದಿರದ ಗುರಿಯನ್ನು ಸಾಧಿಸಬೇಕು. ಬಿಲ್ಲವರ ಅಸೋಸಿಯೇಶನ್‌ನ ಎಲ್ಲಾ ಸಮಾಜಪರ ಕಾರ್ಯಗಳಿಗೆ ಸಮಾಜ ಬಾಂಧವರ, ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ
– ಜಯ ಸಿ. ಸುವರ್ಣ (ಅಧ್ಯಕ್ಷರು : ರಾಷ್ಟ್ರೀಯ ಬಿಲ್ಲವರ ಮಹಾಮಂಡಲ). ಚಿತ್ರ-ವರದಿ : ರೋನ್ಸ್ ಬಂಟ್ವಾಳ್