Advertisement

ಚಂಡೀಗಢ ವಿವಿ ವೈರಲ್ ವಿಡಿಯೋ: ಬ್ಲ್ಯಾಕ್‌ ಮೇಲ್‌ಗೆ ಹೆದರಿ ವಿಡಿಯೋ ಶೇರ್‌?

06:27 PM Sep 20, 2022 | Team Udayavani |

ಚಂಡೀಗಢ: ಪಂಜಾಬ್‌ನ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯು ಪ್ರಿಯತಮನೊಂದಿಗೆ ತನ್ನ ಖಾಸಗಿ ವಿಡಿಯೋಗಳನ್ನು ಹಂಚಿಕೊಂಡ ಪ್ರಕರಣ ತನಿಖೆ ಹಂತದಲ್ಲಿದ್ದು, ಮತ್ತಷ್ಟು ಕುತೂಹಲಕಾರಿ ವಿಚಾರಗಳು ಹೊರಬಿದ್ದಿವೆ.

Advertisement

ಯುವತಿ, ಆಕೆಯ ಪ್ರಿಯತಮ, ಮತ್ತೋರ್ವ ವ್ಯಕ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದಲ್ಲದೇ ಮತ್ತೋರ್ವ ವ್ಯಕ್ತಿಯಿಂದ ಯುವತಿಗೆ ಕರೆ ಬಂದಿದ್ದು, ಆ ವ್ಯಕ್ತಿ, “ಬೇರೆ ಯುವತಿಯರ ವಿಡಿಯೋ ಕಳಿಸದಿದ್ದರೆ ನಿನ್ನ ಖಾಸಗಿ ವಿಡಿಯೋವನ್ನು ವೈರಲ್‌ ಮಾಡುತ್ತೇನೆ’ ಎಂದು ಯುವತಿಗೆ ಬೆದರಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಆತನನ್ನೂ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಯುವತಿ ಪ್ರಿಯತಮನೊಂದಿಗೆ 2021ರಲ್ಲಿ ಕೊನೆಯದಾಗಿ ತನ್ನ ವಿಡಿಯೋಗಳನ್ನು ಹಂಚಿಕೊಂಡಿದ್ದಳು. ಇತ್ತೀಚೆಗೆ ಬೇರೊಬ್ಬ ವ್ಯಕ್ತಿ ಆಕೆಗೆ ಬ್ಲ್ಯಾಕ್‌ ಮೇಲ್‌ಗೆ ಮಾಡಿದ್ದರಿಂದ ಆಕೆ ಕೆಲ ಹುಡುಗಿಯರು ಫೋಟೋಗಳನ್ನು ಆತನೊಂದಿಗೆ ಹಂಚಿಕೊಂಡಿದ್ದಳು. ವಿಡಿಯೋಗಳನ್ನೂ ಮಾಡಿದ್ದಳಾದರೂ ಅದು ಸರಿಯಾಗಿ ಚಿತ್ರೀಕರಣ ಆಗಿರಲಿಲ್ಲವೆಂದು ಮೂಲಗಳು ಹೇಳಿವೆ. ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆ ನಡೆಸುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next