Advertisement

ನ್ಯೂ ಇಯರ್‌ಗೆ ಪಾರ್ಟಿ ಫ್ರೀಕ್‌

02:43 PM Dec 28, 2020 | Suhan S |

ಹೊಸ ವರ್ಷವನ್ನು ಮತ್ತಷ್ಟು ರಂಗೇರಿಸಲು ಚಂದನ್‌ ಶೆಟ್ಟಿ ಒಂದು ವಿಡಿಯೋ ಆಲ್ಬಂವೊಂದನ್ನು ಹೊರತಂದಿದ್ದಾರೆ. ಅದು “ಪಾರ್ಟಿ ಫ್ರೀಕ್ .

Advertisement

ಹೌದು, ಹೀಗೊಂದು ಕಲರ್‌ಫ‌ುಲ್‌ ಆಲ್ಬಂ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋವನ್ನು ಸಖತ್‌ ಕಲರ್‌ಫ‌ುಲ್‌ ಹಾಗೂ ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ. ಯಾವುದೋ ಸ್ಟಾರ್‌ ಸಿನಿಮಾಗಳ ಹಾಡಿಗೆ ಕಮ್ಮಿ ಇಲ್ಲದಂತೆ ಆಲ್ಬಂ ಮೂಡಿಬಂದಿದೆ. ಚೈತನ್ಯ ಲಕಂಸಾನಿ ಇದರ ನಿರ್ಮಾಪಕರು. ಚಂದನ್‌ ಶೆಟ್ಟಿ ಸಂಗೀತ ನೀಡಿ, ಸಾಹಿತ್ಯ ಬರೆದು ಧ್ವನಿ ನೀಡಿ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ನಟಿ ನಿಶ್ವಿ‌ಕಾ ನಾಯ್ಡು ಕಲರ್‌ಫ‌ುಲ್‌ ಹಾಡಿನಲ್ಲಿ ಬಿಂದಾಸ್‌ ಸ್ಟೆಪ್‌ ಹಾಕಿದ್ದಾರೆ. ಅಷ್ಟೇ ಅಲ್ಲ ಚಂದನ್‌ ಶೆಟ್ಟಿ ಪತ್ನಿ ನಿವೇದಿತಾ ಗೌಡ ಸಹ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಧರ್ಮ ಕೂಡಾ ಈ ಹಾಡಿನ ಆರಂಭದಲ್ಲಿ ನೆಗೆಟಿವ್‌ ಶೇಡ್‌ನ‌ಲ್ಲಿ ದರ್ಶನ ನೀಡಿದ್ದಾರೆ.

ಇದನ್ನೂ ಓದಿ : ಹಾಫ್ ಮೊದಲರ್ಧ ಫಿನಿಶ್‌

ಆಲ್ಬಂಗೆ ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಅಜಿತ್‌ ಶ್ರೀರವಿ ಅವರ ವಸ್ತ್ರ ವಿನ್ಯಾಸ, ಮೋಹನ್‌ ನೃತ್ಯ ನಿರ್ದೇಶನವಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷದ ನ್ಯೂ ಇಯರ್‌ ಪಾರ್ಟಿ ಆಚರಣೆಗೆ ಸರ್ಕಾರ ಬ್ರೇಕ್‌ ಹಾಕಿದೆ. ಮನೆಯಲ್ಲಿಯೇ ಕುಟುಂಬದೊಟ್ಟಿಗೆ ಆಚರಿಸುವಂತೆ ಹೇಳಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು, ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಈ ಹಾಡನ್ನು ಚಿತ್ರೀಕರಿಸಲಾಗಿದ್ದು, ನಮ್ಮ ಹಾಡನ್ನು ಮನೆಯಲ್ಲಿಯೇ ಕೇಳಿ ಆನಂದಿಸುತ್ತ ಹೊಸ ವರ್ಷವನ್ನು ಬರಮಾಡಿಕೊಳ್ಳಿ ಎಂಬುದು ತಂಡದ ಮಾತು. ಯುನೈಟ್‌ ಆಡಿಯೋ ಮೂಲಕ ಆಲ್ಬಂ ರಿಲೀಸ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next