Advertisement
ಕಾಸರಗೋಡು ಜಿಲ್ಲೆಯ ಚಂದ್ರಗಿರಿ ಹೊಳೆ, ನೀಲೇಶ್ವರ, ತೇಜಸ್ವಿನಿ, ವಿಲಯ, ಪರಂಬಾತ್ ತಟಾಕ ಮತ್ತು ಕಣ್ಣೂರು ಜಿಲ್ಲೆಯ ವಳಪಟ್ಟಣಂ, ಕುಪ್ಪಂ, ಪೇರುಂಬ, ಅಂಜರಿಕಂಡಿ, ಮಾಹಿ, ತಲಶೆÏàರಿ ಜಲಾಶಯಗಳನ್ನು ಮತ್ತು ಸ್ಥಳೀಯ ಕಲೆಗಳನ್ನು, ಪ್ರಕೃತಿ ಸೌಂದರ್ಯವನ್ನು ಪರಿಚಯಿಸುವ ನದೀ ತಟ ಪ್ರವಾಸಿ ಯೋಜನೆಯನ್ನು ಸಾಕಾರಗೊಳಿಸುವ ಮೂಲಕ ಪ್ರವಾಸಿಗರನ್ನು ಹೆಚ್ಚೆಚ್ಚು ಕೈಬೀಸಿ ಕರೆಯಲು ಸಾಧ್ಯವಾಗಬಹುದೆಂದು ನಿರೀಕ್ಷಿಸಲಾಗಿದೆ. 197 ಕಿ.ಮೀ. ನೀಳದ ನದಿಯಲ್ಲಿ ದೋಣಿ ವಿಹಾರ, ಪ್ರತೀಯೊಂದು ನದಿ ತಟದಲ್ಲಿ ಆಯಾಯ ಪ್ರದೇಶದ ವಿಶೇಷ ಕಲೆ, ಕರಕುಶಲ ಮೊದಲಾದವುಗಳನ್ನು ಸೇರ್ಪಡೆಗೊಳಿಸಿ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಕಲಾ ರೂಪಕಗಳನ್ನು ಹಾಗು ಕರಕುಶಲ ಸಾಮಗ್ರಿಗಳನ್ನು ನಿರ್ಮಿಸುವ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಇದರಿಂದಾಗಿ ಇದೀಗ ಉತ್ತರ ಕೇರಳ ವಿಶ್ವ ಮಟ್ಟದಲ್ಲಿ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದಲು ಬಹಳಷ್ಟು ಸಾಧ್ಯತೆಗೆ ಕಾರಣವಾಗಿದೆ. ಕಳೆದ ಒಂದು ವರ್ಷದಲ್ಲಿ ಉತ್ತರ ಮಲಬಾರು ಪ್ರದೇಶದಲ್ಲಿರುವ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲು 600 ಕೋಟಿ ರೂಪಾಯಿಯ ಯೋಜನೆಗಳಿಗೆ ಕೇರಳ ಪ್ರವಾಸೋದ್ಯಮ ಇಲಾಖೆ ರೂಪು ನೀಡಿದೆ. ಮಲಬಾರ್ ಕ್ರೂಯಿಸ್ ಟೂರಿಸಂ ಯೋಜನೆಯ ಪ್ರಥಮ ಹಂತದಲ್ಲಿ ಪರಶ್ಶಿನಕಡವು ಮತ್ತು ಪಳಯಂಗಾಡಿಯಲ್ಲಿ ಬೋಟ್ ಜೆಟ್ಟಿಗಳನ್ನು ಹಾಗು ಹೊಳೆಗೆ ನದೀ ತಟ ಕಾಲು ದಾರಿ ನಿರ್ಮಿಸಲು 15 ಕೋಟಿ ರೂಪಾಯಿಯನ್ನು ಕೇರಳ ಸರಕಾರ ಮಂಜೂರು ಮಾಡಿದೆ.
Related Articles
Advertisement
ಮುಳಪ್ಪಿಲಂಗಾಟ್ ಬೀಚ್‌ನಲ್ಲಿ ಸ್ವಾಧೀನಪಡಿಸಿಕೊಂಡಿರುವ 3.5 ಎಕರೆ ಸ್ಥಳದಲ್ಲಿ 43.20 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ರಿಸೋರ್ಟ್ ಗಳನ್ನು ನಿರ್ಮಿಸಲಾಗುವುದು. ಪಯ್ಯಂಬಲಂ ಬೀಚನ್ನು ಆಕರ್ಷಣೀಯವನ್ನಾಗಿ ಮಾಡಲಾಗುವುದು. ಅಲ್ಲದೆ ಮಲಬಾರು ಪ್ರದೇಶದ ಬೀಚ್ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲಾಗುವುದು.
ಲೋನ್ಲಿ ಪ್ಲಾನೆಟ್ ವಿಶೇಷವಾಗಿ ಗುರುತಿಸಿರುವ ವಯನಾಡು ಜಿಲ್ಲೆಯಲ್ಲಿ ಹತ್ತು ಹಲವು ಪ್ರವಾಸಿ ಯೋಜನೆ ಗಳಿಗೆ ರಾಜ್ಯ ಸರಕಾರ ಅನುಮತಿ ನೀಡಿದೆ. ಕಲ್ಪಟ್ಟದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಲು 4.5 ಕೋಟಿ ರೂಪಾಯಿ ಮಂಜೂರು ಮಾಡಿದೆ. ಸುಲ್ತಾನ್‌ಬತ್ತೇರಿಯಲ್ಲಿ ರೋಕ್ ಅಡ್ವಂಚರ್ ಯೋಜನೆ, ಪಯಶ್ಶಿ ಸ್ಮಾರಕ, ಕುರುವ ದ್ವೀಪ ಪ್ರದೇಶದಲ್ಲಿ ಗ್ರೀನ್ ಕಾಪೆìಟ್ ಯೋಜನೆಗೆ ಅನು ದಾನ ಕಾದಿರಿಸಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಧ್ಯತೆ ಅಧಿಕವಾಗಿದೆ.
ವಿಶ್ವಮಟ್ಟದಲ್ಲಿ ಗುರುತಿಸುವ ಸಾಧ್ಯತೆ ಲೋನ್ಲಿ ಪ್ಲಾನೆಟ್‌ನಲ್ಲಿ ತೃತೀಯ ಸ್ಥಾನವನ್ನು ಪಡೆದಿರುವ ಮಲಬಾರು ಪ್ರದೇಶದಲ್ಲಿ ಪ್ರವಾಸೋದ್ಯಮ ಉತ್ತಮ ಮಟ್ಟದಲ್ಲಿ ಅಭಿವೃದ್ಧಿ ಸಾಧ್ಯವಾಗುವುದು. ವಿಶ್ವ ಮಟ್ಟದ ಮಾನ್ಯತೆಯಿಂದ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚೆಚ್ಚು ಹಣವನ್ನು ವ್ಯಯಿಸಲು ಪ್ರೋತ್ಸಾಹ ಲಭಿಸಿದೆ. ಕಾಸರಗೋಡು, ವಯನಾಡು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಮೂಲಕ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಎಲ್ಲ ಸಾಧ್ಯತೆಗಳಿವೆ.
– ಕಡಕಂಪಳ್ಳಿ ಸುರೇಂದ್ರನ್,
ಪ್ರವಾಸೋದ್ಯಮ ಸಚಿವ, ಕೇರಳ – ಪ್ರದೀಪ್ ಬೇಕಲ್