Advertisement
ಲಕ್ಷ್ಯ ಸೇನ್ “ಬೆಲ್ಜಿಯನ್ ಇಂಟರ್‌ನ್ಯಾಶನಲ್ ಚಾಲೆಂಜ್ ಬ್ಯಾಡ್ಮಿಂಟನ್’ ಕೂಟದ ಫೈನಲ್ ಹಣಾಹಣಿಯಲ್ಲಿ ದ್ವಿತೀಯ ಶ್ರೇಯಾಂಕದ ಡೆನ್ಮಾರ್ಕ್ ಆಟಗಾರ ವಿಕ್ಟರ್ ಸ್ವೆಂಡ್ಸೆನ್ ವಿರುದ್ಧ 21-14, 21-11 ನೇರ ಗೇಮ್‌ಗಳ ಜಯ ಸಾಧಿಸಿದರು. ಉತ್ತರಾಖಂಡ್‌ನ ಅಲ್ಮೋರಾರಾದ 18ರ ಹರೆಯದ ಪ್ರತಿಭಾನ್ವಿತ ಶಟ್ಲರ್ ಲಕ್ಷ್ಯ ಸೇನ್ ಈ ವರ್ಷ ಗೆದ್ದ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿದೆ.
ಮೊದಲ ಗೇಮ್‌ನ ಮೊದಲ ಅವಧಿಯ ಲ್ಲಷ್ಟೇ ಸ್ವೆಂಡ್ಸೆನ್ ಮೇಲುಗೈ ಸಾಧಿಸಿದ್ದನ್ನು ಬಿಟ್ಟರೆ, ಸ್ಪರ್ಧೆಯ ಉಳಿದೆಲ್ಲ ಅವಧಿಯಲ್ಲೂ ಭಾರ ತೀಯನ ಆಟಗಾರನದೇ ಪಾರುಪತ್ಯವಾಗಿತ್ತು. ಸೌರಭ್ ವರ್ಮ ಸಾಹಸ
“ವಿಯೆಟ್ನಾಮ್ ಓಪನ್ ಬಿಡಬ್ಲ್ಯುಎಫ್ ಟೂರ್ ಸೂಪರ್ 100′ ಕೂಟದ ಫೈನಲ್‌ನಲ್ಲಿ ದ್ವಿತೀಯ ಶ್ರೇಯಾಂಕದ ಸೌರಭ್ ವರ್ಮ 3 ಗೇಮ್‌ಗಳ ಹೋರಾಟ ನಡೆಸಬೇಕಾಯಿತು. ಇಲ್ಲಿ ಚೀನದ ಸುನ್ ಫೀ ಕ್ಸಿಯಾಂಗ್ ವಿರುದ್ಧ 21-12, 17-21, 21-14 ಅಂತರದಿಂದ ಗೆದ್ದರು.
Related Articles
Advertisement
ವರ್ಷದ 3ನೇ ಪ್ರಶಸ್ತಿಇದು ಸೌರಭ್ ವರ್ಮ 2019ರಲ್ಲಿ ಗೆದ್ದ 3ನೇ ಬ್ಯಾಡ್ಮಿಂಟನ್ ಪ್ರಶಸ್ತಿ. ಇದಕ್ಕೂ ಮೊದಲು ಹೈದರಾಬಾದ್ ಓಪನ್ ಮತ್ತು ಸ್ಲೊವೇನಿಯನ್ ಇಂಟರ್‌ನ್ಯಾಶನಲ್ ಕೂಟದಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 38ನೇ ಸ್ಥಾನದಲ್ಲಿರುವ ಸೌರಭ್ ವರ್ಮ, ಈ ವರ್ಷದ ರಾಷ್ಟ್ರೀಯ ಚಾಂಪಿಯನ್ ಕೂಡ ಹೌದು. ಇವರ ಮುಂದಿನ ಟೂರ್ನಿ “ಕೊರಿಯಾ ಓಪನ್ ವರ್ಲ್ಡ್ ಟೂರ್ ಸೂಪರ್ 500′. ಇದು ಸೆ. 24ರಿಂದ 29ರ ತನಕ ನಡೆಯಲಿದೆ. 26ರ ಹರೆಯದ ಮಧ್ಯಪ್ರದೇಶದವ ರಾದ ಸೌರಭ್ ವರ್ಮ ಕಳೆದ ವರ್ಷವೂ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟ ಗಳಲ್ಲಿ ಸಂಚಲನ ಮೂಡಿಸಿದ್ದರು. 2018ರಲ್ಲಿ ಡಚ್ ಓಪನ್ ಮತ್ತು ಕೊರಿಯಾ ಓಪನ್ ಪ್ರಶಸ್ತಿಗಳು ಸೌರಭ್ ಪಾಲಾಗಿದ್ದವು. ಮ್ಯಾನ್ಮಾರ್ ಪ್ರಶಸ್ತಿ ಗೆದ್ದ ಕೌಶಲ್ ಧರ್ಮಾಮರ್
ಭಾರತಕ್ಕೆ ದಿನದ 3ನೇ ಬ್ಯಾಡ್ಮಿಂಟನ್ ಪ್ರಶಸ್ತಿ ತಂದಿತ್ತವರು ಮುಂಬಯಿಯ ಕೌಶಲ್ ಧರ್ಮಾಮರ್. 23ರ ಹರೆಯದ ಅವರು ಮ್ಯಾನ್ಮಾರ್ ಇಂಟರ್‌ನ್ಯಾಶನಲ್ ಸೀರಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಎನಿಸಿದರು. ಫೈನಲ್‌ನಲ್ಲಿ ಕೌಶಲ್ ಇಂಡೋನೇಶ್ಯದ ಕರೊನೊ ಕರೊನೊ ವಿರುದ್ಧ ಒಂದು ಗಂಟೆ ಕಾಲ ನಡೆದ ಜಿದ್ದಾಜಿದ್ದಿ ಕಾದಾಟದಲ್ಲಿ 18-21, 21-14, 21-11 ಅಂತರದ ಜಯ ಸಾಧಿಸಿದರು. ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ 187ನೇ ಸ್ಥಾನದಲ್ಲಿರುವ ಕೌಶಲ್, “ಉದಯ ಪವಾರ್ ಬ್ಯಾಡ್ಮಿಂಟನ್ ಅಕಾಡೆಮಿ’ಯಲ್ಲಿ ಟ್ರೇನಿ ಆಗಿದ್ದಾರೆ. ಕಳೆದ ವರ್ಷ ಹ್ಯಾಟ್‌ಝರ್ ಇಂಟರ್‌ನ್ಯಾಶನಲ್ ಪ್ರಶಸ್ತಿಯನ್ನು ಜಯಿಸಿದ್ದರು.