Advertisement

ಚಂದ್ರನ ಮೇಲೆ ಭೂಮಿ ಖರೀದಿ

06:00 AM Jun 28, 2018 | |

ಮುಂಬೈ: ನೈಜ ಜಗತ್ತಿನ ಚಂದ್ರಮಾಮನ ಕತೆ ಇದು! ಹೌದು. ಅಜ್ಜ-ಅಜ್ಜಿ ಸಾಮಾನ್ಯವಾಗಿ ಮೊಮ್ಮಕ್ಕಳಿಗೆ ಚಂದಮಾಮನ ಕತೆ ಹೇಳಿ, ಮುಗ್ಧ ಮನಸ್ಸಿನಲ್ಲಿ ಸುಂದರ ಜಗತ್ತೂಂದನ್ನು ಸೃಷ್ಟಿಸಿಬಿಡುತ್ತಾರೆ. ಇದು ಕಾಲ್ಪನಿಕ ಕಥೆಯಲ್ಲ.  ಬಾಲಿವುಡ್‌ ನಟ, ಉದ್ಯಮಿ ಸುಶಾಂತ್‌ ಸಿಂಗ್‌ ರಜಪೂತ್‌ ಚಂದ್ರನ ಅಂಗಳದಲ್ಲಿ ಜಮೀನು ಖರೀದಿಸಿದ್ದಾರೆ. 

Advertisement

ಅಂತಾರಾಷ್ಟ್ರೀಯ ಲುನಾರ್‌ ಲ್ಯಾಂಡ್ಸ್‌ ರಿಜಿಸ್ಟ್ರಿ ಮೂಲಕ ಚಂದ್ರನ ಮೇಲೆ ಜಾಗ ಖರೀದಿಸಿದ್ದಾರೆ. ಚಂದ್ರನ ಮೇಲಿನ ಮರೆ ಮಸ್ಕೊವಿಯೆನ್ಸ್‌ ಅಥವಾ ಸೀ ಆಫ್ ಮಸ್ಕೊವಿ ಹೆಸರಿನ ವಲಯದಲ್ಲಿ ಸುಶಾಂತ್‌ಗೆ ಜಮೀನು ನೀಡಲಾಗಿದೆ. ಬಾಲಿವುಡ್‌ನ‌ ಖ್ಯಾತ ನಟ ಶಾರೂಖ್‌ ಖಾನ್‌ 2009ರಲ್ಲಿಯೇ ಚಂದ್ರನ ಮೇಲಿನ ಜಾಗದ ಒಡೆಯರಾಗಿದ್ದರು. ಆದರೆ, ಅವರ ಆಸ್ಟ್ರೇಲಿಯಾ ಅಭಿಮಾನಿಯೊಬ್ಬರು ಹುಟ್ಟುಹಬ್ಬಕ್ಕೆ ಚಂದ್ರನ ಮೇಲಿನ ಜಾಗ ಖರೀದಿಸಿ ಉಡುಗೊರೆಯಾಗಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next