Advertisement
“ಭಾರತ-ಪಾಕಿಸ್ಥಾನ ನಡುವಿನ ಪಂದ್ಯವೀಗ ನಿಕಟ ಸ್ಪರ್ಧೆಯಾಗಿ ಉಳಿದಿಲ್ಲ. ಭಾರತ ಪಾಕಿಸ್ಥಾನಕ್ಕಿಂತ ಎಷ್ಟೋ ಮುಂದೆ ಹೋಗಿದೆ. ಒಂದು ಕಡೆ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಅವರಂಥ ಆಟಗಾರರಿದ್ದಾರೆ. ಆದರೆ ಪಾಕಿಸ್ಥಾನದ ಸರದಿಯಲ್ಲಿ ಇವರಿಗೆ ಸರಿಸಾಟಿಯಾಗುವಂಥ ಬ್ಯಾಟ್ಸ್‌ಮನ್‌ಗಳೇ ಇಲ್ಲ…’ ಎನ್ನುವ ಮೂಲಕ ಬಶೀರ್ ಟೀಮ್ ಇಂಡಿಯಾಕ್ಕೆ ಬೆಂಬಲ ವ್ಯಕ್ತಪಡಿಸಿದರು.
“ಒಂದು ಕಾಲವಿತ್ತು. ಜಾವೇದ್ ಮಿಯಾಂದಾದ್, ವಾಸಿಮ್ ಅಕ್ರಮ್, ವಕಾರ್ ಯೂನಿಸ್ ಅವರಂಥ ಘಟಾನುಘಟಿ ಆಟಗಾರರು ಪಾಕ್ ತಂಡದಲ್ಲಿದ್ದರು. ಈಗ ನನಗೆ ಪಾಕ್ ತಂಡದ ಬಹುತೇಕ ಆಟಗಾರರ ಹೆಸರೇ ತಿಳಿದಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸುಲಭ ಜಯ ಸಾಧಿಸಬಹುದು…’ ಎಂಬುದಾಗಿ ಹೇಳಿದರು. ಬಶೀರ್ ಕಳೆದ 6 ವರ್ಷಗಳಿಂದ ಭಾರತ-ಪಾಕಿಸ್ಥಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಸ್ಟೇಡಿಯಂಗೆ ತಪ್ಪದೇ ಆಗಮಿಸುತ್ತಿದ್ದಾರೆ. ಆಗ ಅವರು ಪಾಕಿಸ್ಥಾನಕ್ಕೇ ಬೆಂಬಲ ಸೂಚಿಸುತ್ತಿದ್ದರು.
Related Articles
ಭಾರತ-ಪಾಕಿಸ್ಥಾನ ನಡುವಿನ 2011ರ ಮೊಹಾಲಿ ವಿಶ್ವಕಪ್ ಸೆಮಿ ಫೈನಲ್ ಬಶೀರ್ ವೀಕ್ಷಿಸಿದ ಮೊದಲ ಪಂದ್ಯ. ಆದರೆ ಈ ಬಾರಿ ಕಾರಣಾಂತರಗಳಿಂದ ಜೂ. 4ರ ಚಾಂಪಿಯನ್ಸ್ ಟ್ರೋಫಿ ಪಂದ್ಯದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ತಾನೀಗ ಪಾಕಿಸ್ಥಾನ ಕ್ಕಿಂತ ಭಾರತವನ್ನೇ ಹೆಚ್ಚು ಪ್ರೀತಿಸುತ್ತಿರುವುದಾಗಿಯೂ ಹೇಳಿದರು.
Advertisement
“ಪ್ರತಿ ವರ್ಷವೂ ನಾನು ಭಾರತಕ್ಕೆ ಪಯಣಿಸುವ ಸ್ಥಿತಿಯನ್ನು ಮತ್ತು ಪಾಕಿಸ್ಥಾನಕ್ಕೆ ಮರಳಲಾಗದ ಸ್ಥಿತಿಗೆ ಮುಟ್ಟಿದ್ದೇನೆ. ನನಗೆ ಪಾಕಿಸ್ಥಾನಕ್ಕಿಂತ ಭಾರತವೇ ಹೆಚ್ಚು ಸುರಕ್ಷಿತ ಅನ್ನಿಸುತ್ತಿದೆ…’ ಎಂದು ಭಾರತದ ಮೇಲಿನ ಅಭಿಮಾನವನ್ನು ಹೊರಗೆಡಹಿದ್ದಾರೆ 64ರ ಹರೆಯದ ಬಶೀರ್.