Advertisement
ಹೊರಿ ಹಬ್ಬದ ಅಖಾಡ ಯಾವುದೇ ಇರಲಿ, ಚಾಮುಂಡಿ ಎಕ್ಸ್‌ಪ್ರೆಸ್ ಬಂದಿತೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಉತ್ಸಾಹ. ಅಂತಹ ಅಭಿಮಾನಿಗಳ ಪಡೆ ಹೊಂದಿರುವ ಚಿಕ್ಕಲಿಂಗದಹಳ್ಳಿಯ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯನ್ನು ಪ್ರಸನ್ನ ಕುಮಾರ್ ಅವರು 18 ಲಕ್ಷ ರೂ., ಗೆ ಖರೀದಿ ಮಾಡಿದ್ದಾರೆ.
Related Articles
Advertisement
ಜನಪದ ಕ್ರೀಡೆಯಾಗಿರುವ ಹೋರಿ ಹಬ್ಬ ಉಳಿಯಬೇಕು. ತಾವು ಸಹ ಹೋರಿ ಹಬ್ಬದ ಅಭಿಮಾನಿಯಾಗಿದ್ದು, ಈಗಾಗಲೇ ತಮ್ಮ ಬಳಿ ಏಕದಂತ, ರೇಣುಕಾಂಬ ಎಕ್ಸ್‌ಪ್ರೆಸ್, ಸಮನವಳ್ಳಿ ಅಧ್ಯಕ್ಷ, ಸಮನವಳ್ಳಿ ಸಾಹುಕಾರ ಎಂಬ ಹೋರಿಗಳಿವೆ. ತಮ್ಮ ಪುತ್ರ ಪರೀಕ್ಷಿತ್ ಕೆಲ ದಿನಗಳಿಂದ ಆಟವಾಡುವಾಗ ಚಾಮುಂಡಿ ಎಕ್ಸ್‌ಪ್ರೆಸ್ ಎಂದು ಆಟವಾಡುತ್ತಿದ್ದನು. ಅಷ್ಟರಲ್ಲೇ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿ ಮಾರಾಟಕ್ಕಿರುವ ವಿಷಯ ತಿಳಿದು ಖರೀದಿಸಿದ್ದೇನೆ. ತಮ್ಮ ಪುತ್ರನ ಮೂಲಕ ಭಗವಂತ ನುಡಿಸಿದ್ದಾನೆ ಎಂದು ಭಾವಿಸುತ್ತೇನೆ. ಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯು ಇನ್ನು ಮುಂದೆ ಸಮನವಳ್ಳಿ ಚಾಮುಂಡಿ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಅಖಾಡಕ್ಕೆ ಇಳಿಯಲಿದೆ. ಹೋರಿ ನೋಡಲು ತಾಲೂಕು ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ನಿತ್ಯ ನೂರಾರು ಮಂದಿ ಆಗಮಿಸುತ್ತಿದ್ದಾರೆ. ಹೋರಿಯಿಂದ ಮತ್ತಷ್ಟು ಪ್ರಚಾರವಾಗುತ್ತಿದ್ದೇನೆ. ನನ್ನ ಮನೆಗೆ ಆಗಮಿಸಿದ ಅದೃಷ್ಟ ಲಕ್ಷ್ಮಿ ಎಂದೇ ಭಾವಿಸುತ್ತೇನೆ ಎನ್ನುತ್ತಾರೆ ಹೋರಿ ಮಾಲೀಕ ಪ್ರಸನ್ನ ಕುಮಾರ್ ಸಮನವಳ್ಳಿ ಅವರು.
ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯು ತಾಲೂಕಿಗೆ ಆಗಮಿಸಿರುವುದು ಹೋರಿ ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.