Advertisement

ದ್ವಿತೀಯ ಟೆಸ್ಟ್‌ಗೆ ಚಂಡಿಮಾಲ್‌

08:40 AM Aug 02, 2017 | Team Udayavani |

ಕೊಲಂಬೊ: ಗಾಯದಿಂದ ಚೇತರಿಸಿಕೊಂಡಿರುವ ಲಂಕಾ ತಂಡದ ನಾಯಕ ದಿನೇಶ್‌ ಚಂಡಿಮಾಲ್‌ ಭಾರತದ ವಿರುದ್ಧದ 2ನೇ ಟೆಸ್ಟ್‌ಗೆ ಲಭ್ಯರಾಗಲಿದ್ದಾರೆ. 

Advertisement

ಗಾಲೆ ಟೆಸ್ಟ್‌ ವೇಳೆ ಚಂಡಿಮಾಲ್‌ ನ್ಯೂಮೋನಿಯಾದಿಂದ ನರಳುತ್ತಿದ್ದರು. ತಂಡವನ್ನು ರಂಗನ ಹೆರಾತ್‌ ಮುನ್ನಡೆಸಿದ್ದರು. ಎಡಗೈ ಬ್ಯಾಟ್ಸ್‌ ಮನ್‌ ಲಹಿರು ತಿರಿಮನ್ನೆ, ಎಡಗೈ ಸ್ಪಿನ್ನರ್‌ ಲಕ್ಷಣ ಸಂದಕನ್‌ ಅವರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಗಾಯಾಳು ಆಟಗಾರರಾದ ಗುಣರತ್ನೆ, ಲಕ್ಮಲ್‌ ತಂಡದಿಂದ ಬೇರ್ಪಟ್ಟಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಹೆರಾತ್‌ ತಂಡದಲ್ಲಿ ಮುಂದುವರಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next