Advertisement

Chandigarh ಮೇಯರ್‌ ಚುನಾವಣೆ;ಎಲ್ಲ ಮತಪತ್ರಗಳನ್ನೂ ನಮ್ಮ ಬಳಿ ತನ್ನಿ: ಸುಪ್ರೀಂ

12:47 AM Feb 20, 2024 | Team Udayavani |

ಹೊಸದಿಲ್ಲಿ: ಚಂಡೀಗಢ‌ ಮೇಯರ್‌ ಚುನಾವಣೆಗೆ ಸಂಬಂಧಿಸಿದ ಎಲ್ಲ ಮತಪತ್ರಗಳು ಮತ್ತು ಮತ ಎಣಿಕೆಯ ಸಂಪೂರ್ಣ ವೀಡಿಯೋ ರೆಕಾರ್ಡಿಂಗ್‌ ಅನ್ನು ನಾಳೆಯೇ ನಮ್ಮ ಮುಂದೆ ಹಾಜರುಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ.

Advertisement

ಜತೆಗೆ ಈ ಎಲ್ಲ ದಾಖಲೆಗಳನ್ನು ದಿಲ್ಲಿಗೆ ಸುರಕ್ಷಿತವಾಗಿ ತರಲು ನ್ಯಾಯಾಂಗ ಅಧಿಕಾರಿಯೊಬ್ಬರನ್ನು ನೇಮಕ ಮಾಡುವಂತೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ಗೆ ಸುಪ್ರೀಂ ಕೋರ್ಟ್‌ ನ್ಯಾಯಪೀಠ ಸೂಚಿಸಿದೆ. ಅಲ್ಲದೇ, ಆ ಅಧಿಕಾರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಚಂಡೀಗಢ ಆಡಳಿತಕ್ಕೆ ನಿರ್ದೇಶನ ನೀಡಿದೆ. ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳದ ನಿಷ್ಪಕ್ಷ ಚುನಾವಣಾ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದೂ ಹೇಳಿದೆ.

ಇದೇ ವೇಳೆ, ಈ ಪ್ರಕರಣದ ವಿಚಾರಣೆಯನ್ನು ಮಂಗಳವಾರದ ಬದಲು ಬೇರೆ ದಿನ ನಡೆಸಬೇಕು ಎಂಬ ಕೋರಿಕೆಯನ್ನು ತಿರಸ್ಕರಿಸಿದ ಸಿಜೆಐ ಡಿ.ವೈ. ಚಂದ್ರಚೂಡ್‌, “ಕುದುರೆ ವ್ಯಾಪಾರ ನಡೆಯುತ್ತಿರುವ’ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಚುನಾವಣಾಧಿಕಾರಿ ಬೆವರಿಳಿಸಿದ ಪೀಠ!
ಮತಪತ್ರಗಳಿಗೆ ಮಾರ್ಕ್‌ ಮಾಡಿದ್ದೇಕೆ ಎಂದು ಸಿಜೆಐ ಪ್ರಶ್ನಿಸಿದಾಗ, ಮಾಸಿಹ್‌ “ಮತಪತ್ರಗಳು ಮಿಕ್ಸ್‌ ಆಗದಿರಲೆಂದು ಹಾಗೆ ಮಾಡಿದೆ’ ಎಂದರು. ಇದರಿಂದ ಸಿಡಿಮಿಡಿಗೊಂಡ ಪೀಠ, “ಹಾಗಾದರೆ ನೀವು ಮಾರ್ಕ್‌ ಮಾಡಿದ್ದು ಸತ್ಯವೇ? ನಿಮ್ಮ ವಿರುದ್ಧ ವಿಚಾರಣೆ ನಡೆಯ
ಲೇಬೇಕು’ ಎಂದು ಹೇಳಿತು.

ಏನಿದು ಪ್ರಕರಣ?
ಜ. 30ರಂದು ಮೇಯರ್‌ ಚುನಾವಣೆ ನಡೆದಿತ್ತು
ಆಪ್‌ನ 8 ಮತಗಳನ್ನು ಅಸಿಂಧು ಎಂದು ಚುನಾವಣಾಧಿಕಾರಿ ಘೋಷಿಸಿದ್ದರು
ಇದರಿಂದ ಆಪ್‌ ಅಭ್ಯರ್ಥಿಗೆ 12, ಬಿಜೆಪಿ ಅಭ್ಯರ್ಥಿಗೆ 16 ಮತಗಳು ಬಂದವು
ಅಧಿಕಾರಿಯೇ ಮತಪತ್ರ ವಿರೂಪಗೊಳಿಸಿದ್ದಾಗಿ ಆರೋಪಿಸಿ ಆಪ್‌ ಕೋರ್ಟ್‌ ಮೆಟ್ಟಿಲೇರಿತ್ತು

Advertisement
Advertisement

Udayavani is now on Telegram. Click here to join our channel and stay updated with the latest news.

Next