ಚಂಡೀಗಢ್: ಡ್ರಗ್ಸ್ ಚಟಕ್ಕೆ ಶರಣಾಗಿದ್ದ ಅಣ್ಣ ಹಾಗೂ ಆತನ ಗೆಳೆಯರು ಅತ್ಯಾಚಾರ ಎಸಗಿದ ಪರಿಣಾಮ 15 ವರ್ಷದ ಅಪ್ರಾಪ್ತ ಸಹೋದರಿ ಗರ್ಭಿಣಿಯಾಗಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.
ಸಂತ್ರಸ್ತೆ ಬಾಲಕಿಯನ್ನು ವಿಚಾರಿಸಿದ ವೇಳೆ, ಡ್ರಗ್ಸ್ ದಾಸನಾಗಿದ್ದ 19 ವರ್ಷದ ಅಣ್ಣ ಹಾಗೂ ಆತನ ಗೆಳೆಯರು ಹಲವಾರು ಬಾರಿ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾರೆ. ಈಕೆಯ ತಾಯಿಗೆ ದೃಷ್ಟಿದೋಷ ಇದ್ದಿರುವುದಾಗಿ ಹೇಳಿದ್ದಾರೆ.
9ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ಹೊಟ್ಟೆ ನೋವು ಎಂದು ಮನೆಯಲ್ಲಿ ತಿಳಿಸಿದಾಗ, ಈಕೆಯನ್ನು ಸೆಕ್ಟರ್ 22 ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಯನ್ನು ವೈದ್ಯರು ಪರೀಕ್ಷಿಸಿದಾಗ 8ತಿಂಗಳ ಗರ್ಭಿಣಿಯಾಗಿರುವುದು ಪತ್ತೆಯಾಗಿತ್ತು. ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಅಪ್ರಾಪ್ತೆ ಬಾಲಕಿಗೆ ಕೌನ್ಸೆಲಿಂಗ್ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಕೋವಿಡ್ 19 ಸೋಂಕು ಕೊಲ್ಲದಿದ್ರೂ “ತಾಪಮಾನ’ ಕೊಲ್ಲುತ್ತೆ: ವಿಶ್ವಸಂಸ್ಥೆ ಸದಸ್ಯ ರಾಷ್ಟ್ರ
ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮೊದಲ ಬಾರಿಗೆ ಸಹೋದರ ತನ್ನ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಹಲವಾರು ಬಾರಿ ದೈಹಿಕ ಸಂಪರ್ಕ ನಡೆಸಿದ್ದು, ನಂತರ ಆತನ ಗೆಳೆಯ ಕೂಡಾ ಅತ್ಯಾಚಾರ ಎಸಗಿದ್ದ. ಅಲ್ಲದೇ ಈಕೆಯ ಮನೆಯ ಬಾಡಿಗೆಗೆ ಇದ್ದ 51ವರ್ಷದ ವ್ಯಕ್ತಿ ಕೂಡಾ ಅತ್ಯಾಚಾರ ಎಸಗಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.