Advertisement

ಯುವ ದಸರಾ ವೇದಿಕೆಯಲ್ಲಿ ಎಂಗೇಜ್ ಆದ ಚಂದನ್ ಶೆಟ್ಟಿ- ನಿವೇದಿತಾ ಜೋಡಿ

10:43 AM Oct 06, 2019 | keerthan |

ಮೈಸೂರು: ಕನ್ನಡದ ಪ್ರಸಿದ್ದ ರಾಪ್ ಸಿಂಗರ್ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ‘ಗೊಂಬೆ’ ನಿವೇದಿತಾ ಈಗ ಎಂಗೇಜ್ ಆಗಿದ್ದಾರೆ. ಶುಕ್ರವಾರ ರಾತ್ರಿ ಯುವ ದಸರಾ ಕಾರ್ಯಕ್ರಮ ವೇದಿಕೆಯಲ್ಲಿ ಚಂದನ್ ಗೆಳತಿ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದ್ದಾರೆ.

Advertisement

ಯುವ ದಸರಾದ ಚಂದನ್ ಶೆಟ್ಟಿ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇದಿಕೆಯಲ್ಲಿ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದರು. ಐ ಲವ್ ಯೂ, ವಿಲ್ ಯೂ ಮ್ಯಾರಿ ಮಿ ಎಂದ ಚಂದನ್ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ನಿವೇದಿತಾಗೆ ಉಂಗುರ ತೊಡಿಸಿದ್ದಾರೆ.

ಚಂದನ್ ಶೆಟ್ಟಿ ಮತ್ತು ನಿವೇದಿತಾ ಒಂದೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಬ್ಬರೂ 105 ದಿನಗಳನ್ನು ಬಿಗ ಬಾಸ್ ಮನೆಯಲ್ಲಿ ಕಳೆದಿದ್ದರು.

ವಿದೇಶದ ಯಾವುದಾದರೂ ಸುಂದರ ಸ್ಥಳದಲ್ಲಿ ಪ್ರಪೋಸ್ ಮಾಡಬೇಕೆಂದುಕೊಂಡಿದ್ದೆ. ಆದರೆ ನಾನು ಬೆಳೆದ ಮೈಸೂರಿನಲ್ಲಿ, ಅಭಿಮಾನಿಗಳ ಸಮ್ಮುಖದಲ್ಲಿ ಹೇಳುವುದು ಉತ್ತಮ ಎಂದು ವೇದಿಕೆಯಲ್ಲೇ ಪ್ರಪೋಸ್ ಮಾಡಿದೆ ಎಂದು ಚಂದನ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next