Advertisement

ಮಂತ್ರಗಳ ನಡುವೆ ಪ್ರಮಾಣ

01:44 AM Mar 31, 2017 | Team Udayavani |

ಅಮರಾವತಿ: ಆಂಧಪ್ರದೇಶ ವಿಧಾನಪರಿಷತ್‌ಗೆ ಸದಸ್ಯರಾಗಿ ಆಯ್ಕೆಯಾದ ಸಿಎಂ ಚಂದ್ರಬಾಬು ನಾಯ್ಡು ಪುತ್ರ ನರಾ ಲೋಕೇಶ್‌ ವೇದ-ಮಂತ್ರಗಳ ಘೋಷಣೆ ನಡುವೆಯೇ ಪ್ರಮಾಣ ಸ್ವೀಕರಿಸಿದ್ದಾರೆ. ಕಲಾಪ ಸಲಹಾ ಸಮಿತಿಯ ಕೊಠಡಿಯಲ್ಲಿ ಪುರೋಹಿತರು ಮಂತ್ರಘೋಷ ಮಾಡುತ್ತಿದ್ದಂತೆಯೇ ಪ್ರಮಾಣವಚನ ಸ್ವೀಕರಿಸಿದರು. ವಿಧಾನ‌ಪರಿಷತ್ತಿನ ಸಭಾಪತಿ ಚಕ್ರಪಾಣಿ ಪ್ರಮಾಣವಚನ ಬೋಧಿಸಿದರು. ಉಳಿದ ಸದಸ್ಯರು ಕೌನ್ಸಿಲ್‌ ಸಭಾಂಗಣದಲ್ಲಿ ಪ್ರಮಾಣ ಸ್ವೀಕರಿಸಿದರು. ಮೂಲಗಳ ಪ್ರಕಾರ ಮುಂದಿನ ತಿಂಗಳ ಮೊದಲ ವಾರದಲ್ಲಿ ಚಂದ್ರಬಾಬು ನಾಯ್ಡು ಸಚಿವ ಸಂಪುಟ ಪುನಾರಚಿಸಲಿದ್ದಾರೆ. ಈ ವೇಳೆ ಲೋಕೇಶ್‌ ಸಚಿವರಾಗುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next