Advertisement

ಚಾಂಪಿಯನ್ಸ್‌ ಟ್ರೋಫಿ : ಇಂಗ್ಲೆಂಡ್‌ ಅಜೇಯ; ಬಾಂಗ್ಲಾ  ಸೆಮಿಗೆ

03:45 AM Jun 11, 2017 | Team Udayavani |

ಬರ್ಮಿಂಗಂ: ಚಾಂಪಿಯನ್ಸ್‌ ಟ್ರೋಫಿ “ಎ’ ವಿಭಾಗದ ಬಹು ನಿರೀಕ್ಷಿತ ಕೊನೆಯ ಲೀಗ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಡಿ-ಎಲ್‌ ನಿಯಮದಂತೆ ಆಸ್ಟ್ರೇಲಿಯವನ್ನು 40 ರನ್ನುಗಳಿಂದ ಸೋಲಿಸಿದೆ. ಈ ಸೋಲಿನೊಂದಿಗೆ 2 ಅಂಕಗಳಿಗೆ ಸೀಮಿತಗೊಂಡ ಆಸೀಸ್‌ ಕೂಟದಿಂದ ಹೊರಬಿದ್ದಿದ್ದು, 3 ಅಂಕ ಹೊಂದಿರುವ ಬಾಂಗ್ಲಾದೇಶ ದ್ವಿತೀಯ ಸ್ಥಾನಿಯಾಗಿ ಸೆಮಿಫೈನಲ್‌ ಪ್ರವೇಶಿಸಿದೆ.

Advertisement

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 9 ವಿಕೆಟಿಗೆ 277 ರನ್‌ ಗಳಿಸಿತು. ಇಂಗ್ಲೆಂಡ್‌ 40.2 ಓವರ್‌ಗಳಲ್ಲಿ 4ಕ್ಕೆ 240 ರನ್‌ ಗಳಿಸಿದ್ದಾಗ ಮಳೆ ಬಂದು ಪಂದ್ಯ ರದ್ದುಗೊಂಡಿತು. ಆಗ ಡಿ-ಎಲ್‌ ನಿಯಮದಂತೆ ಇಂಗ್ಲೆಂಡ್‌ 201 ಗಳಿಸಿದರೆ ಸಾಕಿತ್ತು. ಪಂದ್ಯ ನಿಂತಾಗ ಬೆನ್‌ ಸ್ಟೋಕ್ಸ್‌ 102 ರನ್‌ ಬಾರಿಸಿ ಅಜೇಯರಾಗಿದ್ದರು. ಮಾರ್ಗನ್‌ 87 ರನ್‌ ಮಾಡಿದರು.

ಆಸ್ಟ್ರೇಲಿಯಕ್ಕೆ ಆರಂಭಕಾರ ಆರನ್‌ ಫಿಂಚ್‌ (68), ನಾಯಕ ಸ್ಟೀವ್‌ ಸ್ಮಿತ್‌ (56) ಹಾಗೂ ಮಧ್ಯಮ ಸರದಿಯ ಸ್ಫೋಟಕ ಬ್ಯಾಟ್ಸ್‌ಮನ್‌ ಟ್ರ್ಯಾವಿಸ್‌ ಹೆಡ್‌ (ಔಟಾಗದೆ 71) ನೆರವಾದರು. 

ಇಂಗ್ಲೆಂಡ್‌ ಬೌಲಿಂಗ್‌ ಸರದಿಯಲ್ಲಿ ಮಿಂಚಿದವರು ವೇಗಿ ಮಾರ್ಕ್‌ ವುಡ್‌. 33ಕ್ಕೆ 4 ವಿಕೆಟ್‌ ಹಾರಿಸಿದ ವುಡ್‌ ಪಾಲಿಗೆ ಇದು ಜೀವನಶ್ರೇಷ್ಠ ಬೌಲಿಂಗ್‌ ಸಾಧನೆಯಾಗಿದೆ. ಲೆಗ್‌ಸ್ಪಿನ್ನರ್‌ ಆದಿಲ್‌ ರಶೀದ್‌ ಕೂಡ 4 ವಿಕೆಟ್‌ ಕಿತ್ತರು.
 
ವಾರ್ನರ್‌-ಫಿಂಚ್‌ 7.2 ಓವರ್‌ಗಳಲ್ಲಿ 40 ರನ್‌ ಗಳಿಸಿ ಆಸ್ಟ್ರೇಲಿಯಕ್ಕೆ ಸಾಮಾನ್ಯ ಆರಂಭ ಒದಗಿಸಿದರು. ಆಗ ವಾರ್ನರ್‌ (21) ವುಡ್‌ ಎಸೆತದಲ್ಲಿ ಕೀಪರ್‌ ಬಟ್ಲರ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿರು. ಫಿಂಚ್‌-ಸ್ಮಿತ್‌ ಜೋಡಿಯಿಂದ ದ್ವಿತೀಯ ವಿಕೆಟಿಗೆ 96 ರನ್‌ ಒಟ್ಟುಗೂಡಿತು. ಫಿಂಚ್‌ 64 ಎಸೆತಗಳಿಂದ 68 ರನ್‌ (8 ಬೌಂಡರಿ), ಸ್ಮಿತ್‌ 77 ಎಸೆತ ಎದುರಿಸಿ 56 ರನ್‌ (5 ಬೌಂಡರಿ) ಹೊಡೆದರು. ಇವರಿಬ್ಬರ ನಿರ್ಗಮನದ ಬಳಿಕ ಹೆಡ್‌ ಬಿರುಸಿನ ಆಟಕ್ಕೆ ಇಳಿದರು. ಅವರ ಅಜೇಯ 71 ರನ್‌ 64 ಎಸೆತ ಗಳಿಂದ ಬಂತು (5 ಬೌಂಡರಿ, 2 ಸಿಕ್ಸರ್‌).

Advertisement

Udayavani is now on Telegram. Click here to join our channel and stay updated with the latest news.

Next