Advertisement

ಚಂಡೀಗಢ: ಅತ್ಯಾಚಾರಿಗಳು ವಯಸ್ಕರೆಂದು ಸಾಬೀತುಪಡಿಸಿದ ತಂದೆ

11:11 AM Jul 11, 2020 | sudhir |

ಚಂಡೀಗಢ: ಕೋರ್ಟಿನ ಮುಂದೆ ಅಪ್ರಾಪ್ತರು ಎಂದು ಸುಳ್ಳು ಜನನಪತ್ರ ನೀಡಿ ಶಿಕ್ಷೆಯಿಂದ ನುಣುಚಿಕೊಂಡಿದ್ದ ದುರುಳರಿಗೆ, ಯುವತಿಯ ತಂದೆ ತಕ್ಕ ಶಾಸ್ತಿ ಮಾಡಿದ ಘಟನೆ ಚಂಡೀಗಢದಲ್ಲಿ ನಡೆದಿದೆ.

Advertisement

2019ರಲ್ಲಿ ಟೆನಿಸ್‌ ತರಬೇತಿ ವೇಳೆ ಮಗಳ ಮೇಲೆ ಡೇವಿಸ್‌ ಕಪ್‌ ಆಟಗಾರ ಸೇರಿದಂತೆ ನಾಲ್ವರು ಲೈಂಗಿಕ ದೌರ್ಜನ್ಯ ಎಸಗಿದ್ದರು. ಆದರೆ ಕೋರ್ಟಿನ ಮುಂದೆ ಸುಳ್ಳು ಜನನ ಪತ್ರ ತೋರಿಸಿ ಬಚಾವಾಗಿದ್ದರು. ತಂದೆ ಆ ನಾಲ್ವರು ಆರೋಪಿಗಳು ಓದಿದ ಶಾಲೆಗಳಿಗೆ ಭೇಟಿ ನೀಡಿ, ನಿಖರ ಜನನ ದಿನಾಂಕ ತಿಳಿದು, ಈಗ ಮೂಲ ಸರ್ಟಿಫಿಕೇಟ್‌ಗಳನ್ನು ಕೋರ್ಟಿನ ಮುಂದೆ ಸಲ್ಲಿಸಿದ್ದಾರೆ.

ಆರೋಪಿಗಳು ಕೋರ್ಟಿನ ಮುಂದೆ ಸಲ್ಲಿಸಿದ್ದ ಜನನ ಪ್ರಮಾಣಪತ್ರಕ್ಕೂ, ಮೂಲ ಸರ್ಟಿಫಿಕೇಟ್‌ಗಳಿಗೂ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಲೈಂಗಿಕ ದೌರ್ಜನ್ಯ ಎಸಗಿದ ಎಲ್ಲರೂ 18 ವರ್ಷ ಮೇಲ್ಪಟ್ಟವರು ಎಂಬುದು ಸ್ಪಷ್ಟವಿದೆ. ಈ ನಕಲು ಸರ್ಟಿಫಿಕೇಟ್‌ ಸೃಷ್ಟಿಯ ಹಿಂದೆ ಚಂಡೀಗಢ ಲಾನ್‌ ಟೆನಿಸ್‌ ಅಸೋಸಿಯೇಶನ್‌ (ಸಿಎಲ್‌ಟಿಎ) ಕೈವಾಡವಿದೆ. ಆಟಗಾರರನ್ನು ರಕ್ಷಿಸಲು ಸಿಎಲ್‌ಟಿಎ ಈ ಮೋಸ ಎಸಗಿದೆ ಎಂದು ತಂದೆ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next